ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಉಪ-ಚುನಾವಣೆಗೆ ಜುಲೈ 23 ರಂದು ಮತದಾನ ಜರುಗಲಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ತಿಳಿಸಿದ್ದಾರೆ.
“ಚುನಾವಣೆ ಘೋಷಣೆ ದಿನಾಂಕದಿಂದ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಮುಂಡರಗಿ ತಾಲೂಕು 17- ಮುರಡಿ ವ, ಮುರಡಿ ತಾಂಡಾ(ಮಾರುತಿ ನಗರ), ಚಿಕ್ಕವಡ್ಡಟ್ಟಿ ಮತ್ತು ಗುಡ್ಡದ ಬೂದಿಹಾಳ ಹಾಗೂ ಡೋಣಿ ಗ್ರಾಮ ಪಂಚಾಯತಿಯ ಡೋಣಿ-1 ವ್ಯಾಪ್ತಿಯಲ್ಲಿ ಆಯುಧ ಪರವಾನಗಿ ಹೊಂದಿರುವವರು ತಮ್ಮ ಆಯುಧಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ” ಎಂದು ಸೂಚಿಸಿದ್ದಾರೆ.
“ಆಯುಧ ಹೋದಿರುವವರು ತಮ್ಮ ಆಯುಧಗಳನ್ನು ಜುಲೈ 19 ರೊಳಗಾಗಿ ತಮ್ಮ ಸಮೀಪದ ಆರಕ್ಷಕ ಠಾಣೆಯಲ್ಲಿ ಠೇವಣಿ ಮಾಡಿ ರಶೀದಿ ಪಡೆಯಬೇಕು. ಜುಲೈ 23ರಂದು ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಉಪ ಚುನಾವಣೆ ಪ್ರಕಿಯೆ ಮುಗಿದ ಕೂಡಲೇ ಠೇವಣಿ ಮಾಡಲಾದ ಆಯುಧಗಳನ್ನು ಅವುಗಳ ವಾರಸುದಾರರಿಗೆ ಯಾವುದೇ ನಿರ್ದೇಶನಗಳಿಗೆ ಕಾಯದೇ ಪರತ ಮಾಡಬೇಕು. ಈ ಆದೇಶವು ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಿಗೆ ಹಾಗೂ ವಿವಿಧ ಹಣಕಾಸು ಸಂಸ್ಥೆಗಳ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸುಸಜ್ಜಿತ ಪುನರ್‌ವಸತಿ ಕೇಂದ್ರ ಸ್ಥಾಪನೆಗೆ ಒತ್ತಾಯ
“ಜಿಲ್ಲಾ ಆಯುಧ ಠೇವಣಿ ಕುರಿತು ಜಿಲ್ಲಾ ಸ್ಕ್ರೀನಿಂಗ್ ಕಮೀಟಿ ರಚಿಸಿದ್ದು, ಸದರಿ ಆದೇಶದನ್ವಯ ಕ್ರಮ ವಹಿಸಬೇಕು. ಈ ಆದೇಶವು ಗದಗ ಜಿಲ್ಲಾ ಮುಂಡರಗಿ ತಾಲೂಕ 17- ಮುರಡಿ ವ, ಮುರಡಿ ತಾಂಡಾ (ಮಾರುತಿ ನಗರ), ಚಿಕ್ಕವಡ್ಟಟ್ಟಿ ಮತ್ತು ಗುಡ್ಡದಬೂದಿಹಾಳ ಹಾಗೂ ಡೋಣಿ ಗ್ರಾಮ ಪಂಚಾಯತಿಯ ಡೋಣಿ-1 ಗ್ರಾಮ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತದೆ” ಎಂದು ತಿಳಿಸಿದ್ದಾರೆ.