ಭಾರತೀಯರಿಗೆ ಹಲವು ದಶಕಗಳಿಂದಲೂ ಪಾರ್ಲೆ ಜಿ ಹೆಸರು ಚಿರಪರಿಚಿತವಾದ ಹೆಸರು. ಕಡಿಮೆ ವೆಚ್ಚದ, ಪೌಷ್ಟಿಕಾಂಶವುಳ್ಳ ಹಾಗೂ ಟೀ ಜೊತೆಗೆ, ಹಸಿವಾದಾಗ ಮತ್ತಿತ್ತರ ಸಂದರ್ಭಗಳಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಬಳಸುತ್ತಾರೆ. ಆದರೆ ಇದೇ ಬಿಸ್ಕತ್ತು ಪ್ಯಾಲಿಸ್ತೇನ್‌ನ ಗಾಜಾದ ಜನರಿಗೆ ದುಬಾರಿ ವಸ್ತುವಾಗಿ ಪರಿಣಮಿಸಿದೆ. ಇಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಮೂಲ ಬೆಲೆಯ 500 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಮುಂಬೈನಲ್ಲಿ ಮುಖ್ಯ ತಯಾರಿಕಾ ಘಟಕವಿರುವ ಪಾರ್ಲೆ ಜಿ ಬಿಸ್ಕತ್ತಿನ ಬಗ್ಗೆ ಇತ್ತೀಚಿಗೆ ಗಾಜಾದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅಲ್ಲಿ ಈ ಬಿಸ್ಕತ್ತನ್ನು 24 ಯೂರೋಗಳಿಗೆ ಮಾರಾಟ ಮಾಡಲಾಗುತ್ತಿದೆ. 24 ಯೂರೋ ಅಂದರೆ ಭಾರತದ ರೂಪಾಯಿಗಳಲ್ಲಿ 2,342 ರೂಪಾಯಿಗಳು.
“ದೀರ್ಘ ಕಾಲದ ನಂತರ ನಾನು ಇಂದು ನನ್ನ ನೆಚ್ಚಿನ ತಿನಿಸನ್ನು ಖರೀದಿಸಿದೆ. ಇದರ ಬೆಲೆ 1.5 ಯೂರೋ ಹೆಚ್ಚಾಗುವುದರೊಂದಿಗೆ 24 ಯೂರೂಗಳಿಗೆ ಏರಿಕೆಯಾಗಿದೆ. ನನ್ನ ಮಗಳಿಗಾಗಿ ಇದನ್ನು ಖರೀದಿಸದೆ ನಿರಾಕರಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿರುವ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ಪಾರ್ಲೆ ಜಿ ಬಿಸ್ಕತ್ತು ಮುಂಬೈನಿಂದ ಸುಮಾರು 4,300 ಕಿ.ಮೀ ದೂರದಿಂದ ಗಾಜಾಗೆ ರಫ್ತು ಮಾಡಲಾಗುತ್ತದೆ. ಈ ದುಬಾರಿ ಬೆಲೆ ಪಾರ್ಲೆ ಜಿಗೆ ಮಾತ್ರ ಸೀಮಿತವಾಗಿಲ್ಲ. ಹಲವು ಉತ್ಪನ್ನಗಳು ಹೆಚ್ಚಿನ ಬೆಲೆ ಹೊಂದಿದೆ. 1 ಕೆಜಿ ಸಕ್ಕರೆ: 4,914 ರೂ., 1 ಲೀಟರ್ ಅಡುಗೆ ಎಣ್ಣೆ: 4,177 ರೂ., 1 ಕೆಜಿ ಆಲೂಗಡ್ಡೆ: 1,965 ರೂ., 1 ಕೆಜಿ ಈರುಳ್ಳಿ: 4,423 ರೂ., 1 ಕಾಫಿ ಕಪ್: 1,800 ರೂ. ಭಾರತೀಯ ಬೆಲೆಯನ್ನು ಹೊಂದಿದೆ.
ಮೂರು ತಿಂಗಳಿಗೂ ಹೆಚ್ಚು ಕಾಲ ಗಡಿಗಳನ್ನು ಮುಚ್ಚಿರುವುದರಿಂದ 20 ಲಕ್ಷ ಜನರು ತಮ್ಮ ಅಗತ್ಯ ವಸ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.ಈ ಆಹಾರಗಳನ್ನು ಅತಿ ಹೆಚ್ಚು, ಕೈಗೆಟುಕಲಾಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪಾರ್ಲೆ ಜಿ ಬಿಸ್ಕತ್ತಿನ ಕಂಪನಿ 1938 ರಲ್ಲಿ ಪ್ರಾರಂಭವಾಯಿತು. ಭಾರತದ ಸ್ವದೇಶಿ ಚಳವಳಿಯ ಸಮಯದಲ್ಲಿ ಗಣ್ಯ ಬ್ರಿಟಿಷ್ ತಿಂಡಿಗಳಿಗೆ ಸ್ಥಳೀಯ ಪರ್ಯಾಯವಾಗಿ ಹೊರಹೊಮ್ಮಿತು.
ದಶಕಗಳಿಂದ, ಪಾರ್ಲೆ ಜಿ ತನ್ನ ಕಡಿಮೆ ಬೆಲೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ ಇದು ಹಣದುಬ್ಬರ ಏರಿಕೆಯಾದಾಗ ಬೆಲೆಯನ್ನು ಕಾಯ್ದುಕೊಳ್ಳಲು ತೂಕವನ್ನು ಕಡಿಮೆ ಮಾಡುತ್ತದೆ. ಒಂದು ಕಾಲದಲ್ಲಿ 100 ಗ್ರಾಂ ಹೊಂದಿದ್ದ 5 ರೂ. ಪೊಟ್ಟಣ ಈಗ ಸುಮಾರು 55 ಗ್ರಾಂಗಳನ್ನು ಹೊಂದಿದೆ.
ಇಸ್ರೇಲ್‌ನ ಅಮಾನವೀಯ ದಾಳಿಯಿಂದಾಗಿ ಗಾಜಾದ ಜನರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಇಸ್ರೇಲ್ ಸೇನೆ ಮಹಿಳೆಯರು, ಮಕ್ಕಳು ಎನ್ನದೆ ಸಾವಿರಾರು ಅಮಾಯಕರನ್ನು ಕೊಂದಿದೆ. ಇದರ ಜೊತೆಗೆ ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳು ಏರಿಕೆಯಾಗಿವೆ. ಸ್ಥಳೀಯರಿಗೆ ಆಹಾರ ಅಗತ್ಯಗಳು ಒಳಗೊಂಡು ಮತ್ತಿತ್ತರ ವಸ್ತುಗಳು ಸ್ವಯಂಸೇವಾ ಸಂಘಗಳಿಂದ ಮಾನವೀಯ ರೂಪದಲ್ಲಿ ನೆರವು ದೊರತೆರೆ, ಅಲ್ಲಿನ ಅಲ್ಪಸಂಖ್ಯಾತರು ದುಬಾರಿ ಬೆಲೆ ನೀಡಿ ದಿನಸಿಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ.
After a long wait, I finally got Ravif her favorite biscuits today. Even though the price jumped from €1.5 to over €24, I just couldn’t deny Rafif her favorite treat. pic.twitter.com/O1dbfWHVTF
— Mohammed jawad 🇵🇸 (@Mo7ammed_jawad6) June 1, 2025