ಅಂದು ದುರುಳರ ಅಟ್ಟಹಾಸಕ್ಕೆ ಬಲಿಯಾಗಬೇಕಿದ್ದು ಸೌಜನ್ಯಳಲ್ಲ, ಮತ್ತೊಬ್ಬ ಯುವತಿ ವರ್ಷಾ: ತಿಮರೋಡಿ

Date:

Advertisements

2012ರ ಅಕ್ಟೋಬರ್‌ 9ರಂದು ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೋರಾಟ ಮತ್ತೆ ಭುಗಿಲೆದ್ದಿದೆ. ಸೌಜನ್ಯಗೆ ನ್ಯಾಯ ಸಿಗಬೇಕು. ದುರುಳ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಕರಾವಳಿಯಾದ್ಯಂತ ಕೇಳಿಬರುತ್ತಿದೆ. ಸೌಜನ್ಯಗೆ ನ್ಯಾಯ ಸಿಗದೇ ಹೋರಾಟ ನಿಲ್ಲುವುದಿಲ್ಲವೆಂದು ಹೋರಾಟವನ್ನು ಮುನ್ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ. ಅಲ್ಲದೆ, ಅಂದು ದುರುಳರ ಅಟ್ಟಹಾಸಕ್ಕೆ ಬಲಿಯಾಗಬೇಕಿದ್ದದ್ದು ಸೌಜನ್ಯ ಅಲ್ಲ. ಮತ್ತೊಬ್ಬ ಯುವತಿ, ಬ್ರಾಹ್ಮಣ ಕುಟುಂಬದ ವರ್ಷಾ. ಅದೃಷ್ಟವಶಾತ್ ಆ ಹುಡುಗಿ ಈ ಹಂತಕರಿಂದ ಬಚಾವಾಗಿದ್ದಾಳೆ ಎಂದು ಅವರು ಹೇಳಿದ್ದಾರೆ.

“ಧರ್ಮಸ್ಥಳದವರು ವರ್ಷಾಳ ಕುಟುಂಬಕ್ಕೆ ಸೇರಿದ್ದ ಆಸ್ತಿಯನ್ನು ತಮಗೆ ಬಿಟ್ಟುಕೊಡುವಂತೆ ಕೇಳಿದ್ದರು. ಆದರೆ, ಆ ಕುಟುಂಬ ತಮ್ಮ ಆಸ್ತಿಯನ್ನು ಕೊಡಲು ನಿರಾಕರಿಸಿತ್ತು. ಆ ಕುಟುಂಬದ ಮೇಲೆ ದ್ವೇಷ ಸಾಧಿಸಿತ್ತು. ಆ ಕುಟುಂಬದ ಮಗಳು ವರ್ಷಾಳನ್ನು ಅಪಹರಿಸಲು ಈ ದುರುಳ ಹಂತಕರು ಸಂಚು ಹೂಡಿದ್ದರು. ಆದರೆ, ಆಕೆ ಅವರ ಕೈಗೆ ಸಿಗದೆ ಬದುಕುಳಿದಳು” ಎಂದು ಅವರು ತಿಮರೋಡಿ ಆರೋಪಿಸಿದ್ದಾರೆ.

 “ಸೌಜನ್ಯ ನಾಪತ್ತೆಯಾದ ಜಾಗದಲ್ಲಿ ಆಕೆ ಅಪಹರಣ ಆಗುವುದಕ್ಕೂ ಮುನ್ನ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರನ ಮಗ ನಿಶ್ಚಲ್‌ ಜೈನ್‌ ಅವರ ಸ್ನೇಹಿತ ಉದಯ್ ಜೈನ್, ಮಲಿಕ್ ಜೈನ್ ಮತ್ತು ಧೀರಜ್ ಜೈನ್‌ ಅನುಮಾನಾಸ್ಪದವಾಗಿ ಮಾತನಾಡಿಕೊಳ್ಳುತ್ತಿದ್ದರು. ಅವರು ಸಂಚು ರೂಪಿಸುತ್ತಿರುವಂತೆ ಮಾತನಾಡಿಕೊಳ್ಳುತ್ತಿದ್ದರು. ಅವರಲ್ಲೊಬ್ಬ, ‘ಸಿಕ್ಕಾಪಟ್ಟೆ ಮಳೆಯಿದೆ. ಇಲ್ಲೇನು ಮಾಡಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದ. ಅದನ್ನು ನಾನೇ ಕೇಳಿಸಿಕೊಂಡಿದ್ದೇನೆ’ ಎಂದು ಸೌಜನ್ಯಳ ಚಿಕ್ಕಮ್ಮ ಹೇಳಿದ್ದರು. ಅದೇ ದಿನ ಅದೇ ಜಾಗದಲ್ಲಿ ಅವರು ವರ್ಷಾಳನ್ನೂ ಚಪ್ಪಾಳೆ ತಟ್ಟಿ ಕರೆದಿದ್ದರು. ಆದರೆ, ಆಕೆ’ನನಗೆ ಪರೀಕ್ಷೆಯಿದೆ’ ಎಂದೇಳಿ ಹೊರಟು ಹೋಗಿದ್ದಳು. ಇಲ್ಲದಿದ್ದರೆ, ಆ ಹಂತಕರು ವರ್ಷಾಳನ್ನು ಅಪಹರಿಸುತ್ತಿದ್ದರು” ಎಂದು ದೂರಿದ್ದಾರೆ.

Advertisements

ಸೌಜನ್ಯ ಕುಟುಂಬಸ್ಥರೂ ಕೂಡ ಈ ಮೂವರೇ ತಮ್ಮ ಮಗಳನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದಾರೆ ಎಂಬ ಅನುಮಾನವಿದೆ. ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ಈ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸೌಜನ್ಯ ಪ್ರಕರಣ | ಧರ್ಮಸ್ಥಳ ಧರ್ಮಾಧಿಕಾರಿಯ ದರ್ಪ ದೌರ್ಜನ್ಯ ಬಯಲಾಗಿದೆ: ತಿಮರೋಡಿ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷ್‌ನನ್ನು ಇದೇ ಮಲಿಕ್ ಜೈನ್‌ ಮತ್ತು ಸಂಗಡಿಗರು ಆರೋಪಿಯೆಂದು ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಪೊಲೀಸರು ಆತನಿಗೆ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಳ್ಳುವಂತೆ ಭಯಂಕರ ಹಿಂಸೆ ನೀಡಿದ್ದರು. ಬಳಿಕ, ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ತನಿಖೆ ನಡೆದ ಬಳಿಕ ಸಿಬಿಐ ಕೋರ್ಟ್‌ ಸಂತೋಷ್‌ನನ್ನು ನಿರಪರಾಧಿ ಎಂದು ಘೋಷಿಸಿದೆ.

ಸಂತೋಷ್ ನಿರಪರಾಧಿ ಆದ ಮೇಲೆ ಹಂತಕರು ಯಾರು ಎಂದು ಪತ್ತೆ ಮಾಡಿ ಶಿಕ್ಷೆ ಕೊಡಬೇಕು. ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಸೌಜನ್ಯ ಕುಟುಂಬ ಒತ್ತಾಯಿಸುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X