ಸಾಮಾಜಿಕ ಜಾಲತಾಣದಲ್ಲಿ ಭಾವನೆಗಳಿಗೆ ಧಕ್ಕೆಯಾಗುವ ಪೋಸ್ಟರ್ ಹಂಚಿಕೊಂಡ ಆರೋಪದಡಿ ಅಜೆಕಾರು ಪೊಲೀಸರು ಹಿಂದೂ ಜಾಗರಣ ವೇದಿಕೆ ಪ್ರಮುಖ ಅಜೆಕಾರು ರತ್ನಾಕರ್ ಅಮೀನ್ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡುವುತ್ತಿರುವ ಹಿನ್ನಲ್ಲೆಯಲ್ಲಿ ರಾಜ್ಯ ಸರಕಾರವು ಮಹತ್ವ ತೀರ್ಮಾನ ಕೈಗೊಂಡು ಪೊಲೀಸ್ ಇಲಾಖೆ ಇಲಾಖೆಯಲ್ಲಿ ಬದಲಾವಣೆ ತರಲಾಗಿತ್ತು.
ಈ ನಡುವೆ ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಭಾವನೆ ಕೆರಳಿಸುವವರ ವಿರುದ್ಧ ಕಣ್ಣಾವಲು ಇರಿಸಲಾಗಿದೆ. ಇದರ ಬೆನ್ನಲೇ ಸರಣಿಯಾಗಿ ಕೇಸು ದಾಖಲಾಗುತ್ತಿರುವ ಮಾಹಿತಿ ಲಭಿಸಿದೆ.