ಖ್ಯಾತ ಕ್ರಿಕೆಟಿಗ, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸಹೋದರ ಹಾಗೂ ಅವರ ಹೆಂಡತಿ ಒಡಿಶಾದ ಪುರಿಯ ಬೀಚ್ನಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಆಗಿರುವ ಸೌರವ್ ಗಂಗೂಲಿಯವರ ಸಹೋದರ ಸ್ನೇಹಶಿಶ್ ಗಂಗೂಲಿ ಹಾಗೂ ಇವರ ಹೆಂಡತಿ ಅರ್ಪಿತಾ ಅವರೊಂದಿಗೆ ಪ್ರವಾಸಕ್ಕಾಗಿ ಒಡಿಶಾದ ಪುರಿ ಬೀಚ್ಗೆ ಹೋಗಿದ್ದರು. ಈ ವೇಳೆ ಸಮುದ್ರದಲ್ಲಿ ವಾಟರ್ ಸ್ಪೋರ್ಟ್ಸ್ ಗೇಮ್ನಲ್ಲಿ ಸ್ಪೀಡ್ ಬೋಟ್ ಆಡುವಾಗ, ಅದು ಮುಗುಚಿ ಬಿದ್ದಿದೆ. ನೀರಿನಲ್ಲಿ ಜೀವ ಭಯದಿಂದ ರಕ್ಷಣೆಗಾಗಿ ಇಬ್ಬರು ಮುಳುಗುತ್ತ ಕೂಗುತ್ತಿದ್ದರು. ಆಗ ತಕ್ಷಣ ಈಜು ರಕ್ಷಣ ದಳದವರು ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಸ್ನೇಹಶಿಶ್ ಹಾಗೂ ಅವರ ಹೆಂಡತಿ ಅರ್ಪಿತಾರನ್ನು ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಅರ್ಪಿತಾ ಅವರು, ಬೋಟ್ನಲ್ಲಿ 10 ಪ್ರವಾಸಿಗರು ತೆರಳುವಂತಹದ್ದು, ಆದರೆ ಹಣದಾಸೆಗೆ ಅದರಲ್ಲಿ ಕೇವಲ 3,4 ಜನರಿಗಾಗಿ ಬೋಟ್ ಅನ್ನು ಸಮುದ್ರಕ್ಕೆ ಇಳಿಸಿದರು. ಗಾಳಿ ಹಾಗೂ ಸಮುದ್ರದ ಅಲೆಗಳ ಹೊಡೆತ ಜೋರಾಗಿದ್ದರಿಂದ ಹಗುರವಾಗಿದ್ದ ಬೋಟ್ ತಕ್ಷಣ ಮುಗುಚಿ ಬಿದ್ದಿದೆ. ಇದೇ ಕೊನೆಯ ಬೋಟ್ ಆಗಿದೆ ಎಂದು ಸಿಬ್ಬಂದಿ ಹೇಳಿದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದರೂ ಪರವಾಗಿಲ್ಲ ಬನ್ನಿ ಎಂದಿದ್ದರು. ಹೀಗಾಗಿ ಈ ಬೋಟ್ನಲ್ಲಿ ನಾವು ತೆರಳಿದ್ದೆವು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ ಅಂಡರ್ 19 ತಂಡ ಪ್ರಕಟ; ವೈಭವ್ ಸೂರ್ಯವಂಶಿ, ಆಯುಷ್‌ಗೆ ಸ್ಥಾನ
ಸಮಯಕ್ಕೆ ಸರಿಯಾಗಿ ಈಜು ರಕ್ಷಣ ದಳದವರು ಬಂದಿಲ್ಲದಿದ್ದರೆ ನಾವು ಜೀವಂತವಾಗಿ ಹೊರಗೆ ಬರುತ್ತಿರಲಿಲ್ಲ. ಈಗಲೂ ನಾನು ಆ ಘಟನೆಯಿಂದ ಹೊರ ಬರಲು ಆಗುತ್ತಿಲ್ಲ. ಇಂತಹ ಘಟನೆಯನ್ನು ನಾನು ಎಂದಿಗೂ ಎದುರಿಸಿರಲಿಲ್ಲ. ಆದರೆ ಒಂದು ವೇಳೆ ಬೋಟ್ನಲ್ಲಿ ನಿಗದಿತ ಪ್ರವಾಸಿಗರು ಇದ್ದಿದ್ದರೇ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ. ಪಶ್ಚಿಮ ಬಂಗಾಳಕ್ಕೆ ತೆರಳಿದ ಮೇಲೆ ಒಡಿಶಾ ಸಿಎಂ ಅವರಿಗೆ ಪತ್ರ ಬರೆದು, ಇಂತಹ ಬೋಟ್‌ಗಳನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
Sourav Ganguly’s brother Snehashish Ganguly, and his wife Arpita rescued in Puri beach after their speedboat capsizes pic.twitter.com/D5TLWDwT7T
— Abhishek Tripathi / अभिषेक त्रिपाठी (@abhishereporter) May 26, 2025