ವಿಶ್ವ ಪರಿಸರ ದಿನಾಚರಣೆಯನ್ನು ಶ್ರೀ ಬಸವೇಶ್ವರ ಪ್ರೌಢಶಾಲೆ ಮತ್ತು ಶ್ರೀ ಕಲಿವೀರ್ ವಸತಿ ಪ್ರೌಢ ಶಾಲೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ದೇಶದಲ್ಲೇ, ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗೆಯೇ, ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು ಮುಖ್ಯ ಶಿಕ್ಷಕರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಜೂನ್ 9ರಂದು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಿಗೆ ಹಾಸನ ಜಿಲ್ಲಾ ನಾಗರಿಕ ಸನ್ಮಾನ
ಈ ಕಾರ್ಯಕ್ರಮವನ್ನು ಮೇರಾ ಯುವ ಭಾರತ್. ಅರಣ್ಯ ಇಲಾಖೆ ಬೈರಾಪುರ, ಶ್ರೀ ಕಲಿವೀರ್ ವಸತಿ ಪ್ರೌಢಶಾಲೆ, ರಾಷ್ಟ್ರೀಯ ಸೇವಾ ಯೋಜನೆ, ಮಧುಶ್ರೀ ಮಹಿಳಾ ಸಮಾಜ. ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಹರೀಶ ಕೆ ಟಿ, ಆನಂದ, ದಿವ್ಯ, ಪ್ರಮೋದ್, ನಿರಂಜನ, ಮನೋಜ್, ಕೀರ್ತಿ, ಹಾಗೂ ಶಾಲೆಯಲ್ಲಿ ಶಿಕ್ಷಕರಾದ ಶಿವಪ್ಪಗೌಡ, ಸಿ ಮಂಜುನಾಥ, ನೀಲಕಂಠ, ಸುಶ್ಮಿತಾ, ಅರುಣ, ನಿಂಗಪ್ಪ ಹಾಗೂ ಇನ್ನಿತರರಿದ್ದರು.