ಮದ್ಯಪಾನ, ನೃತ್ಯಕ್ಕೆ ಬಲವಂತ: ಹಿಜಾಬ್ ಧರಿಸಿದ ಆಸ್ಟ್ರೇಲಿಯಾದ ಪ್ರಥಮ ಸೆನೆಟ್ ಸದಸ್ಯೆ ಆರೋಪ

Date:

Advertisements

ಪುರುಷ ಸಹೋದ್ಯೋಗಿಗಳು ತನ್ನನ್ನು ಮದ್ಯಪಾನ ಮಾಡುವಂತೆ ಮತ್ತು ಟೇಬಲ್ ಬಳಿ ನೃತ್ಯ ಮಾಡುವಂತೆ ಬಲಪಡಿಸಿದ್ದಾಗಿ ಆಸ್ಟ್ರೇಲಿಯಾದ ಮುಸ್ಲಿಂ ಸಂಸದೆ ಫಾತಿಮಾ ಪೇಮನ್ ಸದನದ ಸಮಿತಿಗೆ ದೂರು ನೀಡಿದ್ದಾರೆ.

ತಾವು ಮದ್ಯಪಾನ ಮಾಡುವುದಿಲ್ಲವಾದರೂ ಹಿರಿಯ ಸಹೋದ್ಯೋಗಿಯೊಬ್ಬರು ಅಧಿಕೃತ ಸಮಾರಂಭವೊಂದರಲ್ಲಿ ಪಾನಮತ್ತರಾಗಿ ಹಲವು ಅಸಮಂಜಸ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾಗಿ ಸೆನೆಟ್ ಸದಸ್ಯೆ ಫಾತಿಮಾ ಪೇಮನ್ ಆಪಾದಿಸಿದ್ದಾರೆ.

“ಒಂದಷ್ಟು ವೈಸ್ ಸೇವಿಸಿ ಮತ್ತು ನೀವು ವೈನ್ ಟೇಬಲ್ ಬಳಿ ನೃತ್ಯ ಮಾಡುವುದನ್ನು ನಾನು ನೋಡಬೇಕು” ಎಂದು ಹಿರಿಯ ಸದಸ್ಯರು ಹೇಳಿದ್ದಾಗಿ ಎಬಿಸಿ ಪ್ರಸಾರ ಸಂಸ್ಥೆ ಜತೆ ಮಾತನಾಡಿದ ಪೇಪನ್ (30) ವಿವರಿಸಿದ್ದಾರೆ.

Advertisements

“ನಾನು ಒಂದು ಮಿತಿ ಹಾಕಿಕೊಂಡಿದ್ದೇನೆ ಹಾಗೂ ಈ ಬಗ್ಗೆ ಅಧಿಕೃತವಾಗಿ ದೂರು ನೀಡುವುದಾಗಿ ಪ್ರತಿಕ್ರಿಯಿಸಿದೆ” ಎಂದು ಅವರು ಹೇಳಿದ್ದಾರೆ. ಆದರೆ ಈ ಘಟನೆ ಯಾವಾಗ ನಡೆದಿದೆ ಹಾಗೂ ಹಿರಿಯ ಸಹೋದ್ಯೋಗಿ ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?

ಅಫ್ಘಾನಿಸ್ತಾನ ಮೂಲದ ಪೇಮನ್ ಆಸ್ಟ್ರೇಲಿಯಾದ ಸಂಸತ್ತಿನೊಳಗೆ ಹಿಜಾಬ್ ಧರಿಸಿದ ಮೊದಲ ಸೆನೆಟ್ ಸದಸ್ಯೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ರಾಜಕೀಯ ಸಿಬ್ಬಂದಿ ಬ್ರಿಟ್ಟನಿ ಹಿಗ್ಗಿಗ್ಸ್ 2021ರಲ್ಲಿ ಸಂಸತ್ ಕಚೇರಿಯ ಒಳಗೇ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆಪಾದಿಸಿದ್ದು, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಅತ್ಯಧಿಕವಾಗಿ ಮಧ್ಯಪಾನ ಮಾಡುವುದು ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ ಎನ್ನುವುದನ್ನು ಆ ಬಳಿಕ ನಡೆದ ತನಿಖಾ ವರದಿ ಬಹಿರಂಗಪಡಿಸಿತ್ತು.

2022 ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದಿಂದ ಲೇಬರ್ ಸೆನೆಟರ್ ಆಗಿ ಆಯ್ಕೆಯಾದ ಪೇಮನ್, ಕಳೆದ ಸಂಸತ್ತಿನ ಅತ್ಯಂತ ಕಿರಿಯ ಸದಸ್ಯರಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಗಾಝಾದಲ್ಲಿ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡ ಹಮಾಸ್: ವರದಿ

ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ...

Download Eedina App Android / iOS

X