ಕೊರಟಗೆರೆ | ಕಾಲ್ತುಳಿತ ಪ್ರಕರಣ : ಸರ್ಕಾರವೇ ನೇರ ಕಾರಣ ; ಬಿಜೆಪಿ ಆರೋಪ

Date:

Advertisements

  ಐಪಿಎಲ್ ಕ್ರಿಕೆಟ್ ವಿಜಯದಿಂದ ಇಡೀ ಕನ್ನಡಿಗರು ಸಂಭ್ರಮಾಚರಣೆ ಮಾಡುವ ಮೂಲಕ ಸಂತಸದಲಿದ್ದರು, ರಾಜ್ಯ ಸರ್ಕಾರದ ಮಹಾ ಎಡವಟ್ಟಿನಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಅಮಾಯಕ ಯುವಕ-ಯುವತಿಯರ ಬಲಿ ಪಡೆದ ಕಾಂಗ್ರೇಸ್ ಸರ್ಕಾರ ನೇರಹೊಣೆ ಹೊರಬೇಕಿದೆ ಎಂದು ಬಿಜೆಪಿ ಮುಖಂಡ ಬಿ.ಹೆಚ್ ಅನಿಲ್‌ಕುಮಾರ್ ಆಗ್ರಹಿಸಿದರು.

ಕೊರಟಗೆರೆ ಪಟ್ಟಣದ ಪಂಚಾಜನ್ಯ ಕಛೇರಿಯಲ್ಲಿ ಶನಿವಾರ ಏರ್ಪಸಿದ್ದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು,  18 ವರ್ಷಗಳ ನಂತರ ಆರ್.ಸಿ.ಬಿ. ಐಪಿಎಲ್ ಟ್ರೋಫಿ ಗೆದ್ದತ್ತು, ರಾಜ್ಯ ಸರ್ಕಾರ ಯೋಜನೆ ರೂಪಿಸದೆ ಟ್ರೋಫಿ ಗೆದ್ದ ಕೆಲವೇ ಗಂಟೆಗಳಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಜೂನ್ 4 ರಂದು ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಆರ್‌ಸಿಬಿ ತಂಡದ ಸದಸ್ಯರನ್ನು ಸನ್ಮಾನಿಸಲು ಕ್ರಿಕೆಟ್ ಅಭಿಮಾನಿಗಳನ್ನು ಆಹ್ವಾನಿಸಿರುವುದು ಕಾಂಗ್ರೆಸ್ ಸರ್ಕಾರ ಈ ನಡೆಯಿಂದ ಅಮಾಯಕರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ್ತಕ್ಕೆ 11 ಜನ ಕ್ರಿಕೇಟ್ ಅಭಿಮಾನಿಗಳು ದುರ್ಮರಣ ಹೊಂದಿರುವುದು ನೇರ ಕಾರಣ ಸರ್ಕಾರ ಹೊರಬೇಕು, ರಾಜಕೀಯ ತಪ್ಪುಗಳನ್ನು ಮುಚ್ಚಿ ಹಾಕಲು ಕಮಿಷನರ್ ತಲೆದಂಡ ಮಾಡಿದ ರಾಜ್ಯಸರ್ಕಾರ ನಾಟಕದ ಆಟವಾಡಲು ಶುರು ಮಾಡಿದೆ, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕಪಾಠ ಕಲಿಸಲಿದ್ದಾಸಿಸರಿಯಲ್ಲ   ಎಂದರು.

Advertisements

ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಕಾನೂನು ಸುವ್ಯಸ್ಥೆಯನ್ನು ಕಾಪಾಡಬೇಕಾದ ನಮ್ಮ ಕ್ಷೇತ್ರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈ ಘಟನೆಯಲ್ಲಿ ನೈತಿಕ ಹೊಣೆಯನ್ನು ಒತ್ತು ಶೀಘ್ರವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ.ದರ್ಶನ್  ಮಾತನಾಡಿ ಕಾಲ್ತುಳಿತದಿಂದ ಎದೆಮಟ್ಟಕ್ಕೆ ಬೆಳೆದ ಮಕ್ಕಳನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. 18 ವರ್ಷಗಳಲ್ಲಿ ವಿಜಯಸಾಧಿಸಿ ಐಪಿಎಲ್ ಟ್ರೋಫಿ ಗೆದ್ದ ಆರ್.ಸಿ.ಬಿ ತಂಡ. ಹತುರದ ಸನ್ಮಾನ ಕಾರ್ಯಕ್ರಮದಿಂದ ಅಭಿಮಾನಿಗಳು ಕಾಲ್ತುಳಿತಕ್ಕೆ ಬಲಿಯಾದರೆ ಇನ್ನೋಂದು ಕಡೆ ಕೈತುಳಿತ್ತಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ ಎಂದರು.

ಈ ದುರ್ಘಟನೆ ಸಂಭವಿಸಲು ಸರ್ಕಾರದ ನಿಲುವೇ ಕಾರಣವಾಗಿದೆ ಅಧಿಕಾರಿಗಳು ಸರ್ಕಾರ ನೀಡಿದ ಮಾಹಿತಿಯಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ, ಈ ಸರ್ಕಾರಕ್ಕೆ ಗೆದ್ದಾಗ ಸಹಕಾರ ನೀಡಲು ಪೊಲೀಸ್ ಇಲಾಖೆ ಬೇಕಾಗಿದೆ, ಪೊಲೀಸ್ ಪರ ನಿಲ್ಲಲು ನಮ್ಮ ಎನ್‌ಡಿಎ ಹಾಗೂ ಜೆಡಿಎಸ್ ಪಕ್ಷ ಜೊತೆ ನಿಂತು ಸದಾ ಬೆಂಬಲಕ್ಕೆ ಸಿದ್ಧವಿದೆ ಎಂದರು.

ಸುಂದರ ಬದುಕನ್ನು ಕಟ್ಟಿಕೊಂಡು ಜೀವನ ನಡೆಸಬೇಕಿದ್ದ ಯುವಕರ ಸಾವಿಗೆ ಸರ್ಕಾರವೇ ನೇರಹೊಣೆ ಹೊರಬೇಕಾಗಿದೆ ಆದರೆ ರಾಜಕೀಯ ಉದ್ದೇಶಕ್ಕೆ ನಿಷ್ಠಾವಂತ ಕಮಿಷನರ್ ಸೇರಿದಂತೆ ಅಧಿಕಾರಗಳ ತಲೆದಂಡ ಸರಿಯಲ್ಲ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X