ಕನ್ನಡದ ಬಗ್ಗೆ ಅವಹೇಳನ ಮಾಡಿ ಮಾತನಾಡಿರುವ ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ಚಲನಚಿತ್ರ ಥಗ್ ಲೈಫ್ ಚಿತ್ರ ಬಿಡುಗಡೆಗೆ ಕರವೇ ಅವಕಾಶ ನೀಡಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳು ದಾವಣಗೆರೆ ನಗರದ ಗುರುಭವನದ ಹತ್ತಿರ ಕಮಲ್ ಹಾಸನ್ ಭಾವಚಿತ್ರ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಮಾತನಾಡಿ “ಕನ್ನಡದ ಇತಿಹಾಸ ಗೊತ್ತಿಲ್ಲದೆ ನಟ ಕನ್ನಡದ ಅನ್ನ ತಿಂದು ದ್ರೋಹ ಬಗೆದಿದ್ದಾರೆ. ಕಮಲ್ ಹಾಸನ್ ಕೊನೆಗೂ ತನ್ನ ರಾಜಕೀಯ ಬುದ್ಧಿ ತೋರಿಸಿದ್ದಾನೆ. ಖಾಸಗಿ ಕಾರ್ಯಕ್ರಮದಲ್ಲಿ ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದಾನೆ. ಇಂಥ ಚಲನಚಿತ್ರ ನಟರನ್ನ ಕರ್ನಾಟಕದಿಂದ ಬಹಿಷ್ಕಾರ ಹಾಕಬೇಕು. ಆತನ ಚಿತ್ರಗಳಿಗೆ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟನ ಹೇಳಿಕೆ ಬಗ್ಗೆ ಈಗಾಗಲೇ ಕರವೇ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡರವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಕ್ಕೂ ಮೀರಿ ಚಲನಚಿತ್ರ ಪ್ರದರ್ಶನವಾದರೆ. ಅಂತಹ ಚಲನಚಿತ್ರ ಮಂದಿರಕ್ಕೆ ಮುತ್ತಿಗೆ ಹಾಕಿ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಕಾರ್ಯಕ್ರಮದಲ್ಲಿ ಇದ್ದ ನಟ ಶಿವರಾಜಕುಮಾರ್ ವಿರೋಧ ಮಾಡದೆ ಇರುವುದು ತೀವ್ರ ಬೇಸರದ ಸಂಗತಿ. ಡಾ.ರಾಜಕುಮಾರ್ ಅವರ ಪುತ್ರನಾಗಿ ಕನ್ನಡ ದ್ರೋಹಿ ಹೇಳಿಕೆ ನೀಡಿದಾಗ ಪ್ರತಿರೋಧ ವ್ಯಕ್ತಪಡಿಸಬೇಕಾಗಿತ್ತು. ಆಗ ಶಿವರಾಜ್‌ಕುಮಾರ್ ಅವರನ್ನ ಮತ್ತೋರ್ವ ರಾಜಕುಮಾರರಂತೆ ಕನ್ನಡಿಗರು ಗೌರವಿಸುತ್ತಿದ್ದರು, ಆದರೆ ಇಂದು ಹೇಳಿಕೆ ನೀಡಿ ಶಿವರಾಜಕುಮಾರ್ ಅವರು ಒಂದು ರೀತಿಯಲ್ಲಿ ಕಮಲ್ ಹಾಸನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕಾವೇರಿ ವಿಚಾರ ಬಂದಾಗ ತಮಿಳುನಾಡಿನ ವಿರುದ್ಧ ಹೋರಾಟ ನಡೆಸುವುದು ಕರ್ನಾಟಕಕ್ಕೆ ಅನಿವಾರ್ಯವಾಗಿದೆ. ಆದರೂ ಸಹ ಕನ್ನಡಿಗರು ದಕ್ಷಿಣ ಭಾರತದವರು ನಾವೆಲ್ಲ ಒಂದೇ ಎಂಬ ಭಾವನೆಯಲ್ಲಿ ಬದುಕುತ್ತಿದ್ದರೇ, ಮೂರ್ಖ ಕಮಲ್ ಹಾಸನ್ ಕರ್ನಾಟಕ ತಮಿಳುನಾಡು ನಡುವೆ ಬೆಂಕಿ ಹಚ್ಚಿದ್ದಾನೆ. ತಕ್ಷಣ ಈತನ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರ ಇವನ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಆತನಿಗೆ ನಿರ್ಭಂಧ ವಿಧಿಸಬೇಕು. ಯಾವುದೇ ಕಾರಣಕ್ಕೂ ಆತನಿಗೆ ಪ್ರವೇಶ ಅವಕಾಶ ಕೊಡಬಾರದು, ಅವನ ಚಲನಚಿತ್ರಗಳು ಸಹ ಪ್ರದರ್ಶನವಾಗಲು 5 ರಂದು ಬಿಡುಗಡೆ ಆಗಲಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಮಳೆ ಬಂದರೆ ಸೋರುವ, ಕುಸಿಯುವಂತಿರುವ ಶಾಲಾ ಕಟ್ಟಡ, ಮಕ್ಕಳನ್ನು ದಾಖಲಿಸಲು ಪೋಷಕರ ಆತಂಕ.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಶ್ರೀಮತಿ ಬಸಮ್ಮ, ಮಂಜುಳಾ ಮಾಂತೇಶ್, ಮಂಜುಳಾ ಗಣೇಶ್, ಶಾಂತಮ್ಮ, ಸಾಕಮ್ಮ, ರವಿಕುಮಾರ್, ಗಿರೀಶ್ ಕುಮಾರ್. ಗೋಪಾಲ್ ದೇವರಮನೆ, ಭಾಷಾ, ಸುರೇಶ್, ಚಂದ್ರು, ಮಹೇಶ್ವರಪ್ಪ, ವಾಸುದೇವ ರಾಯ್ಕರ್, ಈಶ್ವರ್, ಸಂತೋಷ್ ಜಿ .ಎಸ್. ನಾಗರಾಜ್, ತುಳಸಿ ರಾಮ್, ಪರಮೇಶ್, ಮಂಜು, ಧರ್ಮರಾಜ, ನಾಗರಾಜ್, ಆಟೋ ರಫಿಕ್, ಜಬಿಉಲ್ಲಾಪೈಲ್ವಾನ್, ಹರಿಹರ ತಾಲೂಕ ಅಧ್ಯಕ್ಷರಾದ ರಾಜೇಶ್, ಇಂತ್ತಿಯಾಜ್, ಶಶಿಕುಮಾರ್, ಮನ್ಸೂರ್ ಅಲಿ, ಚನ್ನಗಿರಿ ತಾಲೂಕ ಅಧ್ಯಕ್ಷರಾದ ಮಲ್ಲನಾಯಕ್, ಬಸವರಾಜ್, ಕುಪೇಂದ್ರ ನಾಯಕ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು