ನೀರಾವರಿ ಯೋಜನೆಗೆ ನೀರು ಬಾರದೇ ಕರ ವಸೂಲಿಗೆ ಮುಂದಾದಾಗ ರೈತರು ನಡೆಸಿದ ವಿರೋಚಿತ ಹೋರಾಟದಲ್ಲಿ ಬಸಪ್ಪ ಮತ್ತು ಈರಣ್ಣ ಎಂಬ ರೈತರು ಅಂದಿನ ಕಾಂಗ್ರೆಸ್ ನೇತೃತ್ವದ ಗುಂಡುರಾಯರ ಸರ್ಕಾರದಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಹೇಳಿದರು.
ರಾಯಚೂರು ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ನರಗುಂದ ನವಿಲಗುಂದ ರೈತಬಂಡಾಯಕ್ಕೆ
43 ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ಧಾರವಾಡದ ಎಂ ಜಿ ಹೀರೆಮಠ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜುಲೈ 21ರಂದು 43ನೇ ರೈತ ಹುತಾತ್ಮ ದಿನಾಚರಣೆ ಹಾಗೂ ರೈತ ಚಳವಳಿಯ ಮುಂದಿನ ಹೋರಾಟದ ಘೋಷಣಾ ಸಮಾವೇಶ ಆಯೋಜಿಸಲಾಗಿದೆ” ಎಂದು ಹೇಳಿದರು.
“ರೈತ ವಿರೋಧಿ ನೀತಿ ವಿರುದ್ದ ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಅಸ್ತಿತ್ವಕ್ಕೆ ಬಂದಿತ್ತು. ರೈತರ ಪರವಾಗಿ 43 ವರ್ಷಗಳಿಂದ ರೈತ ಸಂಘ ಅನೇಕ ಹಂತದ ಹೋರಾಟ ನಡೆಸಿ ಯಶಸ್ವಿಯಾಗಿದೆ. ರೈತರ ಹುತಾತ್ಮ ದಿನ ಅಂಗವಾಗಿ ನಡೆಯಲಿರುವ ಸಮಾವೇಶಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ರೈತರು ಭಾಗವಹಿಸಲಿದ್ದಾರೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಿಂದ ರೈತರು ಆಗಮಿಸಲಿದ್ದು, 150ಕ್ಕೂ ಹೆಚ್ಚು ರೈತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಶ್ರಮಿಸಲು ನ್ಯಾಯಾಧೀಶ ಇನವಳ್ಳಿ ಸೂಚನೆ
“ಮುಖ್ಯ ಅತಿಥಿಗಳಾಗಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಶೇಷ ಆಹ್ವಾನಿತರಾಗಿ ಎಸ್ ಆರ್ ಹೀರೆಮಠ, ವೆಂಕನಗೌಡ ಪಾಟೀಲ್, ಪ್ರಸನ್ನಗೌಡ, ಚಾಮರಸ ಮಾಲಿ ಪಾಟೀಲ್ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ” ಎಂದರು.
ರೈತ ಪರ ಸಂಘಟನೆಗಳು, ಪ್ರಗತಿಪರ ಹೋರಾಟಗಾರರು, ರೈತರು ಭಾಗವಹಿಸುವಂತೆ ಮನವಿ ಮಾಡಿದರು. ಈ ವೇಳೆ ಬೂದೆಯ್ಯ ಸ್ವಾಮಿ ಇದ್ದರು.