ನಿರಂತರ ಮಳೆಯ ಪರಿಣಾಮ ಮನೆ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಹಾಲಿಂಗೇಶ್ವರ ನಗರದಲ್ಲಿ ಸಂಭವಿಸಿದೆ.
ಮಹಾಲಿಂಗೇಶ್ವರ ನಗರದ ಕೀರ್ತಿಕಾ ನಾಗೇಶ ಪೂಜಾರಿ (3) ಎಂಬ ಬಾಲಕಿ ಗೋಡೆ ಕುಸಿದು ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಕೀರ್ತಿಕಾ ತಾಯಿ ರೇಷ್ಮಾ, ಸಹೋದರು ಖುಷಿಗೂ ಗಂಭೀರ ಗಾಯವಾಗಿದೆ. ಮನೆಯಲ್ಲಿ ಮಲಗಿದ್ದಾಗ ಪಕ್ಕದ ಮನೆಯ ಗೋಡೆ ನಾಗೇಶ ಪೂಜಾರಿ ಮನೆ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಗೋಕಾಕ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ವಾರವೂ ಗೋಕಾಕ ನಗರದ ವ್ಯಕ್ತಿಯೋರ್ವ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದರು. ಈಗ ಗೋಕಾಕ ನಗರದಲ್ಲಿ ಮಹಾ ಮಳೆಗೆ ಎರಡನೇ ಬಲಿಯಾಗಿದೆ. ಸ್ಥಳಕ್ಕೆ ನಗರಸಭೆ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.