ಶಿವಮೊಗ್ಗದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮ ತಡರಾತ್ರಿಯ ನಂತರವೂ ಮುಂದುವರಿದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನು ಮನೆಗೆ ಕಳುಹಿಸಲು ಪೊಲೀಸರ ಲಾಠಿ ಪ್ರಹಾರದ ಘಟನೆಯು ಸಹ ನಡೆದಿದೆ. ನಿನ್ನೆ ರಾತ್ರಿ ಶಿವಮೊಗ್ಗ ಸೀನಪ್ಪಶೆಟ್ಟಿ ಸರ್ಕಲ್ (ಗೋಪಿ ವೃತ್ತ) ಬಳಿಯಲ್ಲಿ ನೂರಾರು ಅಭಿಮಾನಿಗಳು ಸೇರಿ ಆರ್ಸಿಬಿಯ ಗೆಲುವಿನ ಸಂಭ್ರಮ ಆಚರಿಸುತ್ತಿದ್ದರು.

ಮ್ಯೂಸಿಕ್ ಇಲ್ಲದಿದ್ದರೂ ಹಾಡಿ ಕುಣಿಯುತ್ತಿದ್ದರು. ಈ ನಡುವೆ ತಡರಾತ್ರಿಯಾದ್ದರಿಂದ ಪೊಲೀಸರು ಅಭಿಮಾನಿಗಳಿಗೆ ಮನೆಗೆ ತೆರಳಿ ಎಂಬ ಸಂದೇಶ ರವಾನೆ ಮಾಡಿದರು.

ಆದರೂ ಸಹ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರಿಂದ ಅವರನ್ನ ಚದುರಿಸಲು ಪೊಲೀಸರು ಲಘುವಾಗಿ ಲಾಠಿ ಬೀಸಿದರು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದರು.
