ಆಲಮಟ್ಟಿ ಅಣೆಕಟ್ಟೆಯ ಗೇಟನ್ನು 524,256 ಮೀಟರ್‌ಗೆ ಎತ್ತರಿಸಿ, ಕೃಷ್ಣಾ ನೀರಿನ ಬಳಕೆಗೆ ಕ್ರಮ ವಹಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ಜೂನ್ 30ರಂದು ಬೃಹತ್ ಹೋರಾಟ ನಡೆಸಲು ನಿರ್ಧರಿಸಿವೆ.
ವಿಜಯಪುರ ನಗರದ ಗಗನಮಹಲ್‌ನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಮುಖಂಡರು, ಆಲಮಟ್ಟಿ ಡ್ಯಾಂ ಎತ್ತರದ ಬಗ್ಗೆ ಮಹಾರಾಷ್ಟ್ರದವರು ಕ್ಯಾತೆ ತೆಗೆದಿರುವುದು ಖಂಡನೀಯ ಎಂದು ಆಕೋಶ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರವು ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯದೆ ನ್ಯಾಯಾಧೀಕರಣದ ತೀರ್ಷಿನಂತೆ ಗೇಟ್ ಅಳವಡಿಸಲು ಕ್ರಮ ವಹಿಸಬೇಕು. ತೀರ್ಪಿನ ಕುರಿತು, ತಕ್ಷಣ ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು” ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಅರವಿಂದ ಕುಲಕರ್ಣಿ ಮಾತನಾಡಿ, “ಕೃಷ್ಣಾ 2ನೇ ನ್ಯಾಯಾಧೀಕರಣ ಆಲಮಟ್ಟಿ ಜಲಾಶಯವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿ ನೀರು ಹಂಚಿ 2010ರಲ್ಲೇ ತೀರ್ಪು ನೀಡಿದೆ. ಆದರೀಗ ಮಹಾರಾಷ್ಟ್ರ ಕೆಲಸವಿಲ್ಲದೆ ಕ್ಯಾತೆ ತೆಗೆದಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ರೈತರ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಧರಣಿ ಖಚಿತ: ಈಶಪ್ಪ ಸರಬದ
“ಅಂತಿಮ ಅಧಿಸೂಚನೆ ಹೊರಡಿಸುವಂತೆ ಪ್ರವಾಹಕ್ಕೆ ಆಲಮಟ್ಟಿ ಡ್ಯಾಂ ಹಿನ್ನೀರು ಕಾರಣವಲ್ಲವೆಂದು ಮಹಾರಾಷ್ಟ್ರ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ 2019ರಲ್ಲೇ ವರದಿ ಸಲ್ಲಿಸಿದೆ. ಆದರೂ ಆ ರಾಜ್ಯದವರು ತಕರಾರು ತೆಗೆಯುತ್ತಿರುವುದು ಸರಿಯಲ್ಲ” ಎಂದರು.
ರೈತ ಸಂಘಟನೆಗಳ ಮುಖಂಡರಾದ ಪಾಂಡು ಹ್ಯಾಟಿ, ವಿಜಯ ಪೂಜಾರಿ, ಶಾರದಾ, ಗುರುಲಿಂಗಪ್ಪ ಪಡಸಲಗಿ, ಬಿರಾದಾರ, ಬಂಡಿವಡ್ಡರ, ಶಂಕರಗೌಡ ಹಿರೇಗೌಡರ, ಉಮೇಶ ವಾಲಿಕಾರ, ರಾಜೇಂದ್ರ ದೇಸಾಯಿ, ಮಡಿವಾಳಪ್ಪ ಕಲಗುರ್ಕಿ ಸೇರಿದಂತೆ ಇತರರು ಇದ್ದರು.