ಕೊರಟಗೆರೆ | ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿಗೆ ಪತ್ರಕರ್ತರ ಸಂಘ ಬೆಂಬಲ

Date:

Advertisements

ಪೌರನೌಕರರ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ರಾಜ್ಯಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಅಧಿಕಾರಿಗಳ ವರ್ಗ ಬೆಂಬಲಿಸಿದ್ದಾರೆ.

ಪೌರನೌಕರರ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಕರೆಗೆ ಮಂಗಳವಾರದಿಂದ ಪಟ್ಟಣದ ಬಸ್‌ಸ್ಟಾಂಡ್ ಸರ್ಕಲ್ ಹತ್ತಿರವಿರುವ ಪಟ್ಟಣಪಂಚಾಯಿತಿ ಮುಂಭಾಗದಲ್ಲಿ ಪೌರ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿದ್ದು, ಅದಕ್ಕೆ ಬೆಂಬಲವಾಗಿ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಜೊತೆ ನಿಂತಿದ್ದಾರೆ.

ಸತತ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಪ.ಪಂ ಅಧಿಕಾರಿಗಳವರ್ಗ, ಚುನಾಯಿತ ಪ್ರತಿನಿಧಿಗಳು, ತಾಲ್ಲೂಕು ಕಾರ್ಯನಿರತರ ಪತ್ರರ್ಕತರ ಸಂಘ ಜೊತೆಗೂಡಿ ಪೌರ ನೌಕರನ್ನು ಬೆಂಬಸಿ ಈ ಕೂಡಲೇ ಅವರ ಬೇಡಿಕೆಗಳನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

Advertisements

ಇದೇ ವೇಳೆ ಪಟ್ಟಣಪಂಚಾಯಿತಿ ಅಧ್ಯಕ್ಷೆ ಅನಿತಾ ಮಾತನಾಡಿ ಪೌರ ಕಾರ್ಮಿಕರ ಮುಷ್ಕರಕ್ಕೆ ಸದಸ್ಯರು, ಮುಖ್ಯಾಧಿಕಾರಿಗಳು ಒಳಗೊಂಡು ಬೆಂಬಲ ಸೂಚಿಸಲಾಗಿದೆ, ದಿನಂಪ್ರತಿ ಸಾರ್ವಜನಿಕರ ಆರೋಗ್ಯ ಜೀವನ ನಡೆಸಲು ಮುಖ್ಯಪಾತ್ರವಹಿಸುತ್ತಾರೆ, ಈ ಕೂಡಲೇ ನಮ್ಮ ರಾಜ್ಯ ಸರ್ಕಾರ ನಮ್ಮ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇಸುವಂತೆ ಈ ಮೂಲಕ ಮನವಿ ಮಾಡಿದ್ದಾರೆ.

 ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಸಂಘದ ಕೊರಟಗೆರೆ ಅಧ್ಯಕ್ಷ ಕೆ.ವಿ ಪುರುಷೋತ್ತಮ್ ಮಾತನಾಡಿ ಪೌರ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರ ಮುಂದಿಟ್ಟು ಮುಷ್ಕರ ಕೈಗೊಂಡು ಇಂದಿಗೆ 3ದಿನಗಳನ್ನು ಪೂರ್ಣಗೊಂಡಿವೆ, ವರ್ಷದ 365 ದಿನಗಳಲ್ಲಿ ರಜೆಯೇ ಇಲ್ಲದೇ ನಿರಂತರ ಕರ್ತವ್ಯ ನಿರ್ವಹಿಸಿ ಆರೋಗ್ಯಕರ ಪಟ್ಟಣ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮವಹಿಸುವ ಪೌರ ಕಾರ್ಮಿಕರಿಗೆ ಸೇವಾಭದ್ರತೆ ನೀಡುವ ಮೂಲಕ ಅವರ ಕುಟುಂಬಗಳ ರಕ್ಷಿಸಬೇಕಿದೆ, ನಮ್ಮ ಪೌರನೌಕರರು ಸರ್ಕಾರಕ್ಕೆ ಯಾವುದೇ ವಿಶೇಷ ಭತ್ಯ ಕೇಳುತ್ತಿಲ್ಲ ಸಾಮಾನ್ಯ ಸರ್ಕಾರಿ ನೌಕರರ ಸೌಲಭ್ಯಗಳ ಬೇಡಿಕೆ ಇಟ್ಟಿದ್ದಾರೆ ಸರ್ಕಾರ ಇದನ್ನು ಈಡೇರಿಸುಂತೆ ಕೋರುತ್ತೇವೆ ಎಂದರು.

“ಕಳೆದ 3ದಿನಗಳಿಂದ ನಡೆಯುತ್ತಿರುವ ಕರ್ನಾಟಕ ರಾಜ್ಯ ಪೌರನೌಕರರ ಅನಿರ್ಧಿಷಾವಧಿ ಮುಷ್ಕರದ ಬೇಡಿಕೆಗಳು ನ್ಯಾಯಸಮ್ಮತವಾಗಿದೆ, ನಮ್ಮ ಮುನ್ಸಿಪಾಲ್‌ನ ನೀರುಸರಬರಾಜು, ಪೌರಕಾರ್ಮಿಕರ, ದಿನಗೂಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕೆಲಸಗಾರಿಗೆ ಖಾಯಂಗೊಳಿಸಿ ರಾಜ್ಯ ಸರ್ಕಾರಿ ನೌಕರಂತೆ ಪರಿಗಣಿಸುವ ಅವರ ಬೇಡಿಗಳನ್ನು ಘನ ಸರ್ಕಾರ ಈಡೇರಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಎಸ್ ಉಮೇಶ್ ಮನವಿ ಮಾಡಿದ್ದಾರೆ.

ರಾಜ್ಯದ ಪೌರ ನೌಕರರ ಬೇಡಿಕೆಗಳು :

ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಬೇಕು,   ಜ್ಯೋತಿ ಸಂಜೀವಿನಿ, ಕೆಜಿಐಡಿ, ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು,  ಹೊರಗುತ್ತಿಗೆಯಲ್ಲಿ ಕೆಲಸನಿರ್ವಹಿಸುತ್ತಿರುವ ನೀರುಸರಬರಾಜು, ಚಾಲಕರು,ಲೋಡರ್ಸ್ಕ್ಲೀನರ್ಸ್,ಗಾರ್ಡನರ್,ಸ್ಯಾನಿಟರಿಸೂಪರ್ವೈರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ಹೊರಗುತ್ತಿಗೆ ನೌಕರನ್ನು ನೇರಪಾವತಿಗೆ ಒಳಪಡಿಸಬೇಕು. ದಿನಗೂಲಿ,ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂಗೊಳಿಸಬೇಕು. ನಮ್ಮ ನೌಕರರಿಗೆ ಎಸ್.ಎಫ್.ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು.

ಇದೇ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ಉಸ್ನಾಫಾರಿಯಾ, ಸದಸ್ಯರಾದ ಕೆ.ಆರ್ ಓಬಳರಾಜು, ಲಕ್ಷ್ಮೀ ನಾರಾಯಣ್, ಭಾಗ್ಯಮ್ಮಗಣೇಶ್, ನಂದೀಶ್, ಭಾರತಿಸಿದ್ದಮಲ್ಲಪ್ಪ, ಮಂಜುಳಾ, ಪ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಎನ್ ನಾಗರಾಜು, ಹಿರಿಯ ಪತ್ರಕರ್ತರಾದ ಪದ್ಮನಾಭ್ ಬಿ.ಎನ್, ರಂಗಧಾಮಯ್ಯ, ಸಂಘದ ಸದಸ್ಯರು, ಪೌರಸಂಘದ ಅಧ್ಯಕ್ಷ ನರಸಿಂಹ, ಪ.ಪಂ ಅಧಿಕಾರಿಗಳು ಸೇರಿದಂತೆ ಪೌರನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X