ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕವಾಗಿದ್ದರೆ. ಇವರು ಈ ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. 2024ರ ಜೂನ್ 8ರಂದು ಇವರ ವರ್ಗವಾಗಿತ್ತು. ಪುನಃ ಒಂದು ವರ್ಷಕ್ಕೆ ಸರಿಯಾಗಿ ಶಿವಮೊಗ್ಗ ಪಾಲಿಕೆಗೆ ವರ್ಗಾವಣೆ ಮಾಡಲಾಗಿದೆ.

ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ಅವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶಿಸಿದ್ದಾರೆ. ಆಯುಕ್ತರಾಗಿರುವ ಡಾ.ಕವಿತಾ ಯೋಗಪ್ಪನವರ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಪ್ರಸ್ತುತ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಡಾ. ಕವಿತಾ ಯೋಗಪ್ಪನವರ್ ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ವರಿದ ಮಾಡಿಕೊಳ್ಳಲು ತಿಳಿಸಿದ್ದಾರೆ.