ಮನವಿಗೆ ಸ್ಪಂದನೆ; ಪ್ರಗತಿಪರ ಸಂಘಟನೆಗಳ ಮುಖಂಡರಿಂದ ಮಂಡ್ಯ ಶಾಸಕರಿಗೆ ಅಭಿನಂದನೆ

Date:

Advertisements

ಕರ್ನಾಟಕ ಜನಶಕ್ತಿ ಮತ್ತು ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಹಕ್ಕುಪತ್ರಕ್ಕೆ ನೀಡಿದ ಮನವಿಯನ್ನು ಪರಿಣಾಮಕಾರಿಯಾಗಿ ಸರ್ಕಾರ ಮತ್ತು ವಸತಿ ಸಚಿವರ ಗಮನಕ್ಕೆ ತಲುಪಿಸಿದ ಮಂಡ್ಯ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಂಘಟನಾಕಾರರು ಸುದ್ದಿಗೋಷ್ಟಿ ಮೂಲಕ ಮಂಡ್ಯ ಜಿಲ್ಲಾ ಶಾಸಕ ರವಿಕುಮಾರ್ ಗಣಿಗರಲ ಅವರಿಗೆ ಅಭಿನಂದನೆ ತಿಳಿಸುತ್ತ, “ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ನಡೆದ ವಸತಿ ಸಚಿವ B Z ಜಮೀರ್ ಅಹ್ಮದ್ ಖಾನ್ ಹಾಗೂ ವಸತಿ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಮಂಡ್ಯ ಶಾಸಕರು ಹಲವಾರು ಬಾರಿ ಹೋರಾಟಗಳಲ್ಲಿ ಕರ್ನಾಟಕ ಜನಶಕ್ತಿ ಮತ್ತು ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಬಡ ಜನರ ಭೂಮಿ ಸಮಸ್ಯೆಗಳಿಗೆ ಸಂಬಂಧಿಸಿದ ಹಲವಾರು ಹಕ್ಕೊತ್ತಾಯಗಳನ್ನು ಜಿಲ್ಲಾ ಆಡಳಿತ ಮತ್ತು ಶಾಸಕರು ಮತ್ತು ಸಂಸದರ ಮುಂದೆ ಸಲ್ಲಿಸಲಾಗಿತ್ತು. ಆ ಎಲ್ಲ ಹಕ್ಕೊತ್ತಾಯಗಳನ್ನು ಪರಿಗಣಿಸಿ ಎಲ್ಲ ವಿಚಾರಗಳನ್ನು ವಸತಿ ಸಚಿವರ ಸಮ್ಮುಖದಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ಮುಂದಾಗಿರುವುದು ಖುಷಿಯ ವಿಚಾರ” ಎಂದು ಹರ್ಷ ವ್ಯಕ್ತಪಡಿಸಿದರು.

75 ವರ್ಷಗಳಿಂದ ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ವಿತರಣೆ ಮಾಡಲು ಕ್ರಮ ಮತ್ತು ಮುಂದಿನ 3 ತಿಂಗಳಲ್ಲಿ ಹಕ್ಕುಪತ್ರ ವಂಚಿತರಾಗಿರುವ ಎಲ್ಲ (ಸ್ಲಂ) ಶ್ರಮಿಕ‌ನಿವಾಸಿಗಳಿಗೂ ಹಕ್ಕು ಪತ್ರ ವಿತರಿಸಲು ತೀರ್ಮಾನ, ಹಾಲಹಳ್ಳಿ ಸ್ಲಂ ಬೋರ್ಡ್‌ನಲ್ಲಿ 80 ಮನೆ ನಿರ್ಮಾಣ ಮಾಡಲು 2.50 ಕೋಟಿ ರೂ. ಬಿಡುಗಡೆ ಮತ್ತು ಎರಡೂವರೆ ಎಕರೆಯಲ್ಲಿ ನೂತನವಾಗಿ 500 ಮನೆ ನಿರ್ಮಾಣ ಮಾಡಲು ಕ್ರಮ, ಮಂಡ್ಯ ನಗರದ ಬೀಡಿ ಕಾಲೋನಿಯಲ್ಲಿ ನಿರ್ಮಾಣವಾಗಿರುವ ವಸತಿಗಳನ್ನು ವಸತಿರಹಿತರಿಗೆ ವಿತರಣೆ ಮಾಡುವ ಸದುದೇಶದಿಂದ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಲು ಸಭೆಯಲ್ಲಿ ಅನುಮತಿ ಪಡೆದಿದ್ದಾರೆ.

Advertisements
  • ಕಳೆದ 75 ವರ್ಷಗಳಿಂದ ಹಕ್ಕು ಪತ್ರ ವಂಚಿತರಾಗಿರುವ RTO ಸ್ಲಂ ಹಾಗೂ ಹಾಲಹಳ್ಳಿ ಮುಸ್ಲಿಂ ಬ್ಲಾಕ್ ನಿವಾಸಿಗಳಿಗೆ ಕೂಡಲೇ ಹಕ್ಕುಪತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರಿಂದ ಸೂಚನೆ ನೀಡಲಾಗಿದೆ.
  • ಮಂಡ್ಯ ನಗರದ ಹೊರವಲಯದಲ್ಲಿ 15 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಹೆಚ್ಚುವರಿ ಕುಟುಂಬಗಳ ಸರ್ವೆ ನಡೆಸಿ ಭೂಮಿ ನೀಡಿ ವಸತಿ ನಿರ್ಮಾಣ ಮಾಡಬೇಕು ಎಂಬ ವಿಚಾರಕ್ಕೆ ಮಂಡ್ಯ ನಗರದ ಹೊರ ವಲಯದಲ್ಲಿ 15 ಎಕರೆ ಜಾಗವನ್ನು ಗುರುತಿಸಿ ಅತ್ಯಾಧುನಿಕ ಹೈಟೆಕ್ G+ ಮಾದರಿಯ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಅನುಮೋದನೆ ಪಡೆದುಕೊಂಡಿರುವುದು.
  • ಮಂಡ್ಯ ನಗರದಲ್ಲಿರುವ ಎಲ್ಲ ಸ್ಲಂಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ವಿಶೇಷ ಅನುದಾನದ ಬಿಡುಗಡೆ. ಇವೆಲ್ಲವೂ ಹಲವಾರು ವರ್ಷಗಳ ಕರ್ನಾಟಕ ಜನಶಕ್ತಿ ಮತ್ತು ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜೊತೆಗೆ ಮಂಡ್ಯದ ಎಲ್ಲ ಪ್ರತಗತಿ ಪರ ಮತ್ತು ಶ್ರಮಿಕವರ್ಗದ ಪರ ಹೋರಾಟ ಮಾಡುತ್ತಿರುವ ಸಂಘಟನೆಗಳ ಹಕ್ಕೊತ್ತಾಯಗಳಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರಲು ಹೊರಟಿರುವ ಶಾಸಕರಿಗೆ ಕೃತಜ್ಞತೆಗಳನ್ನು ತಿಳಿಸಿದರು.

“ಇದರ ಜತೆಗೆ ಗಮನ ಅರಿಸಬೇಕಾದ ಹಲವು ಗಂಭೀರ ವಿಚಾರಗಳಿದ್ದು, 2013ರಲ್ಲಿ ಕಾಳಿಕಾಂಬ ಸ್ಲಂ ಕೇಸ್ ಜನಪರವಾಗಿ ತೀರ್ಪು ಬಂದ ನಂತರ ಕೊಳಗೇರಿ ಅಭಿವೃದ್ಧಿ ಮಂಡಳಿ ವಸತಿ ಯೋಜನೆ ರೂಪಿಸದೆ, ವಿಳಂಬ ಮಾಡಿದ್ದರಿಂದ ಮತ್ತೆ ಕಾಳಿಕಾಂಬ ಸೇವಾ ಸಂಸ್ಥೆಯವರು ಹೈಕೋರ್ಟ್‌ನಲ್ಲಿ ಮರು ಮೊಕದ್ದಮೆ ದಾಖಲಿಸಿದರು. ನಮ್ಮ ನೂತನ ಶಾಸಕರೂ ಕೂಡ ಸಂಸ್ಥೆಯವರ ಜತೆ ಸಭೆ ನಡೆಸಿ ವರ್ಷ ಕಳೆದಿದ್ದರೂ, ಈ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

“ಸ್ಲಾಟರ್ ಹೌಸ್‌ನ 5 ಕುಟುಂಬಗಳಿಗೆ ಗಾಡಿ ಕಾರ್ಖಾನೆ, ಶ್ರಮಿಕನಗರದಲ್ಲಿ 8 ನಿವೇಶನಗಳು ಖಾಲಿ ಇದ್ದು, ಈ ನಿವೇಶನಗಳನ್ನು ಆ ವಸತಿ ವಂಚಿತರಿಗೆ ಹಂಚಿಕೆ ಮಾಡಲು ಮುಂದಾಗಬೇಕು. ಹೊನ್ನಯ್ಯ ಬಡಾವಣೆಯ‌ UGD ಪೈಪ್ ಲೈನ್ ಕಾಮಗಾರಿ ಶಿಘ್ರ ಪ್ರಾರಂಭವಾಗಬೇಕು. ಲ್ಯಾಂಡ್ ಅರ್ಮಿ ಸ್ಲಂನಲ್ಲಿ ನಿವಾಸಿಗಳು ಹಲವು ವರ್ಷಗಳಿಂದ ವಾಸವಿದ್ದರೂ ಇಂದಿಗೂ ಕೂಡ ಅದು ಸ್ಲಂ ಎಂದು ಘೋಷಣೆ ಆಗಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ಈ ಸಮಸ್ಯೆಯನ್ನು ಬಗೆಹರಿಸಿ ಹಕ್ಕುಪತ್ರ ನೀಡಬೇಕು” ಎಂದು ಮನವಿ ಮಾಡಿದರು.

“ಮಂಡ್ಯ ನಗರದ ಹಲವು ಸ್ಲಂಗಳಲ್ಲಿ ಒಂದೇ ಮನೆಯಲ್ಲಿ 2+3 ಹೆಚ್ಚುವರಿ ಕುಟುಂಬಗಳು ವಾಸಿಸುತ್ತಿದ್ದು, ಮಂಡ್ಯದ ಹೊರವಲಯದಲ್ಲಿ 15 ಅಥವಾ 20 ಎಕರೆ ಜಾಗ ಮೀಸಲಿಟ್ಟು G+ ಮಾದರಿಗೆ ಬದಲಾಗಿ ಪ್ರತಿಯೊಬ್ಬರಿಗೂ 30-40 ರಂತೆ ಅಥಾವ 20+30 ರಂತೆ ಪ್ರತ್ಯೇಕ ಜಾಗವನ್ನು ನೀಡಲು ಕ್ರಮ ಕೈಗೊಳ್ಳಬೇಕು. ಹೊಸ ಹೆಚ್ಚುವರಿ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕು” ಎಂದು ಆಗ್ರಹಿಸಿದರು.

“ಮಂಡ್ಯ ನಗರದ ಎಲ್ಲ ಸ್ಲಂಗಳಿಗೂ ಮಾದರಿ ಬಡವಣೆಗಳ ರೀತಿ ಎಲ್ಲ ರೀತಿಯ ಮೂಲಭೂತ ಹಕ್ಕುಗಳನ್ನು ನೀಡುವ ಜತೆಗೆ ಸ್ಲಂಗಳಲ್ಲಿ ಇರುವ ಅಂಗನವಾಡಿಗಳನ್ನು ಅಭಿವೃದ್ಧಿಪಡಿಸಬೇಕು. ಸ್ಲಂಗಳಲ್ಲಿ ಶ್ರಮಿಕಜನರು ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಅಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದುಬಾರಿ ವೆಚ್ಚ ಬರಿಸಲು ಆಗದೆ, ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯ ಸುದಾಹರಣೆ ವಿಚಾರದಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಸುಲಭವಾಗಿ ಎಲ್ಲ ರೀತಿಯ ಚಿಕಿತ್ಸೆ ನೀಡಲು ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾಗುವಳಿ ರೈತರಿಗೆ ನಿವೇಶನ ನೀಡಲು ಎಐಕೆಎಸ್ ಒತ್ತಾಯ

ಸುದ್ದಿಗೋಷ್ಟಿಯಲ್ಲಿ ಅಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಅಧ್ಯಕ್ಷ B T ವಿಶ್ವನಾಥ್, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಜನಶಕ್ತಿ ಸಂಘಟನೆ ಜಗದೀಶ್ ನಗರಗರೆ ಸೇರಿದಂತೆ ಮಂಡ್ಯ ಜಿಲ್ಲಾ ಶ್ರಮಿಕ ನಗರಗಳ ಮುಖಂಡರಾದ ಶಿವಣ್ಣ, ನಿಂಗಮ್ಮ, ರವಿ, ದೊರೆ ಅರ್ಮಗಂ, ವಿಜಯ್, ಲತಾ, ಗೌರಮ್ಮ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X