ಅದಾನಿ ಗ್ರೂಪ್‌ನಲ್ಲಿ ಭಾರತೀಯ ವಿಮಾ ಕಂಪನಿ (ಎಲ್‌ಐಸಿ) 5,000 ಕೋಟಿ ರೂ. ಹೂಡಿಕೆ ಮಾಡಿರುವುದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ.
“ಸಾರ್ವಜನಿಕರ ಹಣವನ್ನು ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಬಳಸಲಾಗುತ್ತಿದೆ” ಎಂದು ಕುಟುಕಿದ್ದಾರೆ.
“ಹಣ, ಪಾಲಿಸಿ, ಪ್ರೀಮಿಯಂ ನಿಮ್ಮದು; ಭದ್ರತೆ, ಅನುಕೂಲ, ಲಾಭ ಮಾತ್ರ ಅದಾನಿಗೆ” ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ಕಂಪನಿಯವರು ಕಳೆದ ವಾರ ನೀಡಿದ ಪ್ರಕಟಣೆಯಲ್ಲಿ, “ಎಲ್‌ಐಸಿಯಿಂದ ರೂ. 5,000 ಕೋಟಿ ಸಂಗ್ರಹಿಸಲಾಗಿದೆ” ಎಂದು ತಿಳಿಸಲಾಗಿತ್ತು.
15 ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡುವ ಷರತ್ತಿನ ಮೇಲೆ, ವರ್ಷಕ್ಕೆ 7.75% ಬಡ್ಡಿ ದರದಲ್ಲಿ ಎಲ್‌ಐಸಿಯಿಂದ ಅದಾನಿ ಕಂಪನಿಯು ಹಣ ಪಡೆದುಕೊಂಡಿದೆ.
ಇದನ್ನೂ ಓದಿರಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಮಾಹಿತಿ ರವಾನೆ; ಗಗನ್ ದೀಪ್ ಅರೆಸ್ಟ್
“ನಮ್ಮಂತಹ ಸಾಮಾನ್ಯ ಜನರ ವಿಮಾ ಕಂತುಗಳ ಮೂಲಕ ಸಂಗ್ರಹಿಸಿದ ಎಲ್‌ಐಸಿ ಹಣವನ್ನು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಬಳಸಲಾಗುತ್ತಿದೆ” ಎಂದು ರಾಹುಲ್ ಆರೋಪಿಸಿದ್ದಾರೆ.
“ಹಣ, ಪಾಲಿಸಿ, ಪ್ರೀಮಿಯಂ ನಿಮ್ಮದು; ಭದ್ರತೆ, ಅನುಕೂಲ, ಲಾಭ ಮಾತ್ರ ಅದಾನಿಗೆ” ಎಂದು ಟ್ವೀಟ್ ಮಾಡುವ ಮೂಲಕ, ಎಲ್‌ಐಸಿ ಹೂಡಿಕೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದ ದೊಡ್ಡ ವಿಮಾ ಕಂಪನಿ ಎಲ್‌ಐಸಿ (ಭಾರತೀಯ ಜೀವ ವಿಮಾ ನಿಗಮ). ಇದು ಸರ್ಕಾರಿ ಕಂಪನಿಯಾಗಿದ್ದು, ನಮ್ಮಂತಹ ಸಾಮಾನ್ಯ ಜನರು ಕಟ್ಟುವ ವಿಮಾ ಕಂತುಗಳಿಂದ ಸಂಗ್ರಹವಾದ ಹಣವನ್ನು ವಿವಿಧೆಡೆ ಹೂಡಿಕೆ ಮಾಡುತ್ತದೆ. ಆದರೆ ಅದಾನಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂಬ ಗಂಭೀರ ಆರೋಪಗಳಿವೆ.