ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು ಪರಿಸರ ಸಂರಕ್ಷಣೆ ಪೂರಕವಾಗಿ ಸಿದ್ಧವಾಗಿದೆ. ಉಜ್ವಲ್ ಯೋಜನೆ ಮೂಲಕ ಪ್ರತಿ ಮನೆಗೆ ಅಡುಗೆ ಅನಿಲ ಸಿಲಿಂಡರ್ ನೀಡಿದ್ದು ಮರಗಿಡಗಳ ಕಡಿಯುವ ಸಂಖ್ಯೆ ಕ್ಷೀಣಿಸಿದೆ. ಈ ಹಿನ್ನಲೆ ದೇಶದ ಅರಣ್ಯ ಸಂಪತ್ತು ಶೇಕಡಾ 2 ರಷ್ಟು ವೃದ್ಧಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ಟಿ.ಭೈರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎನ್ಎಸ್ಎಸ್ ಘಟಕದಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ಆಲೋಚನೆಗಳು ಪರಿಸರ ಕಾಳಜಿಗೆ ಅವಲಂಬಿಸಿದೆ. ಮನೆಗೊಂದು ಶೌಚಾಲಯ, ಮನೆ ಮನೆಗೆ ನೀರು, ಕೆರೆ ಅಭಿವೃದ್ಧಿ ಹೀಗೆ ಅನೇಕ ಕಾರ್ಯಕ್ರಮಗಳ ಜೊತೆ ಈ ವರ್ಷ ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಿಸಲು ಪಣ ತೊಟ್ಟಿದ್ದಾರೆ ಎಂದರು.
ಪ್ರಾಂಶುಪಾಲ ಪ್ರಸನ್ನ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಸಿ ನೆಡುವ ಜೊತೆ ಸಸಿ ಪೋಷಿಸುವ ಕೆಲಸ ನಿತ್ಯ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಕಾಲೇಜು ಕಟ್ಟಡ ಸುತ್ತ ಪರಿಸರ ಕಾಪಾಡುವ ಜೊತೆಗೆ ವಿದ್ಯಾರ್ಥಿಗಳು ತಮ್ಮ ಊರಿನ ಪರಿಸರ ಕಾಳಜಿ ಕೂಡಾ ಹೊಂದಿರಬೇಕು ಎಂದರು.
ಎನ್ಎಸ್ಎಸ್ ಅಧಿಕಾರಿ ಸುಮುಖ್, ಪ್ರೊ.ತಿಮ್ಮಣ್ಣ, ಮುಖಂಡ ಜಿ.ಎಂ.ಶಿವಾನಂದ್ ಇತರರು ಇದ್ದರು.