74 ವರ್ಷದ ವೃದ್ಧೆ ಮೇಲೆ ನಿರಂತರ ಅತ್ಯಾಚಾರ: ಆರೋಪಿಗೆ 394 ವರ್ಷ ಜೈಲು ಶಿಕ್ಷೆ

Date:

Advertisements

ಎಪ್ಪತ್ನಾಲ್ಕು ವರ್ಷ ವಯಸ್ಸಿನ ವೃದ್ಧೆಯೊಬ್ಬರನ್ನು ಅಪಹರಿಸಿ ಹೋಟೆಲ್​ನಲ್ಲಿ ಬಂಧಿಯಾಗಿಸಿ 2 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಆರೋಪಿಗೆ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋದ ಸ್ಥಳೀಯ ನ್ಯಾಯಾಲಯ 394 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಸ್ಯಾನ್ ಮೇಟಿಯೊ ಕೌಂಟಿ ಜಿಲ್ಲಾ ಅಟಾರ್ನಿ ಸ್ಟೀವ್ ವ್ಯಾಗ್‌ಸ್ಟಾಫೆ ಕಚೇರಿ ಪ್ರಕಾರ, ನ್ಯಾಯಾಧೀಶರು ಓಕ್ಲ್ಯಾಂಡ್‌ನ 58 ವರ್ಷದ ಇಯಾನ್ ಎಡಾರ್ಡ್ ಕ್ರೋ ಅವರಿಗೆ 394 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಫೆಬ್ರವರಿಯಲ್ಲಿ ಇಯಾನ್ ಎಡಾರ್ಡ್ ಕ್ರೋ ಅವರಿಗೆ 33 ಅಪರಾಧಗಳ ಆರೋಪ ಹೊರಿಸಲಾಯಿತು. ಇದರಲ್ಲಿ ಅತ್ಯಾಚಾರ, ಚಿತ್ರಹಿಂಸೆ, ಹಿರಿಯರ ಮೇಲಿನ ದೌರ್ಜನ್ಯವೂ ಸೇರಿದೆ.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ

ಆಗಸ್ಟ್ 2020 ರಿಂದ ಆಗಸ್ಟ್ 2022 ರವರೆಗೆ ಬೆಲ್ಮಾಂಟ್ ಹಯಾತ್ ಹೋಟೆಲ್‌ನಲ್ಲಿ 74 ವರ್ಷದ ವೃದ್ಧೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಸಂತ್ರಸ್ತೆ ಆತನ ತಾಯಿಯ ಸ್ನೇಹಿತೆಯಾಗಿದ್ದರು. ಕ್ರೋ ತಾಯಿ 2016 ರಲ್ಲಿ ನಿಧನರಾದ ನಂತರ ಆತ ಸಂತ್ರಸ್ತೆಯ ಜತೆ ಹೆಚ್ಚು ಸ್ನೇಹ ಬೆಳೆಸಿಕೊಂಡಿದ್ದ. ತನ್ನ ಜತೆ ಬರಲು ಒತ್ತಾಯಿಸಿದ್ದ. ಅಂತಿಮವಾಗಿ ಹೋಟೆಲ್​​ನೊಳಗೆ ಕರೆದೊಯ್ದು ಬಂಧಿಯಾಗಿರಿಸಿ ಅತ್ಯಾಚಾರವೆಸಗಿದ್ದಾನೆ.

ಕ್ರೋ ವೃದ್ಧೆಯ ಬಳಿಯಿದ್ದ ಹಣವೆಲ್ಲವನ್ನೂ ಖಾಲಿ ಮಾಡಿದ್ದ. ಹೋಟೆಲ್‌ನಲ್ಲಿ, ಸಂತ್ರಸ್ತೆಯನ್ನು ಎಂಟು ತಿಂಗಳ ಕಾಲ ಕೊಠಡಿಯಿಂದ ಹೊರಗೆ ಹೋಗಲು ಬಿಡಲಿಲ್ಲ ಮತ್ತು ಹೊರಗೆ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

2021 ರಲ್ಲಿ ಸಂತ್ರಸ್ತೆಯ ಪಾದದ ಮೂಳೆ ಮುರಿದಿತ್ತು ಮತ್ತು ತೀವ್ರವಾದ ನೋವಿನ ಹೊರತಾಗಿಯೂ ಆಕೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿಲ್ಲ ಎಂದು ಡಿಎ ಕಚೇರಿ ತಿಳಿಸಿದೆ. ನ್ಯೂ ಮೆಕ್ಸಿಕೋದಲ್ಲಿರುವ ಸ್ನೇಹಿತೆಯನ್ನು ರಹಸ್ಯವಾಗಿ ಸಂಪರ್ಕಿಸಿದ ನಂತರ, ಪೊಲೀಸರು ಹೋಟೆಲ್​ ಕೊಠಡಿಯ ಮೇಲೆ ದಾಳಿ ನಡೆಸಿ ಮಹಿಳೆಯನ್ನು ರಕ್ಷಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ಕ್ರೋ ಎದೆನೋವೆಂದು ನಟಿಸುವುದು, ಹುಚ್ಚನಂತೆ ವರ್ತಿಸಿ ಶಿಕ್ಷೆ ಪ್ರಕಟವನ್ನು ಮುಂದೂಡಲು ಯತ್ನಿಸಿದ್ದ. ಇಷ್ಟು ದಿನ ಜೀವವನ್ನು ಕಾಪಾಡಿಕೊಂಡು ಬಂದಿದ್ದೇನೆ, ನಾನು ಬದುಕುತ್ತೇನೆ ಎನ್ನುವ ಯಾವ ಭರವಸೆಯೂ ನನಗೆ ಇರಲಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಅಪರಾಧಿಯನ್ನು 10 ವರ್ಷಗಳ ಕಾಲ ಯಾರೂ ಕೂಡ ಸಂಪರ್ಕಿಸದಂತೆ ನ್ಯಾಯಾಲಯ ಸೂಚಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

Download Eedina App Android / iOS

X