ತುಮಕೂರು | 2027ರ ವೇಳೆಗೆ 25 ಸಾವಿರ ನವೋದ್ಯಮಗಳ ಆರಂಭ : ಗೃಹ ಸಚಿವ ಡಾ. ಜಿ ಪರಮೇಶ್ವರ

Date:

Advertisements

 ಕೃಷಿ, ಆರೋಗ್ಯ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ  ಇಡೀ ವಿಶ್ವದಾದ್ಯಂತ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನ ಆವಿಷ್ಕಾರವಾಗುತ್ತಿದೆ. ಪ್ರತಿನಿತ್ಯ ತಂತ್ರಜ್ಙಾನ ಗಣನೀಯವಾಗಿ ಬದಲಾಗುತ್ತಿವೆ. ಅದರಂತೆ ಕರ್ನಾಟಕದಲ್ಲೂ ಸಾಕಷ್ಟು ನವೋದ್ಯಮಗಳು ಆರಂಭವಾಗುತ್ತಿದ್ದು, 2027ರ ವೇಳೆಗೆ  25  ಸಾವಿರ ನವೋದ್ಯಮಗಳು ಆರಂಭವಾಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ಸಾಹೇ ವಿವಿಯ ಕುಲಾಧಿಪತಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದರು.

ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರದಿಂದ(ಜೂನ್-2 & 3) ಆಯೋಜಿಸಲಾಗಿದ್ದ ಎರಡು ದಿನದ ವಿಜ್ಙಾನ ಮತ್ತು ತಂತ್ರಜ್ಞಾನ ಮಾದರಿ ಪ್ರದರ್ಶನ ‘ಟೆಕ್ನೋಡಿಯ–2025’ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯ ಅತಿಹೆಚ್ಚು ಸ್ಟಾರ್ಟ್ ಆಪ್ ಕಂಪೆನಿ ಹೊಂದಿದೆ. ವಿದ್ಯಾರ್ಥಿಗಳ ಸಂಶೋಧನಾತ್ಮಕ ಅಧ್ಯಯನದಿಂದ ಇಲ್ಲಿ ಡೀಪ್ ಟೆಕ್ನಾಲಜಿ ತಂತ್ರಜ್ಞಾನದ ಬೆಳವಣಿಗೆಯಾಗುತ್ತಿದೆ. ಹೊಸ ಹೊಸ ಸಂಶೋಧನೆಗಳು ಸಮಾಜಕ್ಕೆ ತುಂಬಾ ಉಪಯೋಗಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ರಾಪ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟ ಮಾಡಿದರೆ, ಮುಂದಿನ ಸಂಶೋಧನೆಗಳಿಗೆ ಅನುಕೂಲವಾಗಲಿದೆ. ಡೀಪ್ ಟೆಕ್ ಟೆಕ್ನಾಲಜಿ ಇಂದು ನಮಗೆ ಅಗತ್ಯವಾಗಿದೆ. ಹಾಗಾಗಿ ಕರ್ನಾಟಕ ಸರ್ಕಾರ ಸಾವಿರ ಕೋಟಿಯಷ್ಟು ಅನುದಾನವನ್ನು ನೀಡಿ ಸಹಕಾರವನ್ನು ನೀಡುತ್ತಿದೆ ಎಂದು ಡಾ. ಜಿ ಪರಮೇಶ್ವರ ಹೇಳಿದರು.

Advertisements

ಇಡೀ ಜಗತ್ತು ಶಿಕ್ಷಣ, ತಂತ್ರಜ್ಞಾನ ಸಹಾನುಭೂತಿಯ ಮೇಲೆ ನಿಂತಿದೆ. ಇದಕ್ಕೆ ಅನುಗುಣವಾಗಿ ಸಾಹೇ ವಿಶ್ವವಿದ್ಯಾನಿಲಯದ ಆಶೋತ್ತರಗಳಿವೆ. ಯಾರೆಲ್ಲ ಶಿಕ್ಷಣದಿಂದ ದೂರ ಉಳಿದಿದ್ದಾರೋ ಅಂತವರಿಗೆ ಶಿಕ್ಷಣವನ್ನು ನೀಡುವುದು ಸಾಹೇ ವಿಶ್ವವಿದ್ಯಾಲಯದ ಉದ್ದೇಶವಾಗಿದೆ ಎಂದು ಅವರು ನುಡಿದರು.

1001527497

ಬೆಂಗಳೂರಿನ ಸಿ-ಕ್ಯಾಂಪ್ ಸಿಇಒ ಮತ್ತು ನಿರ್ದೇಶಕರಾದ ಡಾ ತಸ್ಲಿಮ್ ಆರಿಫ್ ಸೈಯದ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಡೀ ಜಗತ್ತು ಶಿಕ್ಷಣ, ತಂತ್ರಜ್ಞಾನ ಸಹಾನುಭೂತಿಯ ಮೇಲೆ ಇದಕ್ಕೆ ಅನುಗುಣವಾಗಿ ಸಾಹೇ ವಿಶ್ವವಿದ್ಯಾನಿಲಯದ ಯಾರೆಲ್ಲ ಶಿಕ್ಷಣದಿಂದ ದೂರ ಉಳಿದಿದ್ದರೂ ಅಂತವರಿಗೆ ಶಿಕ್ಷಣವನ್ನು ನೀಡುವುದು ಸಾಧ್ಯ ವಿಶ್ವವಿದ್ಯಾಲಯದ ಉದ್ದೇಶ.ವಿದ್ಯಾರ್ಥಿಗಳಿಗೆ ನೀಡುವ ಪ್ರಾಥಮಿಕ ಶಿಕ್ಷಣ ಸಾಧನೆ ಮಾಡಲು ಗುರಿ ಹೊಂದಿರಬೇಕು. ಇಂದು ವಿಜ್ಞಾನ ಮುಗಿಲೆತ್ತರಕ್ಕೆ ಬೆಳೆದಿದೆ ಸಿಬಿಎಸ್ಇ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಭಾರತ ಬೆಳವಣಿಗೆ ಕಂಡಿದೆ. ಕೃಷಿ ಮಾರುಕಟ್ಟೆಗಳು ಸೇರಿದಂತೆ ಉಳಿದಂತಹ ಆವಿಷ್ಕಾರಗಳು ಸಂಶೋಧನೆಗಳು ಬೇಕಿದೆ. ಅದರ ಕುರಿತು ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.

ಏನು ಸ್ಪೇಸ್ ಇಂಜಿನಿಯರಿಂಗ್ ಇಂದು ಮುಖ್ಯವಾಗಿದೆ. ದೇಶ ದೇಶಗಳು ಹೂಡಿಕೆ ಮಾಡಿ ಸಂಶೋಧನೆಗಳು ನಡೆಸುತ್ತಿವೆ. ಇದರ ನಿಟ್ಟಿನಲ್ಲಿ ಭಾರತವು ಕೂಡ ಒಂದು.ವಿಜ್ಞಾನ ಸಂಶೋಧನೆಗಳು ಸಮಾಜದ ಹಲವು ಸಮಸ್ಯೆಗಳು ಬಗೆಹರಿಸಬೇಕಿದೆ. ಭಾರತ ಸರ್ಕಾರದಿಂದ ಎಲ್ಲಾ ಸಹಕಾರವನ್ನು ನೀಡುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಹಭಾಗಿತ್ವವು ಮುಖ್ಯವಾಗಿದೆ. ಹಾಗೂ ಆವಿಷ್ಕಾರಗಳು ಈ ಶೈಕ್ಷಣಿಕ ಸಂಶೋಧನೆಗಳು ತುಂಬಾ ಮುಖ್ಯವಾಗಿದೆ ಎಂದು ಡಾ.ತಸ್ಲೀಮರಿಫ್ ಸೈಯದ್ ತಿಳಿಸಿದರು.

ಸಾಹೇ ಉಪಕುಲಪತಿ ಡಾ. ಕೆ.ಬಿ ಲಿಂಗೇಗೌಡ  ಮಾತನಾಡಿ,ಟೆಕ್ನೋಡಿಯಾ ಇಂದು ವಿಶೇಷ ಕಾರ್ಯಕ್ರಮ ಇಂದು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಅವಕಾಶ ಇದೆ ಹೊಸ ಹೊಸ ಆಯಾಮಗಳು ಇಲ್ಲಿ ಆವಿಷ್ಕಾರ ಮಾಡಬಹುದಾಗಿತ್ತು ವಿವಿಧ ಸರ್ಕಾರದ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಎಸ್ ರವಿಪ್ರಕಾಶ್ ಮಾತನಾಡಿ, ಎಲ್ಲ ಸಂಶೋಧನಾ ಯೋಜನೆಗಳು ಗಮನಹರವಾಗಿದೆ ವಿದ್ಯಾರ್ಥಿಗಳ ಪ್ರಯತ್ನ ಸಾರ್ಥಕವಾಗಿದೆ. ಈಗಿರುವ ಹೊಸ ವಿದ್ಯಾಮಾನಗಳು ಆವಿಷ್ಕಾರಗಳು ಶಕ್ತಿ ನೀಡಲಿದ್ದು ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಸಂಶೋಧನದ ಅಧ್ಯಯನ ನಡೆಸಬೇಕೆಂದು ತಿಳಿಸಿದರು.

ಸಾಹೇ ರಿಜಿಸ್ಟ್ರಾರ್ ಡಾ. ಅಶೋಕ್ ಮೆಹ್ತಾ, ಸಾಹೇ ವಿವಿಯ ಪರೀಕ್ಷಾಂಗ ನಿಯಂತ್ರಕರು ಡಾ.ಜಿ.ಗುರುಶಂಕರ್, ಟೆಕ್ನೋಡಿಯಾ ಸಂಯೋಜಕರಾದ ಸ್ಟೆಪ್ ನಿರ್ದೇಶಕರಾದ ಡಾ.ಮನು ಎಸ್ ಮತ್ತು ಸಹಾಯಕ ನಿರ್ದೇಶಕರಾದ ಗುರುನಂದನ್ ಪಿ.ಹೆಚ್, ಡೀನ್ ಎಲ್ಲಾ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X