ಪ್ರತಿ ವರ್ಷ ಮೇ 31ರಂದು ವಿಶ್ವದಾದ್ಯಂತ ವಿಶ್ವ ತಂಬಾಕುರಹಿತ ದಿನ(WNTD) ಆಚರಿಸಲಾಗುತ್ತದೆ. ವಾರ್ಷಿಕ ಆಚರಣೆಯು ಸಾರ್ವಜನಿಕರಿಗೆ ತಂಬಾಕು ಬಳಕೆಯ ಅಪಾಯಗಳು, ತಂಬಾಕು ಸಾಂಕ್ರಾಮಿಕ ರೋಗ ಮತ್ತು ಅದು ಉಂಟುಮಾಡುವ ತಡೆಗಟ್ಟಬಹುದಾದ ಸಾವು ಮತ್ತು ರೋಗದ ಬಗ್ಗೆ ಜಾಗತಿಕ ಗಮನ ಸೆಳೆಯಲು WHO ಸದಸ್ಯ ರಾಷ್ಟ್ರಗಳು 1987ರಲ್ಲಿ ವಿಶ್ವ ತಂಬಾಕುರಹಿತ ದಿನವನ್ನು ಸ್ಥಾಪಿಸಿದವು ಎಂದು ಡಾ. ಅಗರ್ ವಾಲ್ ತಿಳಿಸಿದರು.
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಲೋಟಸ್ ಡಿ-ಫಾರ್ಮಸಿ ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ದಿನಾಚರಣೆಯ ಜನ ಜಾಗೃತಿ ಜಾತ ಕಾರ್ಯಕ್ರಮಕ್ಕೆ ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟಿಯ ವೈದ್ಯಾಧಿಕಾರಿ ಡಾ. ಹುಕ್ಕೇರಿ ಚಾಲನೆ ನೀಡಿದ ಬಳಿಕ ಮಾತನಾಡಿದರು.
“ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಅಂದರೆ 30-40 ಹರೆಯದವರಿಗಿಂತ ಹೆಚ್ಚಾಗಿ ಯುವಜನರೇ ಅಧಿಕವಾಗಿ ತಂಬಾಕು ವಸ್ತುಗಳನ್ನು ಸೇವಿಸುತಿದ್ದಾರೆ. ಹಾಗಾಗಿ ಯುವಜನರಿಗೆ ಇದರಿಂದಾಗುವ ಹಾನಿ, ತೊಂದರೆಗಳನ್ನು ಅರ್ಥಮಾಡಿಸಲು ಒಂದು ಕಾರ್ಯಕ್ರಮ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು” ಎಂದರು.
ಜಾಗೃತಿ ಜಾತವನ್ನು ಸಮುದಾಯ ಆರೋಗ್ಯ ಕೇಂದ್ರದಿಂದ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಬಿಜಾಪುರ್ ಸರ್ಕಲ್‌ನಿಂದ ಅಂಬೇಡ್ಕರ್ ಸರ್ಕಲ್‌ವರೆಗೆ ವಿಶ್ವ ತಂಬಾಕು ರಹಿತ ದಿನದ ಬಗ್ಗೆ ಘೋಷಣೆ ಕೂಗುತ್ತ, ವಿದ್ಯಾರ್ಥಿಗಳು ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಜಾಗೃತಿ ಜಾತವನ್ನು ಯಶಸ್ವಿಗೊಳಿಸಿದರು.
ಲೋಟಸ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.