ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪೊಲೀಸ್ ಕಮಿಷನರ್ ವರ್ಗಾವಣೆ ವಿಚಾರವಾಗಿ ಮಾತನಾಡಿ ಒಂದು ಘಟನೆ ನಡೆದರೆ ನಾವೇ ಅದನ್ನು ನೋಡಿ ಅಂತಾ ಹೇಳಬೇಕು. ಅಂತಹ ಪರಿಸ್ಥಿತಿ ಬಂದಿದೆ. ಈ ಮೊದಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಅಂತ ಹೇಳುತ್ತಿದ್ದರು. ಈಗ ಹಾಗೆ ಇಲ್ಲ, ಹೀಗಾಗಿ ಆಡಳಿತಕ್ಕ ಕೆಟ್ಟ ಹೆಸರು ಬರುತ್ತಿದೆ. ಪೊಲೀಸ್ ಇಲಾಖೆ ಕೆಲಸ ಮಾಡಬೇಕು. ಕೆಲಸ ಯಾರು ಮಾಡ್ತಾರೆ ಅವರನ್ನು ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ವರ್ಗಾವಣೆ ಅನಿವಾರ್ಯ ಎಂದರು.
ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಯಾವುದೇ ಒಂದು ಘಟನೆಯಾದರೆ ಅದನ್ನು ಅವರೇ ನೋಡಿಕೊಳ್ಳಬೇಕು ಎಂದು ಬೆಳಗಾವಿ ಪೊಲೀಸ್ ಕಮಿಷನರ್ ವರ್ಗಾವಣೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬೇರೆ ಇಲಾಖೆಗಳಿಗೂ ಕೂಡ ಇದು
ಅನ್ವಯಿಸುತ್ತದೆ. ಕಾನೂನು ಸುವ್ಯವಸ್ಥೆ ಮುಖ್ಯ. ಅವರ ಕೆಲಸ ಅವರು ಮಾಡಬೇಕು, ನಾವು ಹೇಳುವ ಅವಶ್ಯಕತೆ ಇರುವದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.