ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಆರ್ ಕೊಪ್ಪದ್,ಪಿಎಸ್‌ಐ, ಕೋಟೆ ಪೊಲೀಸ್ ಠಾಣೆ,ಡಿ ಕೃಷ್ಣಮೂರ್ತಿ ,ಎಎಸ್‌ಐ , ಮಾಳೂರು ಪೊಲೀಸ್ ಠಾಣೆ, ರತ್ನಾಕರ್ ಎಂ,ಎಎಸ್‌ಐ , ಹೊಸನಗರ ಪೊಲೀಸ್ ಠಾಣೆ, ಅರುಣಕುಮಾರ್ ಎಂ ವಿ, ಎಎಸ್‌ಐ, ಭದ್ರಾವತಿ ಗ್ರಾಮಾಂತರ ಠಾಣೆ, ಮೋಹನ್ ಕುಮಾರ್ ಎನ್ ವಿ ಎಆರ್‌ಎಸ್‌ಐ, ಡಿಎಆರ್ ಶಿವಮೊಗ್ಗ ಮತ್ತು ವೆಂಕೋಬರಾವ್ ಕೆ, ಎಆರ್‌ಎಸ್‌ಐ ಡಿ ಎ ಆರ್ ಶಿವಮೊಗ್ಗ,
ಇವರುಗಳು ದಿನಾಂಕಃ 31-05-2025 ರಂದು ವಯೋನಿವೃತ್ತಿಯನ್ನು ಹೊಂದಿದ್ದು, ಇವರುಗಳಿಗೆ, ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು,- 1 ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗ ಜಿಲ್ಲೆ ರವರು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಸತೀಶ್, ಎ ಎ ಓ,ಶಿವಮೊಗ್ಗ ಮತ್ತು ಎಂ ಎಂ ಮಾಳಗಿ ಮತ್ತು ಅರುಣ್ ಶಾಖಾಧೀಕ್ಷಕರು ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ರವರು ಉಪಸ್ಥಿತರಿದ್ದರು
