ಮಂಡ್ಯ ಜಿಲ್ಲೆ,ಕೃಷ್ಣರಾಜಪೇಟೆ ಶಾಸಕರಾದ ಎಚ್. ಟಿ. ಮಂಜು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಗೆ ಡೈರಿ ಕಾರ್ಯದರ್ಶಿಗಳು ಹೋಗುವಂತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಬೇರೆಯವರ ಬಳಿ ಹೇಳಿಸಿಕೊಳ್ಳುವಷ್ಟು ಅವಿವೇಕಿ ಅಲ್ಲ ಎಂದು ಸಿಡಿಮಿಡಿಗೊಂಡರು.
ಶಾಸಕರ ಕೆಡಿಪಿ ಸಭೆಗೆ ಮನ್ಮುಲ್ ಡಿಎಂ, ಎಂಡಿಸಿಸಿ ವ್ಯವಸ್ಥಾಪಕರು ಬರುತ್ತಾರೆ. ಗ್ರಾಪಂ ಕೆಡಿಪಿ ಸಭೆಗೆ ಸ್ಥಳೀಯ ಡೈರಿಯ ಕಾರ್ಯದರ್ಶಿಗಳು ಬರಬೇಕು ಎಂದು ಸರ್ಕಾರ 2019 ರಲ್ಲಿ ಆದೇಶ ನೀಡಿದೆ. ಗೋಂದಿಹಳ್ಳಿ ರೈತರು ತಿಂಗಳಲ್ಲಿ 24 ದಿನ ಹಾಲು ಫೇಲ್ ಆಗಿರುವುದಾಗಿ ತಿಳಿಸಿದ್ದರಿಂದ ಮಾದಾಪುರ ಗ್ರಾಪಂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಆಲಿಸಿದ್ದೀನಿ. ಇದಕ್ಕೆ ಮನ್ಮುಲ್ ನಿರ್ದೇಶಕ ರವಿ ಡೈರಿ ಕಾರ್ಯದರ್ಶಿಗಳನ್ನು ಕೆಡಿಪಿ ಸಭೆಗೆ ಕರೆಯಲು ಶಾಸಕ ಯಾರು? ಎಂದು ಏಕ ವಚನದಲ್ಲಿ ಪ್ರಶ್ನಿಸಿದ್ದಾರೆ. ನನ್ನ ಪ್ರಶ್ನಿಸಲು ಡಾಲು ರವಿ ಯಾರು? ಎಂದು ಮರು ಪ್ರಶ್ನಿಸಿದರು.
ನಾನು ಸರ್ಕಾರದ ಪ್ರತಿನಿಧಿ. ಹಾಲು ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ, ಸರ್ಕಾರದ ಅನುದಾನ ಪಡೆಯುತ್ತಿರುವುದರಿಂದ ಕೆಡಿಪಿ ಪರಿಶೀಲನೆಗೊಳಪಡುತ್ತಿದೆ. ಮಂಡ್ಯ ಜಿಲ್ಲಾ ಒಕ್ಕೂಟ ರವಿ ಒಡತನದಲ್ಲಿಲ್ಲ. ಡೈರಿಗಳು ಅವರ ಉಪ ಶಾಖೆಗಳಲ್ಲ.
ಹರಿರಾಯನಹಳ್ಳಿ ಡೈರಿ ಉದ್ಘಾಟನೆಗೆ ಶಾಸಕ ಬಂದರೆ ಕೆಎಂಎಫ್, ಮನ್ಮುಲ್ ಅನುದಾನ ಕೊಡಿಸುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ. ಕೆಲವರ ಬಳಿ ಶಾಸಕರು ನನ್ನ ಹತ್ತಿರ ಬರಲೇಬೇಕು ಎಂದು ಹೇಳಿದ್ದಾರೆ. ಆದರೆ, ಇಂತಹ ಬೆದರಿಕೆಗೆ ನಾನು ಹೆದುರುವುದಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಆಧ್ಯತೆ ನೀಡುತ್ತೇನೆ.

ಹರಿರಾಯನಹಳ್ಳಿ ಡೈರಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದೇನೆ. ಡೈರಿ ವಾರ್ಷಿಕ ಸಭೆಯಲ್ಲಿ ಮನ್ಮುಲ್ ನಿರ್ದೇಶಕರ ಯಾಕೆ ಹೋಗಬೇಕು ಎಂದು ಪ್ರಶ್ನೆ
ಮಾಡಿದರು.
ಭಾರತಿಪುರ, ಮಾದಾಪುರ, ಸೇರಿ ನಾಲ್ಕು ಪಂಚಾಯಿತಿಗೆ ಹೋಗಿದ್ದೀನಿ. ಮುಂದಿನ ದಿನಗಳಲ್ಲಿ ಕೆಡಿಪಿ ಸಭೆಗೆ ಹೋಗುತ್ತೇನೆ. ರೈತರು ಶುಂಠಿಯನ್ನು ದಲ್ಲಾಳಿಗಳಿಗೆ ಮಾರಾಟ ಮಾಡಬೇಡಿ. ದಲ್ಲಾಳಿಗಳಿಂದ ಶುಂಠಿ ಬೆಳೆ ದರ ಕುಸಿದಿದೆ. ಶುಂಠಿ ಬೆಳೆಗೆ ಸರ್ಕಾರ ಬೆಂಬಲ ದರ ನಿಗಧಿ ಮಾಡಿದೆ. ಟಿಎಪಿಸಿಎಂಎಸ್ ಯಲ್ಲಿ ಶುಂಠಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ರೈತರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿ ನಂತರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುವುದು. ಆದ್ದರಿಂದ, ದಲ್ಲಾಳಿಗಳಿಗೆ ಶುಂಠಿ ಮಾರದಂತೆ ರೈತರಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಜೆಪಿಗರಿಂದ ಅವಹೇಳನಕಾರಿ ಹೇಳಿಕೆ; ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು
ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಜೆಡಿಎಸ್ ಮುಖಂಡ ಬೂಕನಕೆರೆ ಹುಲ್ಲೇಗೌಡ, ಕುರಬಹಳ್ಳಿ ನಾಗೇಶ್, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿ ಸದಸ್ಯ ಹೊಸಹೊಳಲು ರಾಜು, ಎಂ ಪಿ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಇದ್ದರು.