ಟ್ರಾಫಿಕ್ ನಿಯಮಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಂಡರೆ ಮಂಡ್ಯದಂತ ಪ್ರಕರಣ ಮರುಕಳಿಸುವುದಿಲ್ಲ

Date:

Advertisements

ಪ್ರತಿ ದಿನ ನೂರಾರು ಜೀವಗಳು ರಸ್ತೆಯ ಮೇಲೆಯೇ ಕೊನೆಗೊಳ್ಳುತ್ತಿವೆ. ನಿಯಮಗಳನ್ನು ಬರೆದಿದ್ದರೂ, ಅವು ಪಾಲನೆಯಾಗದಿದ್ದರೆ ಬರೆಹಕ್ಕೂ ಮೌಲ್ಯವಿಲ್ಲ ಎಂಬಂತಾಗುತ್ತದೆ. ಆದರೆ ಇಂದಿನ ತಂತ್ರಜ್ಞಾನ, ನಿಯಮ ಪಾಲನೆಗೆ ದಾರಿಯಾಗಬಹುದು. ಅಂತಹ ತಂತ್ರಜ್ಞಾನ ಬಳಸಿಕೊಂಡು ಕಠಿಣ ನಿಯಮಗಳನ್ನು ಜಾರಿಗೆ ತಂದರೆ, ನಿನ್ನೆ ಮಂಡ್ಯದಲ್ಲಿ ನಡೆದಂತಹ ದುರಂತದ ಪ್ರಕರಣಗಳು ಮರುಕಳಿಸುವುದಿಲ್ಲ.

ನಾಯಿ ಕಚ್ಚಿದ ಬಳಿಕ ಗಾಯಗೊಂಡ ಮಗುವನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪೋಷಕರನ್ನು, ಹೆಲ್ಮೆಟ್ ತಪಾಸಣೆಗಾಗಿ ಮಂಡ್ಯ ಬಳಿಯ ಸ್ವರ್ಣಸಂದ್ರ ಸಂಚಾರಿ ಪೊಲೀಸರು ರಸ್ತೆಯಲ್ಲಿ ಅಡ್ಡಗಟ್ಟಿದರು. ದೂರ ಸರಿಯುತ್ತಿದ್ದ ಮಗುವಿನ ಪೋಷಕರು ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದಿದ್ದಾರೆ. ಈ ವೇಳೆ, ಅವರ ಮಡಿಲಲ್ಲಿದ್ದ ಹೃತೀಕ್ಷಾ ಎಂಬ ಮೂರುವರೆ ವರ್ಷದ ಮಗು ಕೆಳಗೆ ಬಿದ್ದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮಗು ಮೃತಪಟ್ಟಿದೆ.

ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದೃಶ್ಯ ನೋಡಿ ಸಾರ್ವಜನಿಕರು ಸಂಚಾರಿ ಪೊಲೀಸರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದರು.

Advertisements

ಘಟನೆ ಬಳಿಕ ಮೂವರು ಎಎಸ್ಐಗಳನ್ನು ಅಮಾನತು ಮಾಡಲಾಗಿದೆ. ಇದೆಲ್ಲದರ ನಡುವೆ, ʼಇಂದಿನ ತಂತ್ರಜ್ಞಾನ ಯುಗದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಡೆದು ಫೈನ್ ಹಾಕಲೇಬೇಕಾದ ಪರಿಸ್ಥಿತಿ ನಿಜಕ್ಕೂ ಇದಿಯಾ?, ಇದಕ್ಕೆ ಪರಿಹಾರಗಳೇನು? ಎನ್ನುವ ಕುರಿತು ಹಲವು ಪ್ರಶ್ನೆ ಮೂಡುತ್ತವೆ.

image 54 4

ಏನೆಲ್ಲಾ ತಂತ್ರಜ್ಞಾನ ವ್ಯವಸ್ಥೆಗಳು ಇವೆ, ಪೊಲೀಸ್ ಇಲಾಖೆ ಇದನ್ನು ಹೇಗೆ ಬಳಸಿಕೊಳ್ಳಬಹದು ಮತ್ತು ಪ್ರಸ್ತುತ ಯಾಕೆ ಬಳುಸುಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಹಾಗೆಯೇ ವಾಹನ ಸವಾರರಿಗೆ ಅರಿವು ಮೂಡಿಸಲು ಸಹ ಈ ತಂತ್ರಜ್ಞಾನಗಳಿಂದ ಸಾಧ್ಯವಿದೆ. ಇದರ ಕುರಿತಾಗಿ ಈ ಕೆಳಕಂಡ ಡಿಜಿಟಲ್ ಟ್ರಾಫಿಕ್ ತಂತ್ರಜ್ಞಾನದ ಮಾಹಿತಿ.

ತಂತ್ರಜ್ಞಾನವು ಟ್ರಾಫಿಕ್ ಪೊಲೀಸರಿಗೆ, ವಾಹನ ಸವಾರರಿಗೆ ಹೆಚ್ಚು ಪರಿಣಾಮಕಾರಿಯಾಗಿ ನೆರವಾಗಬಹುದು. ಕೆಲವು ಪ್ರಮುಖ ತಂತ್ರಜ್ಞಾನ ಆಧಾರಿತ ಪರಿಹಾರಗಳು ಹೀಗಿವೆ…

ಆಟೋಮೇಟೆಡ್ ಟ್ರಾಫಿಕ್ ಮಾನಿಟರಿಂಗ್ ಸಿಸ್ಟಮ್ (ATMS) ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು:

ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ಸ್ವಯಂಚಾಲಿತವಾಗಿ ಗುರುತಿಸಬಹುದಾಗಿದೆ. (ಉದಾ: ರೆಡ್ ಲೈಟ್ ಜಂಪಿಂಗ್, ಸ್ಪೀಡ್ ಉಲ್ಲಂಘನೆ)

ರಿಯಲ್-ಟೈಮ್ ಡೇಟಾ

ಟ್ರಾಫಿಕ್ ಸಂದರ್ಭಗಳನ್ನು ವಿಶ್ಲೇಷಿಸಿ, ಪೊಲೀಸರನ್ನು ಸಮಸ್ಯೆಯ ಸ್ಥಳಕ್ಕೆ ತ್ವರಿತವಾಗಿ ಕಳುಹಿಸಲು ಸಹಾಯ.

e-ಚಾಲನಾ ಚೀಟಿಗಳು (e-Challans)

ಡಿಜಿಟಲ್ ಶಿಕ್ಷೆ: ಟ್ರಾಫಿಕ್ ನಿಯಮ ಉಲ್ಲಂಘನೆಗಳಿಗೆ ಡಿಜಿಟಲ್ ಚಾಲನಾ ಚೀಟಿಗಳನ್ನು (SMS/ಇಮೇಲ್ ಮೂಲಕ) ಕಳುಹಿಸಲಾಗುತ್ತದೆ. ಇದರಿಂದ ಸವಾರರು ತಪ್ಪನ್ನು ತಕ್ಷಣ ತಿಳಿದುಕೊಳ್ಳಬಹುದು.

ಆನ್ಲೈನ್ ಪಾವತಿ: ಚಾಲನಾ ಚೀಟಿಯನ್ನು ಆನ್ಲೈನ್‌ ನಲ್ಲಿ ಪಾವತಿಸುವ ಸೌಲಭ್ಯ.

ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ಗಳು, AI-ಆಧಾರಿತ ಸಿಗ್ನಲ್ಗಳು. ಕಾಂಗೆಸ್ಟನ್ ಅನುಸಾರ ಸಿಗ್ನಲ್ ಟೈಮಿಂಗ್ ಸ್ವಯಂ ಹೊಂದಾಣಿಕೆ ಮಾಡಿಕೊಳ್ಳುತ್ತದೆ.

ಪ್ರಾಥಮಿಕ ವಾಹನಗಳಿಗೆ ಅಗ್ರತೆ: ಆಂಬುಲೆನ್ಸ್, ಫೈರ್ ಇಂಜಿನ್ ಗಳಿಗೆ ಸಿಗ್ನಲ್ಗಳು ಸ್ವಯಂಚಾಲಿತವಾಗಿ ಹಸಿರು ಬೆಳಕನ್ನು ತೋರಿಸುತ್ತದೆ.

ಮೊಬೈಲ್ ಅಪ್ಲಿಕೇಶನ್ಗಳು (ಉದಾ: “ಕರ್ನಾಟಕ ಟ್ರಾಫಿಕ್ ಪೊಲೀಸ್”)

ರಿಯಲ್ ಟೈಮ್ ಅಪ್ಡೇಟ್ : ಅಪ್ಲಿಕೇಶನ್ ಮೂಲಕ ಟ್ರಾಫಿಕ್ ಜಾಮ್, ರಸ್ತೆ ಮುಚ್ಚಲ್ಪಟ್ಟಿದೆ ಎಂಬ ಮಾಹಿತಿ ಪಡೆಯಬಹುದು.

ಅಕ್ರಮ ಪಾರ್ಕಿಂಗ್ ರಿಪೋರ್ಟ್: ಸಾರ್ವಜನಿಕರು ಅಕ್ರಮ ಪಾರ್ಕಿಂಗ್ ಅನ್ನು ಫೋಟೋ ತೆಗೆದು ರಿಪೋರ್ಟ್ ಮಾಡಬಹುದು.

ವಾಹನ ಟ್ರ್ಯಾಕಿಂಗ್ ಮತ್ತು ಫೇಸ್ ರೆಕಗ್ನಿಷನ್ ; ANPR (ಆಟೋಮೇಟೆಡ್ ನಂಬರ್ ಪ್ಲೇಟ್ ರೆಕಗ್ನಿಷನ್): ಕಳ್ಳ ವಾಹನಗಳು ಅಥವಾ ಓಡಿಹೋದ ಅಪರಾಧಿಗಳನ್ನು ಗುರುತಿಸಲು ಸಹಾಯವಾಗಲಿದೆ.

GPS ಟ್ರ್ಯಾಕಿಂಗ್: ಕಳುಹಿಸಲಾದ ವಾಹನಗಳನ್ನು ಟ್ರ್ಯಾಕ್ ಮಾಡಲು ಸಹಾಯವಾಗಲಿದೆ.

ಸಾಮಾಜಿಕ ಮಾಧ್ಯಮ ಮತ್ತು SMS ಎಚ್ಚರಿಕೆಗಳು ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ: SMS ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ದುರ್ಘಟನೆ ಎಚ್ಚರಿಕೆಗಳು: ಅಪಾಯಕಾರಿ ಪ್ರದೇಶಗಳ ಬಗ್ಗೆ ಮುಂಚಿತವಾಗಿ ಸೂಚನೆ ನೀಡಬಹುದಾಗಿದೆ.

ಡಿಜಿಟಲ್ ದಾಖಲೆಗಳು: ಪೊಲೀಸರು ಮೊಬೈಲ್ ಡಿವೈಸ್ ನಲ್ಲಿ ಚಾಲಕರ ಲೈಸೆನ್ಸ್ ಮತ್ತು RC ಪರಿಶೀಲಿಸಬಹುದು. ಬ್ಲಾಕ್ಲಿಸ್ಟೆಡ್ ವಾಹನಗಳನ್ನು ಗುರುತಿಸುಬಹುದಾಗಿದೆ.

ಡ್ರೋನ್ ಮಾನಿಟರಿಂಗ್: ಹೆಲಿಕಾಪ್ಟರ್/ಡ್ರೋನ್ಗಳು: ಟ್ರಾಫಿಕ್ ನಿಗಾ ಇಡಲು ಮತ್ತು ದುರ್ಘಟನೆ ಪ್ರದೇಶಗಳನ್ನು ವೇಗವಾಗಿ ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ವಾಹನ ಸವಾರರಿಗೂ ಸಹಾಯ.

IVR/ಚಾಟ್ಬಾಟ್: ಟ್ರಾಫಿಕ್ ನಿಯಮಗಳ ಬಗ್ಗೆ ಸಹಾಯ ಪಡೆಯಲು ಬಳಸುವುದು.

ಎಮರ್ಜೆನ್ಸಿ ಬಟನ್: ರಸ್ತೆಯ ಬದಿಯಲ್ಲಿ ಎಮರ್ಜೆನ್ಸಿ ಸಹಾಯಕ್ಕಾಗಿ ಬಟನ್ ಅಳವಡಿಸಬಹುದು.

ಡಿಜಿಟಲ್ ಶಿಕ್ಷಣ ಮತ್ತು ತರಬೇತಿ ನೀಡಬಹುದು. VR-ಆಧಾರಿತ ಟ್ರಾಫಿಕ್ ನಿಯಮ ತರಬೇತಿ ನೀಡಬಹುದು.

ಚಾಲಕರು ವರ್ಚುವಲ್ ರಿಯಾಲಿಟಿ ಮೂಲಕ ಟ್ರಾಫಿಕ್ ನಿಯಮಗಳನ್ನು ಕಲಿಯಬಹುದು. ಈ ತಂತ್ರಜ್ಞಾನಗಳು ಟ್ರಾಫಿಕ್ ನಿಯಂತ್ರಣವನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಿಸುತ್ತದೆ. ಇನ್ನು ದಿನನಿತ್ಯ ತಂತ್ರಜ್ಞಾನ ಬೆಳೆಯುತ್ತಿರುವ ಕಾರಣ ಅನೇಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪೊಲೀಸ್ ಇಲಾಖೆ ಹೇಗೆಲ್ಲ ಕರ್ತವ್ಯ ನಿರ್ವಹಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಪೊಲೀಸ್ ಇಲಾಖೆ ರಸ್ತೆಯಲ್ಲಿ ನಿಂತು ವಾಹನ ಸವಾರರನ್ನ ಅಡ್ಡಗಟ್ಟಿ ವಾಹನಗಳ ಕೀ ಕಿತ್ತುಕೊಂಡು, ಟ್ರಾಫಿಕ್ ಪೊಲೀಸರು ವಾಹನ ಹಿಂದೆ ಓಡಿ ಹೋಗಿ ವಾಹನ ಸವಾರರನ್ನು ಕಳ್ಳರನ್ನು ಹಿಡಿದಂತೆ ಹಿಡಿಯುವುದು, ಸಾರ್ವಜನಿಕರ ಕಿಸೆಗೆ ಕೈಹಾಕಿ ಹಣ ತೆಗೆದುಕೊಳ್ಳುವ ಬದಲು ನೇರವಾಗಿ ತಂತ್ರಜ್ಞಾನ ಮೂಲಕ ಅಪರಾಧ ಮಾಡಿದವರನ್ನು ನ್ಯಾಯಾಲಯದಲ್ಲಿ ಹಣ ಕಟ್ಟುವಂತೆ ಮಾಡುವ ಮೂಲಕ ಎಚ್ಚರಿಕೆ ಮಾಡಬೇಕು. ಕೆಲವೆಡೆ ಈ ನಿಯಮಗಳು, ತಂತ್ರಜ್ಞಾನಗಳು ಬಳಕೆಯಲ್ಲಿವೆದಾರೂ ಬಹುತೇಕ ಕಡೆಗಳಲ್ಲಿ ಅದೇ ಸಾಂಪ್ರದಾಯಿಕ ನಿಯಮಗಳನ್ನು ಅವಲಂಬಿಸಿದ್ದಾರೆ.

ಕಾಟಾಚಾರಕ್ಕೆ, ಜನರ ಆಕ್ರೋಶಕ್ಕೆ ಮಣಿದು ಅಮಾನತು ಮಾಡಿದ್ದೇವೆ, ಹೇಗೂ ಜನಸಾಮಾನ್ಯರು ಕಾಲ ಕ್ರಮೇಣ ಮರೆತು ಹೋಗುತ್ತಾರೆ ಅನ್ನುವ ಗೋಜಿಗೆ ಹೋಗದೆ ಸರ್ಕಾರ ಸೂಕ್ತ ಕಠಿಣ ಶಿಕ್ಷೆ ಹಾಗೂ ಮುಂದಿನ ದಿನಗಳಲ್ಲಿ ಇದರ ಕುರಿತು ಏನು ಪರಿಹಾರ ಕಂಡುಕೊಳ್ಳಬೇಕು ಎನ್ನುವ ಕುರಿತು ನಿಯಮಗಳನ್ನು ರೂಪಿಸಬೇಕು.

ಇದನ್ನೂ ಓದಿ: ಮಂಡ್ಯ | ಮನ್ಮುಲ್ ನಿರ್ದೇಶಕ ರವಿ ವಿರುದ್ಧ ಶಾಸಕ ಎಚ್ ಟಿ ಮಂಜು ಸಿಡಿಮಿಡಿ

ಇದರಲ್ಲಿ ನ್ಯಾಯ ಸಮ್ಮತವಾಗಿ ಸರ್ಕಾರದ ತೆರಿಗೆಗೆ ಎಷ್ಟು ಸಿಗಲಿದೆ ಎಂಬುದು ಪ್ರಶ್ನೆ. ಪೋಷಕರು ಮಗು ಕೂರಿಸಿಕೊಂಡು ಬರುತ್ತಿದ್ದರೂ ಸಹ ಟ್ರಾಫಿಕ್ ಪೊಲೀಸರ ಮನ ಒಂದು ನಿಮಿಷ ಯೋಚಿಸಿದ್ದರೆ ಅನಾಹುತ ಆಗುತ್ತಿರಲಿಲ್ಲ. ಬದುಕಿ ಬಾಳಬೇಕಿದ್ದ ಮಗುವಿನ ಸಾವಾಗಿದೆ. ಸ್ಮಶಾನ ಮೌನ ಆವರಿಸಿದೆ. ಇದು ಒಂದು ಮಗುವಿಗೆ ಸಂಬಂಧಿಸಿದ ಕತೆಯಲ್ಲ. ದಿನನಿತ್ಯ ಜರುಗುತ್ತಿರುವ ಸಾವಿರಾರು ಪ್ರಕರಣಗಳಿಗೆ ಇದೊಂದು ಕನ್ನಡಿ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ಡಿ ದೇವರಾಜ ಅರಸು ಜನ್ಮ ದಿನಾಚರಣೆ

ಮಂಡ್ಯ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ಹಾಗೂ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X