“ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳಬೇಕು. ತ್ಯಾಗ ಬಲಿದಾನದ ಪ್ರತೀಕವನ್ನು ಸಾರುವ ಹಬ್ಬವಾಗಿದೆ” ಎಂದು ಅಂಜುಮನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ ಹಬ್ಬದ ನಮಾಜ್ ಬಳಿಕ ಮಾತನಾಡಿದರು.
“ಹಜರತ್ ಇಬ್ರಾಹಿಂ ಅವರ ಅಲ್ಲಾನ ಮೇಲಿನ ದೈವಭಕ್ತಿ, ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಕುರ್ಬಾನಿ ಅರ್ಪಿಸಲಾಗುತ್ತದೆ” ಎಂದರು.
“ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಕುರ್ಬಾನಿ ನೀಡಬೇಕು. ಇದನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚುವ ಮೂಲಕ ಈದ್ ನಲ್ಲಿ ಪಾಲ್ಗೊಳ್ಳುತ್ತಾರೆ” ಎಂದರು.
ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ, “ಸೌಹಾರ್ದತೆ ಮತ್ತು ವಿಶ್ವ ಬಾಂಧವ್ಯವನ್ನು ಸೂಚಿಸುತ್ತದೆ. ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ತಾದರ್ಶಗಳನ್ನು ಬಕ್ರೀದಿನ ಇತಿಹಾಸ, ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ” ಎಂದರು.
ಮಾಜಿ ಚೇರ್ಮನ್ ಎ.ಡಿ.ಕೋಲಕಾರ, ಪುರಸಭೆ ಸದಸ್ಯ ರಾಜು ಸಾಂಗ್ಲೀಕಾರ, ಫಯಾಜ್ ತೋಟದ ಮಾತನಾಡಿದರು. ಬಳಿಕ ಜಾಮೀಯಾ ಮಸೀದಿಯ ಮೌಲಾನರಾದ ಈ ವೇಳೆ ಆಲಂ ನಹಿಂ ಈದ್ ನಮಾಜ್ ಓದಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ತಲೆಯ ಮೇಲೆ ಕಲ್ಲು ಹಾಕಿ ವ್ಯಕ್ತಿಯ ಕೊಲೆ
ಈ ವೇಳೆ ಖಲೀಲ ಅಹ್ಮದ ಖಾಜಿ ಮೌಲಾನ, ರಫೀಕ ಹಾಳಗಿ, ಯಾಸೀನ ಮೌಲಾನ, ನಿರ್ದೇಶಕರಾದ ನಾಸೀರ ಸುರಪೂರ, ಭಾಷಾ ಮುದಗಲ್ಲ, ಶೌಕತ್ ಅರಳಿಕಟ್ಟಿ, ಎಂ ಎಚ್ ಕೋಲಕಾರ, ಸುಭಾನಸಾಬ ಆರಗಿದ್ದಿ, ಮಾಸುಮಲಿ ಮದಗಾರ, ದಾದು ಹಣಗಿ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.
