ಇಸ್ಲಾಮೋಫೋಬಿಯ ಮತ್ತು ಬಾನು ಮುಷ್ತಾಕ್

Date:

Advertisements

ಕನ್ನಡದ ಮತ್ತು ಭಾರತದ ಸಾಹಿತ್ಯ ಲೋಕವೇ ಹೆಮ್ಮೆಪಟ್ಟು ಸಂಭ್ರಮಿಸುವಂತಹ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರೆತಾಗಲೂ ಬಲಪಂಥೀಯರು ಮತ್ತು ಇಸ್ಲಾಮೋಫೋಬಿಯಾ ಪ್ರಚಾರಕರು ಸಾಮಾಜಿಕ ಜಾಲತಾಣದಲ್ಲಿ ಬಾನು ಮುಷ್ತಾಕರ ಗೆಲುವನ್ನು ಸಂಭ್ರಮಿಸಲಿಲ್ಲ. ಅಷ್ಟ್ಯಾಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಮುಷ್ತಾಕ್‌ ಮತ್ತು ಭಾಸ್ತಿಯವರಿಗೆ ಶುಭಾಶಯ ಕೋರಲಿಲ್ಲ.


ಅದು ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕ್‌ ಅವರ ಇಂಗ್ಲೀಷ್‌ ಅನುವಾದಿತ ಕೃತಿ ಹಾರ್ಟ್‌ ಲ್ಯಾಂಪ್ ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಲಭಿಸಿದ ದಿನ. ಬೆಳ್ಳಂಬೆಳಿಗ್ಗೆ ಎದ್ದೊಡನೆ ಕನ್ನಡಾಂಬೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದ ಶುಭಸುದ್ದಿ ಕೇಳಿದ ದಿನ. ಸಾಮಾಜಿಕ ಜಾಲತಾಣದ ತುಂಬೆಲ್ಲ ಕೃತಿಯ ಅನುವಾದಕಿ ದೀಪಾ ಭಾಸ್ತಿಯವರು ಲಂಡನಿನಲ್ಲಿ ನಡೆದ ಪ್ರಶಸ್ತಿ ಸ್ವೀಕಾರ ಸಮಾರಂಭದ ಭಾಷಣದಲ್ಲಿ ಉಲ್ಲೇಖಿಸಿದ “ಜೇನಿನ ಹೊಳೆಯೋ, ಹಾಲಿನ ಮಳೆಯೋ” ಹಾಡು ಕನ್ನಡಿಗರಲ್ಲಿ ಹೊಸ ರೋಮಾಂಚನ ಉಂಟು ಮಾಡಿತು. ಕನ್ನಡ ಸಾಹಿತಿಗಳಿಂದ ಹಿಡಿದು, ರಾಜಕಾರಣಿಗಳವರೆಗೂ ಎಲ್ಲರೂ ಸಂಭ್ರಮಿಸಿದ್ದರು. ಕನ್ನಡದ ಕೃತಿಗಳು ಸಕಾಲದಲ್ಲಿ ಇಂಗ್ಲಿಷಿಗೆ ಹೆಚ್ಚೆಚ್ಚು ಅನುವಾದ ಆಗಿದಿದ್ದರೆ ರಾಷ್ಟ್ರಕವಿ ಕುವೆಂಪು ಮುಂತಾದ ಸಾಹಿತಿಗಳಿಗೆ ನೊಬೆಲ್‌ ಪ್ರಶಸ್ತಿಯೇ ಲಭಿಸುತ್ತಿತ್ತು ಹಾಗೂ ಜಾಗತಿಕ ಓದುಗರ ಸಂಖ್ಯೆಯೂ ಹೆಚ್ಚುತ್ತಿತ್ತು ಎಂದು ನೆಟ್ಟಿಗರು ಒಂದೊಳ್ಳೆಯ ಚರ್ಚೆಗೆ ನಾಂದಿ ಹಾಡಿದರು.

ಬಾನು ಮುಷ್ತಾಕ್‌ ಅವರಲ್ಲಿ ಸಮಾಜದ ಕುರಿತಾದ ಆಳವಾದ ನೋವಿಗೆ ಮತ್ತು ಸಿಟ್ಟಿಗೆ ಅಭಿವ್ಯಕ್ತಿ ವೇದಿಕೆಯನ್ನು ಕಲ್ಪಿಸಿಕೊಟ್ಟವರು ದಿವಂಗತ ಪತ್ರಕರ್ತ ಮತ್ತು ಸಾಹಿತಿ ಪಿ. ಲಂಕೇಶ್ ಅವರು. ಪೂರ್ಣಾವಧಿ ವಕೀಲಿ ವೃತ್ತಿಯನ್ನು ಆರಂಭಿಸುವ ಮುನ್ನ ಲಂಕೇಶ್‌ ಪತ್ರಿಕೆಯಲ್ಲಿ ಪತ್ರಕರ್ತೆ ಹಾಗೂ ಅಂಕಣಕಾರ್ತಿಯಾಗಿ ಕೆಲಸ ಮಾಡಿದ ಅವರಲ್ಲಿ ಸಮಾಜದ ಸೂಕ್ಷ್ಮತೆಗಳು ಮತ್ತು ಮಹಿಳೆಯ ಮೇಲಾಗುತ್ತಿರುವ ಶೋಷಣೆಗಳು ಅನಾವರಣಗೊಂಡಿವೆ. ಅವರ ಸಣ್ಣಕಥೆಗಳಲ್ಲಿ ಅನೇಕ ಪಾತ್ರಗಳಾಗಿ ಚಿತ್ರಿತವಾಗಿವೆ. ತಾವು ಸೇರಿದ ಮುಸ್ಲಿಮ್‌ ಸಮುದಾಯದಲ್ಲಿ ಮಹಿಳೆಯರಿಗೆ ಸಿಗದ ಧಾರ್ಮಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಬಗ್ಗೆ ಪ್ರಶ್ನಿಗಳನ್ನು ಎತ್ತಿದಾಗ, ಮುಸ್ಲಿಮ್‌ ಮೂಲಭೂತವಾದಿಗಳಿಂದ ವಿರೋಧ ಮತ್ತು ಬೆದರಿಕೆಗಳಿಗೆ ತುತ್ತಾಗುತ್ತಾರೆ. ಬಂಡಾಯ ಸಾಹಿತ್ಯದ ಕಾಲದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ ಬಾನು ಮುಷ್ತಾಕರ ಹರಿತ ಖಡ್ಗದಂತಹ ಬರವಣಿಗೆಗೆ ಬೆನ್ನೆಲುಬಾಗಿ ನಿಂತವರು ಅವರ ಪತಿ ಮುಷ್ತಾಕ್‌ ಮೊಹಿದ್ದೀನ್‌.

banu mishtak

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಸಂದರ್ಭವನ್ನು ಗ್ರಹಿಸುವ ಯಾರಿಗಾದರೂ ತಿಳಿಯುತ್ತದೆ, Islamophobia (ಮುಸ್ಲಿಮ್‌ ಸಮುದಾಯದ ಮೇಲೆ ಅಕಾರಣ ಭಯ, ಪೂರ್ವಗ್ರಹ ಮತ್ತು ದ್ವೇಷ) ಎಂಬುದು ಎಷ್ಟರ ಮಟ್ಟಿಗೆ ನಮ್ಮ ಮನಸ್ಸುಗಳನ್ನು ಆವರಿಸಿದೆ ಎಂಬುದು. ಮನೆ, ಶಾಲೆ, ಕಾಲೇಜು, ಉದ್ಯಾನವನ ಕಡೆಗೆ ಉದ್ಯೋಗದ ಸ್ಥಳಗಳವರೆಗೂ ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಕಾಣಬಹುದು. “ಮುಸ್ಲಿಮರು ಗಲೀಜು ಜನ”, “ಕಾಫಿರರನ್ನು ಕೊಲ್ಲುತ್ತಾರೆ”, “ಹಿಂದೂಗಳು ಸೌಮ್ಯರು ಆದರೆ ಮುಸ್ಲಿಮರು ಕೊಲೆಪಾತಕರು”, “ಮುಸ್ಲಿಮರು ಕನ್ನಡ ಪ್ರಿಯರಲ್ಲ, ಭಾರತಕ್ಕೆ ಅವರೆಂದೂ ನಿಷ್ಠರಲ್ಲ”, “ಉದಾರವಾದಿಗಳು ತುರ್ಕರಿಗೆ ಹುಟ್ಟಿದೋರು”, “ನನಗೆ ಮುಸ್ಲಿಮರನ್ನು ಕಂಡರೆ ಆಗುವುದಿಲ್ಲ”… ಈ ಪಟ್ಟಿ ಪುಟಗಟ್ಟಲೇ ಸಾಗುತ್ತದೆ. ಈ ಎಲ್ಲ ವಿಷಜಾಲದಿಂದ ಬಿಡಿಸಿಕೊಂಡು ಬರುವಷ್ಟರಲ್ಲಿ ಅರ್ಧ ಆಯಸ್ಸೇ ಮುಗಿದು ಹೋಗಿರುತ್ತದೆ. ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಲ್ಲಂತೂ Islamophobiaದ contentಗೆ ಕೊರತೆಯೂ ಇಲ್ಲ, ಅಡೆತಡೆಯೂ ಇಲ್ಲ ಎನ್ನುವಂತಾಗಿದೆ. ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಜಾತಿ ದೌರ್ಜನ್ಯ, ಅತ್ಯಾಚಾರ, ಕಾರ್ಮಿಕರ ಶೋಷಣೆ, ಬಡತನ, ನಿರುದ್ಯೋಗ ಮತ್ತು ಪರಿಸರ ಮಾಲಿನ್ಯವು ಮತದ್ವೇಷ ಪಸರಿಸುವವರ ಆತ್ಮಸಾಕ್ಷಿಯನ್ನು ಕಲಕುವುದಿಲ್ಲ ಬದಲಿಗೆ ಇವೆಲ್ಲವು “ಸುಳ್ಳು” ಎಂಬಂತೆ ವಾದ ಮಂಡಿಸುತ್ತಾರೆ ಅಥವಾ ಆ ಬಗೆಗೆ ತುಟಿ ಬಿಚ್ಚುವುದಿಲ್ಲ.

ಹಾಗಿದ್ದರೆ ಮುಸ್ಲಿಮ್‌ ಸಮುದಾಯದಲ್ಲಿ ಜಾತಿ ಇಲ್ಲವೆ? ಸ್ತ್ರೀ ಶೋಷಣೆ ಇಲ್ಲವೆ? ಮತೀಯತೆ ಇಲ್ಲವೆ? ಖಂಡಿತ ಇದೆ. ಭೂಮಿ ಮೇಲಿರುವ ಅನೇಕ ಧರ್ಮಗಳಲ್ಲಿ ಅನಿಷ್ಟಗಳು ನಾನಾ ರೂಪದಲ್ಲಿ ತಾಂಡವ ಆಡುತ್ತಿವೆ, ಈ ಸಮುದಾಯಗಳಲ್ಲಿರುವ ಬಲಾಢ್ಯರು ಮತ್ತು ರಾಜಕೀಯ-ಅಧಿಕಾರದಾಹಿಗಳು ಈ ಅನಿಷ್ಟಗಳನ್ನು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ನಿರ್ಮಿಸಿ ಬಳಸಿಕೊಂಡಿದ್ದಾರೆ. ಇವುಗಳನ್ನು ಸುಧಾರಿಸಲೆಂದೇ ಸಾಧು-ಸಂತರು, ಕವಿಗಳು, ಸಾಹಿತಿಗಳು ಹುಟ್ಟಿ ಬರುವುದನ್ನು ಎಲ್ಲಾ ದೇಶಕಾಲದಲ್ಲೂ ಕಾಣಬಹುದು. ಸಮುದಾಯದ ಕೊಳಕನ್ನು ಎತ್ತಿ ತೋರಿಸಿ, ಜನಮನಗಳಲ್ಲಿ ಸಂವೇದನೆ ಉಂಟು ಮಾಡುವ ಸಾಹಿತ್ಯ ರಚಿಸಿ, ಮನುಷ್ಯರ ನಡುವೆ ಬಂಧುತ್ವ ಸಾಧಿಸಲು ಪ್ರೇರೇಪಿಸುತ್ತಾರೆ. ಬಸವಣ್ಣ, ಅಕ್ಕಮಹಾದೇವಿ, ಗುರು ನಾನಕ್‌, ಮಹಾತ್ಮ ಗಾಂಧಿ, ಕನಕದಾಸರು, ಶಿಶುನಾಳ ಶರೀಫರು, ಕುವೆಂಪು ಮುಂತಾದವರು. ಆ ಪಟ್ಟಿಗೆ ಬಾನು ಮುಷ್ತಾಕರೂ ಸೇರುತ್ತಾರೆ. ಕವಿ ಮತ್ತು ಸಾಹಿತಿಯ ಕುರಿತಾಗಿ ಕುವೆಂಪುರವರು ತಮ್ಮ “ಸಾಹಿತ್ಯ ಪ್ರಚಾರ” ಕೃತಿಯಲ್ಲಿ ಹೀಗೆ ಹೇಳುತ್ತಾರೆ, “ಕವಿ ಜನಮನಸ್ಸಿನ ನಿಧಿಯಾಗಿ, ಪ್ರತಿನಿಧಿಯಾಗಿ, ಪಾರದರ್ಶಿಯಾಗಿರುವುದರಿಂದ ಕವಿಸೃಷ್ಟಿಯಾದ ಸಾಹಿತ್ಯವೂ ಜನಜೀವನದ ನಿಧಿಯೂ ಪ್ರತಿನಿಧಿಯೂ ಆಗುವುದಲ್ಲದೆ ಭವಿಷ್ಯತ್ತಿನ ಮಾರ್ಗದರ್ಶಿಯೂ ಆಗುತ್ತದೆ. ಲಕ್ಷೋಪಲಕ್ಷ ಹೃದಯಗಳ ಆಸೆಯ ಭಯದ ಆಕಾಂಕ್ಷೆಯ ಆನಂದದ ಕಷ್ಟ ಸಂಕಟದ ಸಾಹಸ ಪ್ರಯತ್ನದ ಸೋಲು ಗೆಲುವಿನ ಮೂಕಮೌನಕ್ಕೆ ಕವಿ ವಾಣಿಯಾಗುತ್ತಾನೆ. ಆ ವಾಣಿಯನ್ನು ಆಲಿಸಿದ ಜನಜೀವನದಲ್ಲಿ ಅದಕ್ಕೆ ಪ್ರತಿಕ್ರಿಯೆಯಾಗಿ ಮತ್ತೆ ಹೊಸ ಹೊಸ ಆಸೆ ಭಯ ಆಕಾಂಕ್ಷೆ ಸಾಹಸ ಪ್ರಯತ್ನಗಳು ಮೈದೋರುತ್ತವೆ. ಏಕೆಂದರೆ, ಸಾಹಿತ್ಯಕ್ಕೆ ಜನಜೀವನ ಪ್ರೇರಕಶಕ್ತಿಯಾಗುವಂತೆ ಜನಜೀವನಕ್ಕೆ ಸಾಹಿತ್ಯ ಪ್ರಚೋದಕಶಕ್ತಿಯಾಗುತ್ತದೆ.”

Advertisements
banu mushtaq

ಕನ್ನಡ ಮತ್ತು ಭಾರತ ಸಾಹಿತ್ಯ ಲೋಕವೇ ಹೆಮ್ಮೆಪಟ್ಟು ಸಂಭ್ರಮಿಸುವಂತ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ದೊರಕಿದಾಗಲೂ ಬಲಪಂಥಿಯರು ಮತ್ತು ಇಸ್ಲಾಮೋಫೋಬಿಯಾ ಪ್ರಚಾರಕರು ಸಾಮಾಜಿಕ ಜಾಲತಾಣದಲ್ಲಿ ಬಾನು ಮುಷ್ತಾಕರ ಗೆಲುವನ್ನು ಸಂಭ್ರಮಿಸಲಿಲ್ಲ. ಅಷ್ಟ್ಯಾಕೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಕೂಡ ಒಂದು ಶುಭಾಶಯವನ್ನು ಮುಷ್ತಾಕ್‌ ಮತ್ತು ಭಾಸ್ತಿಯವರಿಗೆ ಕೋರಲಿಲ್ಲ. ಅದು ಹಿಂದಿ ಯಜಮಾನಿಕೆಯ ಕನ್ನಡ ಕಡೆಗಣನೆ ಧೋರಣೆ ಮತ್ತು ಮತೀಯತೆಯಿಂದ ಉಂಟಾಗುವ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ. ಮುಷ್ತಾಕ್ ಇಸ್ಲಾಂ ಸಮುದಾಯದಲ್ಲಿ ಬೇರುಬಿಟ್ಟಿರುವ ಮತೀಯತೆ ಮತ್ತು ಪುರುಷಪ್ರಧಾನ ವ್ಯವಸ್ಥೆಯ ಕರಾಳತೆಯನ್ನು ಕಥಾರೂಪದಲ್ಲಿ ತೆರದಿಟ್ಟು ಜೊತೆಗೆ ಹೋರಾಟದ ಅಖಾಡಕ್ಕೂ ಇಳಿದವರು. ತನ್ನ ಸಮುದಾಯದ ಸುಧಾರಣೆಗೆ ಮತ್ತು ಮಹಿಳಾ ವಿಮೋಚನೆಗೆ ಹಾತೊರೆಯುವ ಬಾನು ಮುಷ್ತಾಕರ ಪಥಕ್ಕೂ ಮತ್ತು “ಜನಪ್ರಿಯ” ಬಲಪಂಥೀಯರ Islamophobiaಕ್ಕು ವ್ಯತ್ಯಾಸವಿದೆ ಗಮನಿಸಿ. ಕಾರಣ ಅವರು ಆ ಸಮುದಾಯದಲ್ಲಿ ಸುಧಾರಣೆ ಬಯಸುವವರಲ್ಲ ಬದಲಿಗೆ ಸಮುದಾಯವರ ಬಗ್ಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಹುಸಂಖ್ಯಾತರಲ್ಲಿ ಪೂರ್ವಾಗ್ರಹ ಬಿತ್ತುವುದಷ್ಟೇ ಅವರ ನಿತ್ಯಕಾಯಕ. ಇದು ಸುಳ್ಳು ಎಂದಾದರೆ, ಅವರು ಸಂಭ್ರಮಿಸಬೇಕಿತ್ತು. ಬಾನು ಅವರ ಧೈರ್ಯವನ್ನು ಮೆಚ್ಚಬೇಕಿತ್ತು ಅಲ್ಲವೇ?

ಇದನ್ನೂ ಓದಿ ಸಮಾಜದ ಫತ್ವಾ ಎದುರಿಸಿ ʼಬೆಂಕಿಮಳೆʼಯೇ ಆಗಿದ್ದರು ಬಾನು
ಇದನ್ನೂ ಓದಿ ಭಾರತದ ʼಬಾನುʼ ಬೆಳಗಿತು, ಕನ್ನಡದ ಹೃದಯ ʼದೀಪʼ ಬೆಳಗಿತು! ; ಲೇಖಕಿಯರ ಸಂಭ್ರಮ

ಮುಸ್ಲಿಮ್‌ ಮೂಲಭೂತವಾದಿಗಳು ಮೊದಲಿನಿಂದಲೂ ಮುಷ್ತಾಕರ ಸಾಹಿತ್ಯ ವಿರೋಧಿಸಿಕೊಂಡು ಬಂದವರೇ. ಆದ್ದರಿಂದ ಅವರು ಕೂಡ ಈ ಗೆಲುವನ್ನು ಸಂಭ್ರಮಿಸಿರಲಿಕ್ಕಿಲ್ಲ. ಇದರಿಂದ ಕಂಡುಬರುವುದೇನೆಂದರೆ, ಶೋಷಣೆ, ಹಿಂಸೆ ಮತ್ತು ತಾರತಮ್ಯವೆಂಬುದು ಎಲ್ಲಾ ಸಮುದಾಯಗಳಲ್ಲಿಯೂ ಇರುವಂತಹದ್ದು. ಅದರಿಂದ ಬೆಳೆದ, ಹೊಟ್ಟೆ ತುಂಬಿದವರು ಸದಾ ಬೇರೆಯವರ ಕಡೆ ಬೆರಳು ತೋರಿಸಿ, ತಮ್ಮಲ್ಲಿನ ಕೊಳಕನ್ನು ಮುಚ್ಚಿಕೊಳ್ಳುತ್ತಾರೆ. ಇಲ್ಲವಾದರೆ ತಾವು ಬೆತ್ತಲಾಗಬಹುದು ಎಂಬ ಭಯ ಅವರಲ್ಲಿ ನಿತ್ಯ ಕಾಡುತ್ತಿರುತ್ತದೆ. ಆದರೆ ಸಮಾನತೆ ಮತ್ತು ಬಂಧುತ್ವ ಆಶಿಸುವವರು ಎಂದೆಂದಿಗೂ ಈ ಮತೀಯತೆಯ ಬಲೆಗೆ ಬೀಳದೆ, ವಿಮರ್ಶಾತ್ಮಕ ಮನೋಭಾವದ ಜೊತೆಗೆ ಶೋಷಿತರ ಕುರಿತಾದ ಸಂವೇದನೆ ಬೆಳೆಸಿಕೊಳ್ಳಬೇಕು. ಆಗ ದೇಶವೆಂಬುದು ಮಣ್ಣಲ್ಲ, ಜನರೆಂದು ಅರ್ಥವಾಗುತ್ತದೆ. ಸೌಹಾರ್ದತೆ ಮತ್ತು ಪ್ರಗತಿ ದೇಶಕ್ಕೆ ಪ್ರಾಪ್ತಿಯಾಗುತ್ತದೆ.
ನನ್ನ ಕವಿತೆಯೊಂದಿಗೆ ಈ ಬರಹವನ್ನು ಇಲ್ಲಿಗೆ ಮುಗಿಸುತ್ತೇನೆ.

ಯಾರಿವರು?

ಯಾರಿವರು?
ಏನಿಹುದು ಇವರೆದೆಯಲ್ಲಿ?
ಟೊಂಕಕಟ್ಟಿ ನಿಂತಿರುವರು,
ದ್ವೇಷಕಥನಗಳ ಬಣ್ಣಿಸಲು.

ಯಾರಿವರು?
ಬಂಧುತ್ವದ ಭಾಷೆ ಇಲ್ಲದವರು.
ಎಂದೂ ಕಾಣದವರ ಮೇಲೆ,
ವಿಷವುಣಿಸುತ್ತಿರುವವರು.

ಯಾರಿವರು?
ಪುರಾಣಗಳ ಇತಿಹಾಸ ಮಾಡಿದವರು.
ಅಮಾನುಷ ಕಥನಗಳ,
ನಿಜವೆಂದು ಸಾರುತ್ತಿರುವವರು.

ಯಾರಿವರು?
ಮೌಢ್ಯತೆಯ ಬಿತ್ತಿ ಲಾಭವೆತ್ತುತ್ತಿರುವವರು.
ಸಹಜ ಚಿಂತನೆಯ,
ಮೊಟಕು ಮಾಡುತ್ತಿರುವವರು.

ಯಾರಿವರು?
ಸಿದ್ಧಸೂತ್ರರು, ಅಸಮಾನತೆಯಿಂದ ಮೇಲೆದ್ದವರು.
ಅಸಮಾನತೆ ಇಲ್ಲವೆಂದು,
ಎಂದೋ ಬಿಟ್ಟೆವೆಂದು, ಅಂಚಿನವರ ಚಿಕಿತ್ಸೆ ಸಹಿಸದವರು.

ಯಾರಿವರು?
ವರ್ಣಜಾತಿಯ ಸಮರ್ಥಕರು.
ಸಂತ್ರಸ್ತರೆಂದು ಸಾರುತ್ತಿರುವವರು.
ಕಣ್ಣುಕಿವಿ ಆತ್ಮಸಾಕ್ಷಿಗೆ ಬೆಡ್ಶೀಟ್ ಹೊದಿಸಿಕೊಂಡಿರುವವರು.

ಚರಣ್‌ ಗೌಡ
ಚರಣ್‌ ಗೌಡ ಬಿ ಕೆ
+ posts

ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚರಣ್‌ ಗೌಡ ಬಿ ಕೆ
ಚರಣ್‌ ಗೌಡ ಬಿ ಕೆ
ಪತ್ರಿಕೋದ್ಯಮ ಪದವಿ ವಿದ್ಯಾರ್ಥಿ, ಬೆಂಗಳೂರು

11 COMMENTS

    • ವಿಷಯಕ್ಕೂ ನಿಮ್ಮ ಕಮೆಂಟಿಗೂ ಸಂಬಂಧವೇ ಇಲ್ಲ. ಬಾನು ಅವರು ದೇಶದ ವಿರುದ್ಧ ಹಾಕಿದ ಪೋಸ್ಟ್‌ ಯಾವುದು? ಇಲ್ಲಿ ಹಾಕಿ, ಅದರ ಬಗ್ಗೆಯೂ ಒಂದು ಲೇಖನ ಬರೆಸೋಣ. ಮೋದಿಯವರ ವಿರುದ್ಧ ಪೋಸ್ಟ್‌ ಹಾಕಿದ್ರೆ ಅದು ಮೋದಿ ವಿರುದ್ಧ ಅಷ್ಟೇ, ಮೋದಿ ಅಂದ್ರೆ ದೇಶ ಅಲ್ಲ, ಮೊದಲು ಅದು ಗಮನದಲ್ಲಿರಲಿ. ಯಾವುದು ಆ ಪೋಸ್ಟ್‌ ಅಂತ ತಿಳಿಸಿ.

  1. ತುಂಬಾ ಅರ್ಥಪೂರ್ಣವಾಗಿ ಬರೆದಿದ್ದೀರ ಚರಣ್ ಗೌಡ್ರೆ.. ಶ್ರೀಮತಿ ಭಾನು ಮಸ್ತಾಕ್ ಹಾಗೂ ಶ್ರೀಮತಿ ದೀಪ್ತಿ ಅವರಿಗೆ ದೇವರು ಹಾಗೂ ಪ್ರಕೃತಿ ಮಾತೆ ,ನಮ್ಮ ಭಾರತಾಂಬೆ ತಾಯಿ ಹಾಗೂ ಕನ್ನಡಾಂಬೆ ತಾಯಿ ಅವರಿಗೆ ಹೆಚ್ಚು ಆರೋಗ್ಯ ಸಂತೋಷ ಹಾಗೂ ಪ್ರಶಸ್ತಿಗಳನ್ನು ಬರಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ..,

    • ಹತ್ತು ಹಿಂದೂ ಭಯೋತ್ಪಾದಕರ ಹಾಗು ಹತ್ತು ಇತರ ಭಯೋತ್ಪಾದಕರ ಪಟ್ಟಿ ಬರೆಯಿರಿ.. ಹಾಗು ಯಾವ ಪಟ್ಟಿ ಬರೆಯುವುದು ಸುಲಭ ಎಂಬ ಆಧಾರದ ಮೇಲೆ ಈ ಮೇಲಿನ ಬರಹ ಹಾಗು ಬರಹಗಾರರ ಮನೋಸ್ಥಿತಿಯನ್ನು ಪರಾಮರ್ಶಿಸಿರಿ.. ಇನ್ನು ಅಭಿಪ್ರಾಯ ಈ ಪಟ್ಟಿ ಮಾಡುವ ಓದುಗರಿಗೆ ಬಿಟ್ಟಿದ್ದು… ಇಸ್ಲಾಂ ಫೋಬಿಯ…. ವಾವ್

      • ವಿಷಯಕ್ಕೂ ನಿಮ್ಮ ಕಮೆಂಟಿಗೂ ಸಂಬಂಧವೇ ಇಲ್ಲ. ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಪ್ರಶಸ್ತಿ ಮೊದಲ ಬಾರಿಗೆ ಕನ್ನಡದ ಲೇಖಕಿಗೆ ಬಂದಿದೆ. ಅವರಿಗೂ ಭಯೋತ್ಪಾದಕರಿಗೂ ಏನು ಸಂಬಂಧ? ಇತ್ತೀಚೆಗೆ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡಿ ಸಿಕ್ಕಾಕಿಕೊಂಡ ಎಲ್ಲರೂ ಹಿಂದೂಗಳು. ಅವರ ಹೆಸರಿನ ಪಟ್ಟಿ – ವೇತನ್‌ ಲಕ್ಷ್ಮಣ್‌, ಅಕ್ಷಯ್‌ ರವಿ ( ಜೊತೆಗೆ ಇತರ 8 ಮಂದಿ), ದೇವೇಂದ್ರ, ಜ್ಯೋತಿ ಮಲ್ಹೋತ್ರಾ (ಮತ್ತೆ ಆರುಮಂದಿ), ದೀಪ್‌ ರಾಜ್‌ , ಸಹದೇವ್‌ , ನಾರಾಯಣ ಲಾಲ್‌, ಕುಲದೀಪ್‌ ಸಿಂಗ್‌. ಇವರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಮುಸ್ಲಿಮರ ಹೆಸರು ಹೇಳಿ ಹಿಂದೂಗಳು ದೇಶದ್ರೋಹ ಪ್ರಕರಣಲ್ಲಿ ಜೈಲಿಗೆ ಹೋಗ್ತಿದ್ದಾರೆ. ನಿಮ್ಮಂಥ ಇಸ್ಲಾಮೋಫೋಬಿಯಾ ರೋಗಿಗಳು ಹೀಗೇ ಇರಿ.

  2. ಇದೇ ಪ್ರಧಾನಿ ಮೋದಿಯವರು ನಮ್ಮ ಹರೇಕಳ ಹಾಜಬ್ಬರಿಗೆ ಪದ್ಮ ಪ್ರಶಸ್ತಿ ಕೊಟ್ಟರು. ಆಗ ನಿಮ್ಮ ಬಾಯಿ ಯಾಕೆ ಮುಚ್ಚಿತ್ತು

    • ಮೇಡಂ ಬರಹವನ್ನು ಇನ್ನೊಮ್ಮೆ ಸರಿಯಾಗಿ ಓದಿ. ಇಸ್ಲಾಮ್ ಸಮುದಾಯದ ಕುರಿತು ಬೆಳಗ್ಗಿನಿಂದ ಸಂಜೆಯವರೆಗೂ ವಿಷ, ದ್ವೇಷ ಕಾರುವ ತಂಡದವರು ಅದೇ ಸಮುದಾಯದ ಒಬ್ಬ ದಿಟ್ಟ ಮಹಿಳೆ ತನ್ನ ಸಮುದಾಯದ ಮೂಲಭೂತವಾದಿಗಳನ್ನು ಎದುರು ಹಾಕಿಕೊಂಡು, ಸಂಕಷ್ಟಿತ ಹೆಣ್ಣು ಮಕ್ಕಳ ಬದುಕಿನ ಚಿತ್ರಣವನ್ನು ಜನರ ಮುಂದಿಟ್ಟು, ಸುಧಾರಣೆ ಬದಲಾವಣೆ ಬಯಸಿದರಲ್ಲ, ಅದನ್ಯಾಕೆ ಸಂಭ್ರಮಿಸಲಿಲ್ಲ ಎಂಬುದು ಪ್ರಶ್ನೆ. ಅದೇ ನಿಟ್ಟಿನಲ್ಲಿ ವಿಶ್ವವಿಖ್ಯಾತ ಪ್ರಶಸ್ತಿಯೊಂದು ಕನ್ನಡಕ್ಕೆ ದೊರಕಿದಾಗ ದೇಶದ ಪ್ರಧಾನಿ ಶುಭಾಶಯ ಕೋರುವುದು ಅವಶ್ಯಕ. ನಿಮ್ಮ ಹಿಂದಿ ಯಜಮಾನರಿಗೆ ಕನ್ನಡದ ಲೇಖಕಿಗೆ ಶುಭಾಶಯ ಕೊರಲಿಕ್ಕೆ ಸೊಕ್ಕೇ?

    • ಬೂಕರ್‌ ಪ್ರಶಸ್ತಿ ಭಾರತೀಯ ವಿಜೇತೆಗೆ ಅಭಿನಂದಿಸದ ಪ್ರಧಾನಿ ಮೋದಿಯವರ ಸಣ್ಣತನ ಜಗತ್ತಿಗೆ ಗೊತ್ತಾಗಿದೆ. ಹಾಜಬ್ಬರಿಗೆ ಪ್ರಶಸ್ತಿ ಕೊಟ್ಟಾಗ ಏನು ಮಾಡಬೇಕಿತ್ತು? ಹಾಗೆಯೇ ಬಾನು ಅವರಿಗೆ ವಿಷ್‌ ಮಾಡಿದ್ರೆ ಏನಾದರೂ ನಷ್ಟಆಗ್ತಿತ್ತಾ ಹೇಳಿ.ಮೋದಿ ದೇಶದ ಪ್ರಧಾನಿ ಎಂಬುದನ್ನು ಅವರೇ ಮರೆತಿದ್ದಾರೆ. ಚುನಾವಣೆಯ ಸಮಯದಲ್ಲಿ ಅವರ ಭಾಷಣವೇ ಅದನ್ನು ಸಾರಿ ಹೇಳಿದೆ. ಈಗ ಬಾನು ಮೇಡಂಗೆ ನಷ್ಟ ಆಗಿಲ್ಲ. ವಿಷ್‌ ಮಾಡದವರ ಅಹಂಕಾರ ಗೊತ್ತಾಯ್ತಷ್ಟೇ.

  3. ಭಾನು ಮುಸ್ತಾಕ್ ಅವರ ಕನ್ನಡಾಭಿಮಾನಕ್ಕೆ ನನ್ನ ಅಭಿನಂದನೆಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X