ದಕ್ಷಿಣ ಗಾಜಾದ ರಫಾದಲ್ಲಿರುವ ಅಮೆರಿಕ ಬೆಂಬಲಿತ ನೆರವು ವಿತರಣಾ ಕೇಂದ್ರದ ಬಳಿ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಮಂದಿ ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 115ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಳಗಿನ ಜಾವ ನೆರವು ಕೇಂದ್ರದ ಬಳಿ ಸಾವಿರಾರು ಜನರು ಜಮಾಯಿಸಿದ ವೇಳೆ ಇಸ್ರೇಲ್ ಸೇನೆ ಜನಸಮೂಹದ ಮೇಲೆ ಗುಂಡು ಹಾರಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಹಮಾಸ್ ಹೇಳಿಕೆ ನೀಡಿದ್ದು, ರಫಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲ್ ಪಡೆಗಳು ಮಾನವೀಯ ನೆರವು ವಿತರಣಾ ಕೇಂದ್ರಗಳಲ್ಲಿ ಜಮಾಯಿಸಿದ ಹಸಿದ ನಾಗರಿಕರ ಮೇಲೆ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದೆ. ಇದು ಮಾನವೀಯ ನೆರವು ಕೇಂದ್ರಗಳಲ್ಲ ಸಾಮೂಹಿಕ ಹತ್ಯಾಕಾಂಡದ ಕೇಂದ್ರಗಳು ಎಂದು ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ
ಒಂದು ವಾರದ ಮುನ್ನ ಗಾಜಾದಲ್ಲಿ ಆಶ್ರಯತಾಣವಾಗಿ ಬದಲಾಯಿಸಲಾದ ಶಾಲೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ಪರಿಣಾಮ 25 ಮಂದಿ ಮೃತಪಟ್ಟಿದ್ದರು. ಈ ಪೈಕಿ ಹೆಚ್ಚಿನವರು ಮಹಿಳೆಯರು, ಮಕ್ಕಳು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಸುಮಾರು 54,000 ಪ್ಯಾಲೆಸ್ತಿನಿಯನ್ನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.