ದೇಶ ಬಿಟ್ಟು ಪರಾರಿಯಾಗಿರುವ ಆರ್ಥಿಕ ಅಪರಾಧಿ, ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕುಗಳು 6,203 ಕೋಟಿ ರೂಪಾಯಿ ಸಾಲದ ಬದಲಾಗಿ ಸುಮಾರು 14,000 ಕೋಟಿ ರೂಪಾಯಿ ವಸೂಲಿ ಮಾಡಿವೆ. ಇದರಲ್ಲಿ ಶೇಕಡ 11.5 ಬಡ್ಡಿಯೂ ಸೇರಿದೆ ಎಂದು ಪುನರುಚ್ಚರಿಸಿದ್ದಾರೆ. ಹಾಗೆಯೇ “ಇಲ್ಲಿ ನಿಜವಾಗಿಯು ದಾಳಿಗೆ ಒಳಗಾಗಿರುವವನು ನಾನೇ” ಎಂದಿದ್ದಾರೆ.
ಇತ್ತೀಚೆಗೆ ವಾಣಿಜ್ಯೋದ್ಯಮಿ ರಾಜ್ ಶಮಾನಿ ಆಯೋಜಿಸಿದ್ದ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ವಿಜಯ್ ಮಲ್ಯ ತಮ್ಮ ವಕೀಲರು ಬ್ಯಾಂಕ್‌ಗಳಿಗೆ 15 ಬಾರಿ ನೋಟಿಸ್ ನೀಡಿದ್ದಾರೆ ಮತ್ತು ಎಸ್‌ಬಿಐ ಅಧ್ಯಕ್ಷರಿಗೆ ವೈಯಕ್ತಿಕ ಪತ್ರ ಬರೆದಿದ್ದರೂ ‘ಬ್ಯಾಂಕ್ ಸ್ಟೇಟ್‌ಮೆಂಟ್’ ನೀಡಿಲ್ಲ. ಇದರ ಸ್ಪಷ್ಟಣೆಗಾಗಿ ಸಭೆ ನಡೆಸುವಂತೆ ಕೋರಿದೆ. ಆದರೆ ಬ್ಯಾಂಕುಗಳು ನಿರಾಕರಿಸಿವೆ ಎಂದು ಮಲ್ಯ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತೀಯ ಬ್ಯಾಂಕುಗಳು ಬಾಕಿಗಿಂತ ದುಪ್ಪಟ್ಟು ಹಣ ವಸೂಲಿ ಮಾಡಿವೆ: ವಿಜಯ್ ಮಲ್ಯ
“ಇದೀಗ ದಾಳಿಗೆ ಒಳಗಾಗಿರುವವನು ನಾನೇ. ಬ್ಯಾಂಕ್‌ಗಳು ನನಗೆ ಎಂದಿಗೂ ಬ್ಯಾಂಕ್ ಸ್ಟೇಟ್‌ಮೆಂಟ್ ನೀಡದ ಕಾರಣ ನಾನು ನಿಮ್ಮಂತೆಯೇ ಗೊಂದಲಕ್ಕೆ ಒಳಗಾಗಿದ್ದೇನೆ. ಇದು ತುಂಬಾ ವಿಚಿತ್ರ” ಎಂದು ಹೇಳಿದ್ದಾರೆ.
2016ರ ಮಾರ್ಚ್‌ನಲ್ಲಿ ಯುಕೆಗೆ ಪಲಾಯನವಾದ ಮಲ್ಯ ಒಡೆತನ ಕಿಂಗ್‌ಫಿಷರ್ ಏರ್‌ಲೈನ್ಸ್ (ಕೆಎಫ್‌ಎ) ಹಲವು ಬ್ಯಾಂಕುಗಳಿಗೆ 9,000 ಕೋಟಿ ರೂ.ಗಳ ಸಾಲ ಮರುಪಾವತಿ ಬಾಕಿ ಉಳಿಸಿತ್ತು. ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ಮಲ್ಯ ಪರಾರಿಯಾಗಿದ್ದರು. ಆದರೆ ವಾರ್ಷಿಕ ಶೇಕಡ 11.5 ಬಡ್ಡಿದರದಲ್ಲಿ 6,203 ಕೋಟಿ ರೂ.ಗಳನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬೆಂಗಳೂರಿನ ಡಿಆರ್‌ಟಿ ಪೀಠ 2017ರಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಆದೇಶಿಸಿತ್ತು.
— Vijay Mallya (@TheVijayMallya) June 5, 2025
ಈ ನಡುವೆ ಇಂದಿಗೂ ಭಾರತವು ಯುಕೆಯಿಂದ ಮಲ್ಯ ಅವರನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದೆ. ಇನ್ನು ತಾನು ಶೇಕಡ 100ರಷ್ಟು ಸಾಲ ಮರುಪಾವತಿಗೆ ಸಿದ್ಧನಾಗಿದ್ದೆ. ಆದರೆ ಬ್ಯಾಂಕುಗಳು ಮತ್ತು ಸರ್ಕಾರ ಬೇಡ ಎಂದಿದೆ ಎಂದು ಮಲ್ಯ ಇತ್ತೀಚೆಗೆ ಹೇಳಿಕೊಂಡಿದ್ದರು. ಅದಾದ ಬಳಿಕ ತನ್ನಿಂದ ಬ್ಯಾಂಕುಗಳು ಸುಮಾರು 14,000 ಕೋಟಿ ರೂಪಾಯಿ ವಸೂಲಿ ಮಾಡಿವೆ ಎಂದೂ ಹೇಳಿದ್ದರು. ಅದನ್ನೇ ಇದೀಗ ಮತ್ತೆ ಪುನರುಚ್ಚರಿಸಿದ್ದಾರೆ.
ಹಾಗೆಯೇ 2025ರ ಫೆಬ್ರವರಿ 5ರಂದು ವಿಜಯ್ ಮಲ್ಯ ಬ್ಯಾಂಕುಗಳ ಸಾಲ ವಸೂಲಾತಿ ಪ್ರಕ್ರಿಯೆಯ ಕುರಿತು ಸ್ಪಷ್ಟೀಕರಣವನ್ನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
