ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿಯಲ್ಲಿ ಶ್ರೀ ಗಂಗಾಧರ ಶಾಸ್ತ್ರಿ ಪ್ರತಿಷ್ಠಾನವನ್ನು ರಚಿಸಿ, ಅಧ್ಯಕ್ಷರು ಮತ್ತು ಏಳು ಜನ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ಈ ಪೈಕಿ ಒಬ್ಬ ಆರ್ಎಸ್ಎಸ್ ಕಾರ್ಯಕರ್ತ ಮತ್ತು ಬಿಜೆಪಿ ಯುವ ಮೋರ್ಚಾದ ಮುಖಂಡನನ್ನು ಸದಸ್ಯರನ್ನಾಗಿ ನೇಮಿಸಿರುವುದು ಸ್ಥಳೀಯ ಜನಾಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಭಾಗದ ಖ್ಯಾತ ರಂಗಭೂಮಿ ಕಲಾವಿದರಾದ ಹುನಗುಂದ ತಾಲೂಕಿನ ಚಿತ್ತರಗಿಯ ಗಂಗಾಧರ ಶಾಸ್ತ್ರಿಯವರು ಕೀರ್ತನಕಾರ, ನಟ ಮತ್ತು ಮಾಲೀಕರಾಗಿ ರಂಗಭೂಮಿಗೆ ಇವರ ಕೊಡುಗೆ ಗಮನಾರ್ಹವಾಗಿರುವುದನ್ನು ಪರಿಗಣಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ರಚಿಸಿದೆ. ಆದರೆ ಆರ್ಎಸ್ಎಸ್ ಕಾರ್ಯಕರ್ತ ಮತ್ತು ಬಿಜೆಪಿ ಯುವ ಮೋರ್ಚಾ ಮುಖಂಡನನ್ನು ಸದಸ್ಯರನ್ನಾಗಿ ನೇಮಿಸಿರುವುದು ಪಕ್ಷದ ನಿಷ್ಠಾವಂತ ಮತ್ತು ಜಾತ್ಯತೀತ ತತ್ವದ ಮೇಲೆ ನಂಬಿಕೆ ಇರುವ ಕಾರ್ಯಕರ್ತರು ಸರ್ಕಾರದ ಈ ನಡೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹುನಗುಂದ ತಾಲೂಕಿನ ಇಳಕಲ್ ನಗರದ ಕಾಂಗ್ರೆಸ್ ಪಕ್ಷದ ವಿರೋಧಿ ಮತ್ತು ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾದ ಮುಖಂಡ ಪರಸಪ್ಪ ಹನುಮಂತಪ್ಪ ಬೀಸಲದಿನ್ನಿ(ಪರಶು ಮೋದಿ) ಇವರನ್ನು ಗಂಗಾಧರ ಶಾಸ್ತ್ರಿ ಪ್ರತಿಷ್ಠಾನಕ್ಕೆ ಸದಸ್ಯರನ್ನಾಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ನಾಯಕತ್ವದ ಸೈದ್ದಾಂತಿಕ ಬದ್ಧತೆಯ ಮತ್ತು ಜಾತಿ ರಾಜಕಾರಣದ ಅಸಲಿ ಮುಖ ಅನಾವರಣವಾಗಿದೆ.
ಪರಶುರಾಮ ಬೀಸಲದಿನ್ನಿ ಎನ್ನುವ ವ್ಯಕ್ತಿಯೂ ಕಟ್ಟಾ ಆರ್ಎಸ್ಎಸ್ ಕಾರ್ಯಕರ್ತ ಮತ್ತು ಬಿಜೆಪಿಯ ಪಕ್ಷದ ಅಧಿಕೃತ ಯುವ ಮೋರ್ಚಾದ ಮುಖಂಡನಾಗಿ ಗುರುತಿಸಿಕೊಂಡಿದ್ದಾನೆ.
ದ್ವೇಷ ಭಾಷಣ, ಕೋಮುವಾದಿ ಹೇಳಿಕೆಗಳಿಂದ ಸದಾ ಪ್ರಚಲಿತದಲ್ಲಿರುವ ಈ ವ್ಯಕ್ತಿಯೂ ಅನೇಕ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಅಲ್ಲದೆ ರೌಡಿ ಶೀಟರ್ನಲ್ಲಿ ಈತನ ಹೆಸರಿದೆ ಎನ್ನಲಾಗುತ್ತಿದೆ. ಇಂತಹ ವ್ಯಕ್ತಿಗಳಿಗೆ ಜಾತಿ ಮತ್ತು ವೈಯಕ್ತಿಕ ಕಾರಣಗಳಿಂದ ಸರ್ಕಾರದಲ್ಲಿ ಅಧಿಕಾರ ನೀಡುವ ಸಚಿವರು ಹಾಗೂ ಶಾಸಕರ ಕ್ರಮವೂ ಪಕ್ಷಕ್ಕಿಂತ ಜಾತಿ ಪ್ರೇಮ ಹೆಚ್ಚು, ಪಕ್ಷದ ಸಿದ್ಧಾಂತದ ಬಗೆಗಿನ ಇವರ ಬದ್ಧತೆಯೂ ಶೂನ್ಯ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರದ ಅತ್ಯಂತ ಹೇಸಿಗೆ ಕೆಲಸ, ಇವರ ಪಕ್ಷವನ್ನು ಅಧಿಕಾರಕ್ಕೆ ತರಲು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಜಾತಿಯವರು ಹಗಲಿರುಳು ದುಡಿಯಬೇಕು. ಆದರೆ ಅಧಿಕಾರ ಮತ್ತು ಸ್ಥಾನಮಾನದ ಸಂದರ್ಭದಲ್ಲಿ ವಿರೋಧ ಪಕ್ಷದ ಮುಖಂಡರಿಗೆ ನೀಡುತ್ತಾರೆ. ಅಂದರೆ ಪಕ್ಷದ ಸಚಿವರು ಮತ್ತು ಶಾಸಕರ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಅನಾವರಣಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೆಎಸ್ಆರ್ ಟಿಸಿ ಬಸ್ ಮಗುಚಿ ಬಿದ್ದು ಹಲವರಿಗೆ ಗಾಯ
ಕಾಂಗ್ರೆಸ್ ಸರ್ಕಾರದ ಈ ಇಬ್ಬಗೆಯ ನೀತಿ ಮತ್ತು ಪಕ್ಷದ ಸಚಿವರು ಹಾಗೂ ಶಾಸಕರ ಸೈದ್ಧಾಂತಿಕ ಅಸ್ಪಷ್ಟತೆ ಎದ್ದು ಕಾಣುತ್ತದೆ, ಇದು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷದ ಸಂವಿಧಾನದ ಮೇಲಿನ ಬದ್ಧತೆ, ಜಾತ್ಯಾತೀತ ತತ್ವದ ಹೆಸರಿನ ರಾಜಕಾರಣವು ಕೇವಲ ಅಧಿಕಾರಕ್ಕಾಗಿ ಮಾತ್ರ ಎನ್ನುವ ಅನುಮಾನ ಮೂಡುತ್ತಿದೆ.
ಈ ಅಧಿಸೂಚನೆಯನ್ನು ಹಿಂಪಡೆದು, ರದ್ದುಗೊಳಿಸಿ ಪಕ್ಷದ ನಿಷ್ಠಾವಂತ ಮತ್ತು ಜಾತ್ಯತೀತ ಮೌಲ್ಯದ ಬಗ್ಗೆ ರಾಜಿ ಇಲ್ಲದ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ಕಾರ್ಯಕರ್ತರನ್ನು ಅಥವಾ ಪರಿಣಿತರನ್ನೇ ಸದಸ್ಯರನ್ನಾಗಿ ಮರು ಆದೇಶ ಹೊರಡಿಸಬೇಕೆಂಬುದು ಜನರ ಆಗ್ರಹವಾಗಿದೆ.
ಕೆ ಎಸ್ ಯಿ ಎಂ. ಕಾಲ್ ತುಳಿದಾಟಕ್ಕೆ. ಸಾರ್ವಜನಿಕ ರಾ ಅತಿರೇಕದ ವರ್ತನೆ ಮತ್ತು ಭಾವನಾತ್ಮಕ ಮನೊಭಾವದವರು ಹಾಗೂ ಸರ್ಕಾರಿ ಇತರೆ ಅಂಗಗಳ ನಡುವೆ ಸಾಮರಸ್ಯ ಇಲ್ಲದೆ ಇರುವುದು ಇದಕ್ಕೆ ಕಾರಣ