ನ್ಯೂಸ್‌ಲಾಂಡ್ರಿ ಕಾರ್ಯನಿರ್ವಾಹಕ ಸಂಪಾದಕಿ ಮನೀಷಾ ಪಾಂಡೆ ಮತ್ತು ಇತರ ಎಂಟು ಪತ್ರಕರ್ತೆಯರ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಬಲಪಂಥೀಯ ಲೇಖಕ ಅಭಿಜಿತ್ ಅಯ್ಯರ್ ಮಿತ್ರ ಅವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ.
ಆರೋಪಿ ಅಭಿಜಿತ್ ಪತ್ರಕರ್ತೆಯರನ್ನು ವೇಶ್ಯೆಯರು ಎಂದು, ನ್ಯೂಸ್‌ಲ್ಯಾಂಡ್ರಿಯನ್ನು ವೇಶ್ಯಾಗೃಹವೆಂದೂ ಹೇಳಿ ಟ್ವೀಟ್ ಮಾಡಿದ್ದು ಇದರ ವಿರುದ್ಧ ನ್ಯೂಸ್‌ಲ್ಯಾಂಡ್ರಿಯ ಪತ್ರಕರ್ತೆಯರು ಮೊಕದ್ದಮೆ ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ? ʼನ್ಯೂಸ್‌ಲಾಂಡ್ರಿʼ ಪತ್ರಕರ್ತೆಯರ ವಿರುದ್ಧ ಮಾನಹಾನಿ; ಪೋಸ್ಟ್‌ಗಳನ್ನು ಅಳಿಸಲು ಅಭಿಜಿತ್ ಅಯ್ಯರ್‌ಗೆ ಹೈಕೋರ್ಟ್ ತಾಕೀತು
ಆರೋಪಿ ಅಭಿಜಿತ್ ಲಿಖಿತವಾಗಿ ಕ್ಷಮೆಯಾಚಿಸಬೇಕು. 2 ಕೋಟಿ ರೂ. ಪರಿಹಾರ ಕೊಡಿಸಬೇಕೆಂದು ಮೊಕದ್ದಮೆಯಲ್ಲಿ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಈಗಾಗಲೇ ಟ್ವೀಟ್ ಅಳಿಸಿಹಾಕುವಂತೆ ಅಭಿಜಿತ್‌ಗೆ ತಾಕೀತು ಮಾಡಿದೆ.
ಇಂತಹ ಪೋಸ್ಟ್‌ಗಳನ್ನು “ಯಾವುದೇ ನಾಗರಿಕ ಸಮಾಜವು ಸಹಿಸುವುದಿಲ್ಲ. ಇಂತಹ ಪೋಸ್ಟ್‌ಗಳು ಸಮಾಜಕ್ಕೆ ಮಾರಕ” ಎಂದು ಕೋರ್ಟ್ ಈ ಹಿಂದಿನ ವಿಚಾರಣೆ ವೇಳೆ ಹೇಳಿದೆ. ಸೋಮವಾರ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
