ಕೊಪ್ಪಳ | ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ

Date:

Advertisements

ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ‌ ನೂತನ ಕಚೇರಿ ಮತ್ತು ನೀರು ಬಳಕೆದಾರರ ಸಂಘದ ನೂತನ ಕಟ್ಟಡವನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಕೆ ರಾಜಶೇಖರ ಹಿಟ್ನಾಳ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, “ಸಹಕಾರ ಸಂಘದ ಮೂಲಕ ಹಲವು ವ್ಯಾಪಾರಸ್ಥರಿಗೆ, ನೂರಾರು ರೈತರಿಗೆ ಕೋಟ್ಯಂತರ ರೂಪಾಯಿ ಕೃಷಿ ಸಾಲ ನೀಡಲಾಗುತ್ತಿದ್ದು, ಸಹಕಾರಿ ಸಂಘದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಆರ್ಥಿಕವಾಗಿ ಸೋತವರಿಗೆ ಸಹಕಾರ ಸಂಘ ನೆರವಾಗಿದೆ. ಎರಡೂ ಸರ್ಕಾರಗಳು ಸಹಕಾರ ಸಂಘಗಳಿಗೆ ಆದ್ಯತೆ ನೀಡುತ್ತಿವೆ. ಸರ್ಕಾರದ ಕಟ್ಟಡಗಳನ್ನು ನಮ್ಮ ಕಟ್ಟಡವೆಂದು ಉಳಿಸಬೇಕು. ಸಹಕಾರ ಸಂಘಗಳು ನಮ್ಮ ಬ್ಯಾಂಕುಗಳಿಗೆ ಹಾಗೂ ರೈತರಿಗೆ ಬೆನ್ನೆಲುಬಾಗಿ ನಿಂತಿವೆ” ಎಂದರು.

ಹನುಮಂತಪ್ಪ ಬನ್ನಿಕೊಪ್ಪ ಮಾತನಾಡಿ, “ಬಂಡಿಹರ್ಲಾಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸಹಕಾರ ಸಂಘವು ಆರಂಭವಾಯಿತು. ಹಲವು ಮುಖಂಡರ ಸಹಕಾರದಿಂದ ಇಂದು ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಈ ಮೊದಲು 199 ಷೇರುದಾರರು ಇದ್ದು, ಈಗ 665 ಷೇರುದಾರರು ಇದ್ದಾರೆ. ಮೊದಲು ಬಂಡವಾಳ 2 ಲಕ್ಷ 90 ಸಾವಿರದಿಂದ, 3 ಕೋಟಿ 8 ಲಕ್ಷ ಸಾವಿರ ಪ್ರಗತಿಯತ್ತ ಸಾಗುತ್ತಿದೆ. ಸಹಕಾರಿ ಶಿಕ್ಷಣ ಕ್ಷೇತ್ರದ ಜತೆಗೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ” ಎಂದು ತಿಳಿಸಿದರು.

Advertisements

ಸಹಕಾರಿ ಧುರೀಣ ರಮೇಶ್ ವೈದ್ಯ ಮಾತನಾಡಿ, “ಜಿಲ್ಲಾ, ತಾಲೂಕು ಸಹಕಾರ ಸಂಘಗಳಲ್ಲಿ ಮೊದಲಿಗೆ ಕುರ್ಚಿ ಇರಲಿಲ್ಲ, ಈಗ ಸಮೃದ್ಧಿಯಾಗಿವೆ. ದೇಶಕ್ಕೆ ಎರಡು ಪವಿತ್ರ ಕ್ಷೇತ್ರಗಳು ಶಿಕ್ಷಣ ಮತ್ತು ಸಹಕಾರ ಸಂಘಕ್ಕೆ ಜೀವ ಕೊಟ್ಟಾಗ ಮಾತ್ರ ಗ್ರಾಮ ಅಭಿವೃದ್ಧಿ ಸಾಧ್ಯ. ಈಗ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ₹1300 ಕೋಟಿ ಪ್ರಗತಿಯಲ್ಲಿದೆ. ಸಹಕಾರಿ ಸಂಘದಲ್ಲಿ ರಾಜಕೀಯ ಇರಬಾರದು” ಎಂದು ನಿರ್ದೇಶಕರಲ್ಲಿ ಮನವರಿಕೆ ಮಾಡಿದರು.

ಇದನ್ನೂ ಓದಿದ್ದೀರಾ? ಬಳ್ಳಾರಿ | ಪಾಲಿಕೆ ಅವ್ಯವಸ್ಥೆ ವಿರುದ್ಧ ನಾಗರಿಕ ಸಮಿತಿ ಪ್ರತಿಭಟನೆ

ಸಹಕಾರಿ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್, ಕೆ ವೆಂಕಟಯ್ಯ, ಕಾಷಯ್ಯ ಸ್ವಾಮಿ ಗವಿಮಠ, ಮಾಜಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರಾಜು, ಗ್ರಾಮ ಪಂಚಾಯಿತಿ ಸದಸ್ಯ ಚನ್ನಕೃಷ್ಣ ಗೊಲ್ಲರ, ರಬೇಕಾ ಬಾಬು, ವಿ ಎಸ್ ಗಿರೆಡ್ಡಿ, ಶರಣಪ್ಪ ರಾಟಿ, ಉಪನಿಬಂಧಕ ಪ್ರಕಾಶ್ ಸಜ್ಜನ್, ಸುದರ್ಶನ್ ಶರ್ಮಾ, ಶಾಖಾ ವ್ಯವಸ್ಥಾಪಕ ತೇಜಪ್ಪ ಎಲ್ ದೊರೆಸ್ವಾಮಿ, ಯಂಕಪ್ಪ ಹೊಸಳ್ಳಿ , ಸಂಗಮೇಶ ದೆಸಾಯಿ, ವಿಠ್ಠಲ್ ನಾವ್ಡೆ, ನಿರ್ದೇಶಕರಾದ ಎಂ ಮೋಹನ್, ಶಂಕರ್ ಶ್ಯಾಸಲ್, ಯಂಕಪ್ಪ ಜಿ, ರಾಮಮೂರ್ತಿ, ಸಣ್ಣ ಚೆನ್ನರೆಡ್ಡಿ, ಮೀರ್ ಅಹ್ಮದ್ ಖಾನ್, ಕನಕಪ್ಪ ಮುಂಡರಗಿ, ಅಬ್ಬಲೆಗೆಪ್ಪ, ಚಿನ್ನತಾಂಬಿ, ಭಾಗ್ಯಲಕ್ಷ್ಮಿ, ರೇಣುಕಮ್ಮ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಸವನಗೌಡ ಪಾಟೀಲ್, ಸಿಬ್ಬಂದಿ ರಾಘವೇಂದ್ರ ಇಲ್ಲೂರ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X