ಕರ್ನಾಟಕ ಹೈಕೋರ್ಟ್‌ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ವಿ ಕಾಮೇಶ್ವರ ರಾವ್ ಅವರನ್ನು ನೇಮಕ ಮಾಡಿ ಕೇಂದ್ರ ಸರಕಾರದ ಕಾನೂನು ಇಲಾಖೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಎನ್.ವಿ.ಅಂಜಾರಿಯಾ ನೇಮಕ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹಂಗಾಮಿ ಸಿಜೆಯಾಗಿ ವಲ್ಲೂರಿ ಕಾಮೇಶ್ವರ ರಾವ್ ನೇಮಿಸಲಾಗಿದೆ.ಕರ್ನಾಟಕ ಹೈಕೋರ್ಟ್‌ಗೆ ಸಿಜೆಯಾಗಿ ನ್ಯಾ.ವಿಭು ಬಖ್ರು ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದು ರಾಷ್ಟ್ರಪತಿಗಳ ಒಪ್ಪಿಗೆ ಬಾಕಿಯಿದೆ. ಅಲ್ಲಿಯವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ವಿ ಕಾಮೇಶ್ವರ ರಾವ್ ನೇಮಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!