ರಾಯಭಾಗ ತಾಲೂಕಿನ ಮೇಖಳಿ ಗ್ರಾಮದ ಹಠ ಚಕ್ರವರ್ತಿ ಲೋಕೇಶ್ವರ ಸ್ವಾಮೀಜಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಗೈರಾಣು ಜಾಗದಲ್ಲಿ ಮಠ ನಿರ್ಮಿಸಲಾಗಿದೆ. ಕೂಡಲೇ ಮಠದ ಕಟ್ಟಡವನ್ನು ಧ್ವಂಸಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ರು.
ಈ ಹಿನ್ನೆಲೆಯಲ್ಲಿ ರಾಯಬಾಗ ತಾಲೂಕಾಡಳಿತ ಇಂದು ಬೆಳಂಬೆಳಗ್ಗೆ ಜೆಸಿಬಿ ಯಂತ್ರಗಳ ಮೂಲಕ ಮಠಕ್ಕೆ ಆಗಮಿಸಿ ಮಠದ ಕಟ್ಟಡವನ್ನು ಧ್ವಂಸಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಯಬಾಗ ತಹಶೀಲ್ದಾರ್ ಸುರೇಶ ಮುಂಜೆ ನೇತೃತ್ವದಲ್ಲಿ ಮಠದ ತೆರವು ಕಾರ್ಯಾಚರಣೆ ನಡೆದಿದೆ. ಮೂರು ಜೆಸಿಬಿಗಳ ಮೂಲಕ ಮಠದ ತೆರವು ಕಾರ್ಯಚರಣೆ ಮಾಡಲಾಗಿದೆ. ಸ್ವಾಮೀಜಿ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ಮಠದಲ್ಲಿ ಮಚ್ಚು ಲಾಂಗು ಪತ್ತೆಯಾಗಿದ್ದು. ಈ ಕುರಿತು ಸ್ವಾಮೀಜಿ ವಿರುದ್ಧ ಸ್ಥಳೀಯರಿಂದಲೂ ತೀವ್ರ ವಿರೋಧದ ಹಿನ್ನೆಲೆ ಮಠ ನೆಲಸಮ ಮಾಡಲಾಗಿದೆ.