ಸ್ಲಂಗಳ ನಿವಾಸಿಗಳಿಗೆ ಸಂವಿಧಾನದ ಅಡಿಯಲ್ಲಿ ವಸತಿ ,ನಿವೇಶನ ,ಹಕ್ಕು ನೀಡಲು ಆಗ್ರಹಿಸಿ ಮೇ.31 ರಂದು ಸ್ಲಂ ಜನರ ಹಬ್ಬೋತ್ಸವ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸ್ಲಂ ಜನಾಂದೋಲನ ಕೇಂದ್ರದ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಶೇ.40 ರಷ್ಟು ಜನರು ಸ್ಲಂಗಳಲ್ಲಿ ವಾಸ ಮಾಡುತ್ತಿದ್ದರೂ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅಭಿವೃದ್ದಿ ಪಾಲು ದೊರೆಯುತ್ತಿಲ್ಲ. ಎಲ್ಲಾ ಜಾತಿ,ಧರ್ಮದವರು ಸ್ಲಂಗಳಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಸಂವಿಧಾನ ಮೂಲ ಆಶಯಗಳು ಜನರಿಗೆ ದೊರೆಯದೇ ಕಂಗಾಲಾಗಿ ಬಳಲುತ್ತಿದ್ದಾರೆ.ಬಂಡವಾಳಶಾಹಿ ಹಿಡಿತಕ್ಕೆ ಸಿಲುಕಿರುವ ಸರ್ಕಾರಗಳ ಸ್ಲಂಗಳನ್ನು ಒಕ್ಕಲೆಬ್ಬಿಸುವದು,ಸೌಲಭ್ಯ ಒದಗಿಸದೇ ವಂಚಿಸುತ್ತಿವೆ ಎಂದು ಆಗ್ರಹಿಸಿದರು.
ಸ್ಲಂಗಳ ಅಭಿವೃದ್ದಿ ಜಾರಿಗೊಳಿಸಿರುವ ಕೊಳಗೇರಿ ಅಭಿವೃದ್ದಿ ಕಾಯ್ದೆ ಜಾರಿಗೊಳಿಸಲು ಸರ್ಕಾರಗಳು ಮುಂದಾಗುತ್ತಿಲ್ಲ. ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಹಂಚಿಕೆ ಮಾಡದೇ ಹೋಗಿವೆ.. ಸ್ಲಂಗಳಲ್ಲಿ ವಾಸ ಮಾಡುವ ಜನರಿಗೆ ನಿವೇಶನ, ವಸತಿ ಹಕ್ಕು ನೀಡಲು ಮುಂದಾಗಬೇಕೆಂದರು.ನಗರದಲ್ಲಿ 2017 ರಲ್ಲಿ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡಲಾಗಿದೆ. ಇಂದಿಗೂ ನಿವೇಶನ ಕೊಟ್ಟಿಲ್ಲ ,ವಿಶೇಷ ವರ್ಗದ ಜನರಿಗೆ ನಿವೇಶನ ನೀಡುವಂತೆ ಸರ್ಕಾರ ಆದೇಶ ನೀಡಿದ್ದರೂ ಮಹಾನಗರ ಪಾಲಿಕೆ ಪಾಲಿಸುತ್ತಿಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ
ಸ್ಲಂಗಳ ಬೇಡಿಕೆಗೆ ಸ್ಲಂ ಜನರ ಹಬ್ಬದಲ್ಲಿ ವಿವಿಧ ಸ್ಲಂ ನಿವಾಸಿಗಳ 10 ಕಲಾತಂಡಗಳು ಭಾಗಿಯಾಗಲಿವೆ. ನಗರದ ಶಾಸಕರು, ಜಿಲ್ಲಾಧಿಕಾರಿಗಳು, ಮಹಾಪೌರರು ಸೇರಿದಂತೆ ಅನೇಕರು ಭಾಗವಹಿಸಲಿದ್ದು ಸ್ಲಂ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಪಿ.ಅನಿಲ್‌ಕುಮಾರ, ಶಹನಾಜ್, ಶರಣಬಸವ, ನೂರಜಾನ್, ಬಸವರಾಜ ಹೊಸೂರು, ಮಾಧವರೆಡ್ಡಿ, ನಾಗರಾಜ, ಮಹೇಶ ಇದ್ದರು.
