ಆರ್ ಸಿ ಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯವೆಂದು ಬಿಂಬಿಸಿ ರಾಜ್ಯ ಸರ್ಕಾರ ಬೆಂಗಳೂರು ನಗರ ಕಮಿಷನರ್ ದಯಾನಂದ ಅವರನ್ನು ಅಮಾನತ್ ಮಾಡಿರುವುದು ತೀವ್ರ ಖಂಡನೀಯ ಕೂಡಲೇ ರದ್ದುಗೊಳಿಸಿ ಹುದ್ದೆಯಲ್ಲಿ ಮುಂದುವರೆಸಬೇಕು ಎಂದು ವಾಲ್ಮೀಕಿ ನಾಯಕ ಸಂಘಟನೆಯಿಂದ ವತಿಯಿಂದ ದೇವದುರ್ಗ ತಹಶೀಲ್ದಾರ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸರಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ದಕ್ಷ ಪ್ರಾಮಾಣೀಕತೆಯಿಂದ ಕಾರ್ಯವನ್ನು ನಿರ್ವಹಿಸುತ್ತಿರುವ ನಾಯಕ ಸಮಾಜಕ್ಕೆ ಸೇರಿದವರಾದ ದಯಾನಂದ ಐ.ಪಿ.ಎಸ್ ಅಧಿಕಾರಿಯನ್ನು ವಿನಾಕಾರಣ ಅಮಾನತ್ ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಹಾಗೂ ಇದೇ ಮೊದಲು ಬಾರಿಗೆ ಕಮಿಷನರ್‌ನನ್ನು ಅಮಾನತ್ ಮಾಡಿರುವದರ ಹಿಂದೆ ಜಾತಿ ರಾಜಕಾರಣ ಇದೆ ಎಂದು ಆಗ್ರಹಿಸಿದರು.
ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದೆ ಹೊರತು ಅಧಿಕಾರಿಗಳ ನಿರ್ಲಕ್ಷ ತನದಿಂದ ಸಂಭವಿಸಿಲ್ಲ.ಡಿ.ಸಿ.ಎಂ ಹಾಗೂ ಸಿ.ಎಂ ನಡುವೆ ಗುಂಪುಗಾರಿಕೆಯಿಂದ ಅಮಾಯಕರ 11 ಜನರ ಪ್ರಾಣ ಹೋಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಸುಮಾರು ಮೂರ್ನಾಲ್ಕು ಲಕ್ಷ ಜನದಟ್ಟಣೆಗೆ ಒಂದು ವಾರ ಸಿದ್ಧತೆಯಾಗಿರಬೇಕು. ಸಿದ್ದತೆವಿಲ್ಲದೆ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಚನ್ನಬಸವಪ್ಪ ಬೆಟ್ಟದೂರು ನೆನಪಿನ ದಿನಾಚರಣೆ ; ಜೂನ್ 13 ರಂದು ಅಧ್ಯಯನ ಶಿಬಿರ
ಅಭಿವೃದ್ಧಿ ಕಾರ್ಯದಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದ್ದು, ತಮ್ಮ ತಪ್ಪನ್ನು ತಿರುಚಲು ತಮಗೆ ಬೇಕಾದಂತೆ ಅಧಿಕಾರಿಗಳ ಮೇಲೆ ದರ್ಪ ತೋರಿಸಿ ಅಮಾನತು ಮಾಡಿದ್ದಾರೆ.ಕೂಡಲೇ ಆದೇಶವನ್ನು ಹಿಂಪಡೆದು ಅದೇ ಹುದ್ದೆಯಲ್ಲಿ ಮುಂದುವರೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆಮ್ ಆದಿ ಪಾರ್ಟಿ ಜಿಲ್ಲಾಧ್ಯಕ್ಷ ಭೀಮರಾಯ ನಾಯಕ,ಇನ್ನಿತರರು ಉಪಸ್ಥಿತರಿದ್ದರು.
