ಚಿತ್ರದುರ್ಗ | ನಗರಸಭೆ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಕ್ಕೆ ಸದಸ್ಯರ ಮೇಲೆ ಗರಂ.

Date:

Advertisements

ನಗರಸಭೆ ಕಾರ್ಯ ವೈಫಲ್ಯಗಳನ್ನು, ಸಮಸ್ಯೆಗಳನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿ ನಮಗೆ ಅಗೌರವ ತರುತ್ತಿದ್ದಾರೆ ಎಂದು ಆರೋಪಿಸಿ, ಈ ರೀತಿ ಮಾಡುವುದು ಒಳ್ಳೆಯದಲ್ಲ ಎಂದು ನಗರಸಭಾ ಸದಸ್ಯರೊಬ್ಬರಿಗೆ ಹೆದರಿಸುವ ರೀತಿಯಲ್ಲಿ ವರ್ತಿಸಿರುವುದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರಸಭೆಯಲ್ಲಿ ತುರ್ತುಸಭೆ ಕರೆದಿದ್ದ ವೇಳೆ ನಡೆದಿದೆ.

ಸದಸ್ಯ ನೇತಾಜಿ ಪ್ರಸನ್ನ ಚಳ್ಳಕೆರೆ ನಗರಸಭೆಯಲ್ಲಿ ಇರುವ ಸಮಸ್ಯೆಗಳ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕವಾಗಿ ನೇರ ನೇರ ತಿಳಿಸುತ್ತಾರೆ. ಇದನ್ನು ವಿರೋಧಿಸಿ ಕೆಲಸ ಮಾಡದೆ ಇರುವ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಸಮಸ್ಯೆ ‘ವಿಷಯಗಳನ್ನು ಸಾರ್ವಜನಿಕವಾಗಿ ತಿಳಿಸಿ ಅಗೌರವ ತರುತ್ತಿದ್ದಾರೆ ಎಂದು ಆರೋಪಿಸಿ
ಈ ರೀತಿ ಮಾಡುವುದು ಒಳ್ಳೆಯದಲ್ಲ’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

1002067224
ಚಳ್ಳಕೆರೆ ನಗರಸಭೆಯಲ್ಲಿ ಸದಸ್ಯರ ಆರೋಪ, ವಾಗ್ವಾದ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಾಮನಿರ್ದೇಶಿತ ಸದಸ್ಯ ಪ್ರಸನ್ನ, “ಬುಧವಾರ ನಡೆದ ನಗರಸಭೆಯ ತುರ್ತು ಸಭೆಯಲ್ಲಿ ಪೌರ ಸೇವಾ ನೌಕರರು ಅಧ್ಯಕ್ಷರು ಮತ್ತು ಕೆಲ ನೌಕರರು ಸಭೆಗೆ ಬಂದು ನೇತಾಜಿ ಪ್ರಸನ್ನ ಅವರು ನಗರಸಭೆ ಕಾರ್ಯ ವೈಫಲ್ಯಗಳನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿ ನಮಗೆ ಅಗೌರವ ತರುತ್ತಿದ್ದಾರೆ ಎಂದು ಆರೋಪಿಸಿ
ಈ ರೀತಿ ಮಾಡುವುದು ಒಳ್ಳೆಯದಲ್ಲ ಎಂದು ಸಭೆಯಲ್ಲಿ ನನಗೆ ತಿಳಿಸಿದರು. ಇದಕ್ಕೆ ಬಹಳಷ್ಟು ಜನ ಸದಸ್ಯರು ಅವರ ಬೆಂಬಲಕ್ಕೆ ನಿಂತರು. ಇದು ಚಳ್ಳಕೆರೆಯ ವಿಶೇಷ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisements
1002067223

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಚಳ್ಳಕೆರೆ ನಾಗರಿಕರು
“ಒಳ್ಳೆಯ ವಿಚಾರಕ್ಕೆ ಬೆಂಬಲ ನೀಡುವುದಿಲ್ಲ ಯಾರಾದರೂ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಪ್ರಾರಂಭಿಸಿದರೆ ಅವರನ್ನು ಎಲ್ಲಾ ದುಷ್ಟ ಶಕ್ತಿಗಳು ಸೇರಿಕೊಂಡು ತುಳಿಯುವ ಪ್ರಯತ್ನ ಮಾಡುತ್ತಾ ಬಂದಿದಾರೆ. ಈಗ ನಿಮ್ಮನ್ನು ಸಹ ಹಾಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚಳ್ಳಕೆರೆಯಲ್ಲಿ ಈ ಹಿಂದೆ ಮಹೇಶ್ ನಗರಂಗೆರೆ ರವರಿಗೂ ಕೂಡ ಹೀಗೆ ಆಗಿದ್ದು, ವಿಶೇಷ ಎಂದರೆ ಇದೆ. ಸಮಾಜಕ್ಕೆ ಹೋರಾಟ ಮಾಡುವವರಿಗೆ ಸಹಕಾರ ನೀಡಿದೆ, ಹೆದರಿಸುವ ರೀತಿಯಲ್ಲಿ ವರ್ತಿಸುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1002067222

“ವೈಫಲ್ಯಗಳನ್ನು ಹೇಳಿದ್ದರಲ್ಲಿ ತಪ್ಪೇನಿದೆ. ಕೆಲವರ ಬಂಡವಾಳ ಬಯಲಿಗೆ ಬಂದಿದೆ ಎಂದು ಸದಸ್ಯ ಪ್ರಸನ್ನರವರ ಮೇಲೆ ಕೆಲಸ ಮಾಡದೆ ಇರುವ ನೌಕರರು , ಅಧಿಕಾರಿಗಳು ಮತ್ತು ಸದಸ್ಯರು ಅವರ ಮೇಲೆ ಮುಗಿಬಿದ್ದಿರುತ್ತಾರೆ. ಒಳ್ಳೆಯ ಕೆಲಸಕ್ಕೆ ಕೈಜೋಡಿಸುವವರು ತುಂಬಾ ಕಡಿಮೆ. ಇದೊಂದು ಉದಾಹರಣೆ” ಎಂದು ತಿಮ್ಮರಾಜು ಎನ್ನುವವವರು ಆಕ್ಷೇಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ ? ಆರ್‌ಟಿಇ ಪ್ರವೇಶಾತಿ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ; ಚಾತಕ ಪಕ್ಷಿಯಂತೆ ಕಾಯುತ್ತಿರುವ ಪೋಷಕರ ಕಳವಳ

ನಗರಸಭೆ ಸದಸ್ಯರೊಬ್ಬರು ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಬೆಳಕು ಚೆಲ್ಲಿದರು ಎಂದು ಅವರನ್ನು ಆಕ್ಷೇಪಿಸುವುದು ಎಷ್ಟು ಸರಿ.‌ ಅಲ್ಲದೇ ನಗರಸಭೆ ಕೆಲ ಅಧಿಕಾರಿಗಳು, ನೌಕರರು ನಗರಸಭೆ ಸದಸ್ಯ, ಜನಪ್ರತಿನಿಧಿಯ ಮೇಲೆಯೇ ಹರಿಹಾಯ್ದಿರುವುದು ಕಾನೂನಾತ್ಮಕವಾಗಿ ಉತ್ತಮ ನಡೆಯಲ್ಲ.‌ ಇದನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಉತ್ತಮ ಕೆಲಸ ನಿರ್ವಹಿಸುವವರ ಬೆಂಬಲಕ್ಕೆ ನಿಲ್ಲಬೇಕಾಗಿದೆ.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನರೇಗಾ ಕೆಲಸ, ಕೂಲಿ ವಿಳಂಬ ವಿರೋಧಿಸಿ ಗ್ರಾಕೂಸ್ ಕಾರ್ಯಕರ್ತರ ಪತ್ರ ಚಳವಳಿ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಸಿದ್ಧೇಶ್ವರನ ದುರ್ಗಾ ಗ್ರಾಮ ಪಂಚಾಯಿತಿಯಲ್ಲಿ ನರೇಗಾ-ಉದ್ಯೋಗ...

ಚಿತ್ರದುರ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಯೂರಿಯಾ ಕೊರತೆ; ರೈತರ ಆತಂಕ

ಚಳ್ಳಕೆರೆಯಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವ ಸ್ಥಿತಿ ಎದುರಾಗಿದ್ದು, ಇತಿಹಾಸದಲ್ಲಿ...

Download Eedina App Android / iOS

X