ಶಿವಮೊಗ್ಗ ಜಿಲ್ಲಾ ಶಿಕಾರಿಪುರ ತಾಲೂಕಿನ ಮಹಿಳೆಯೊಬ್ಬರ ಮನೆಯಲ್ಲಿ ಬೀರುವಿನಲ್ಲಿದ್ದ ಬಂಗಾರದ ಆಭರಣಗಳು ಕಳ್ಳತನವಾಗಿದೆ ಎಂಬ ಕುರಿತಾಗಿ ಜನವರಿ 24 – 2025 ರಂದು ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಸಿರುತ್ತಾರೆ.
ದೂರಿನನ್ವಯ ಪ್ರಕರಣ ಸಂಬಂಧ ಗುನ್ನೆ ಸಂಖ್ಯ 0101/2025 ಕಲಂ 305(ಎ) (ಭಾರತೀಯ ನ್ಯಾಯ ಸಂಹಿತೆ) ಬಿ.ಎನ್.ಎಸ್ ರೀತ್ಯಾ ಪ್ರಕರಣ ಪೊಲೀಸರು ದಾಖಲಿಸಿಕೊಂಡಿರುತ್ತಾರೆ.
ಶಿಕಾರಿಪುರ ಪೊಲೀಸ್ ಉಪಾಧಿಕ್ಷಕರಾದ ಕೇಶವ್ ಹಾಗೂ ಶಿಕಾರಿಪುರ ನಗರ ವೃತ್ತ ಸಿಪಿಐ ಸಂತೋಷ್ ಎಂ ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ ಶರತ್ ಹಾಗೂ ಅಪರಾಧ ವಿಭಾಗ ಸಿಬ್ಬಂದಿಗಳಾದ ಎಚ್ ಸಿ ಸಂತೋಷ್ ಕುಮಾರ್, ಪಿ. ಸಿ. ಶಿವಾಜಿ ರಾವ್ ಎನ್. ಹಾಗೂ ಪಿ ಸಿ ಗಿರೀಶ್ ನಾಯ್ಕ್ ರವರನ್ನ ಒಳಗೊಂಡ ತನಿಖಾ ತಂಡವು ಯಶಸ್ವಿ ಕಾರ್ಯಾಚರಣೆಯ ಮೂಲಕ ಪ್ರಕರಣದ ಆರೋಪಿಯಾದ ಶಿಕಾರಿಪುರ ತಾಲೂಕಿನ ರಂಗನಾಥಪುರ ಕಾಲೋನಿ ನಿವಾಸಿಯಾದ ಅಭಿಷೇಕ್ ಗೌಡ.ಬಿ.ಜೆ ವಯಸ್ಸು (25) ನ್ನು ಬಂಧಿಸುವ ಮೂಲಕ ಕಳವಾಗಿದ್ದ 184 ಗ್ರಾಂ ತೂಕದ ಅಂದಾಜು ಮೌಲ್ಯ 14,70,400/-₹ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಸದರಿ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.
