ಐಪಿಎಲ್ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮಾರಾಟವಾಗಲಿದೆ ಎಂಬ ವದಂತಿ ಹರಿದಾಡುತ್ತಿದ್ದು ಈ ಬಗ್ಗೆ ಮಾಲೀಕ ಸಂಸ್ಥೆ ಡಿಯಾಜಿಯೊ ಇಂಡಿಯಾ ಸ್ಪಷ್ಟಣೆ ನೀಡಿದೆ. ಯುಕೆ ಮೂಲದ ಡಿಯಾಜಿಯೊ ಪಿಎಲ್‌ಸಿಯ ಭಾರತೀಯ ಶಾಖೆಯಾದ ಡಿಯಾಜಿಯೊ ಇಂಡಿಯಾ ತಂಡವನ್ನು ಮಾರಾಟ ಮಾಡುವ ವದಂತಿಗಳನ್ನು ತಳ್ಳಿಹಾಕಿದೆ.
ತಂಡವನ್ನು ಮಾರಾಟ ಮಾಡುವ ಮಾಧ್ಯಮ ವರದಿಗಳು ಸಂಪೂರ್ಣವಾಗಿ ಊಹಾತ್ಮಕವಾಗಿವೆ. ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಡಿಯಾಜಿಯೊ ಇಂಡಿಯಾದ ಕಾರ್ಯದರ್ಶಿ ಮಿತ್ತಲ್ ಸಾಂಘ್ವಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್ ಫೈನಲ್ | ಟಾಸ್ ಗೆದ್ದ ಪಂಜಾಬ್; ಆರ್‌ಸಿಬಿ ಬ್ಯಾಟಿಂಗ್
ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡುವ ಊಹಾಪೋಹಗಳು ಹರಡಲು ಪ್ರಾರಂಭಿಸಿದಾಗಿನಿಂದ ಡಿಯಾಜಿಯೊ ಒಡೆತನದ ಯುನೈಟೆಡ್ ಸ್ಪಿರಿಟ್ಸ್‌ನ ಷೇರುಗಳು ಗಮನಾರ್ಹ ಏರಿಕೆ ಕಂಡಿವೆ. ಡಿಯಾಜಿಯೊ ಐಪಿಎಲ್ ಚಾಂಪಿಯನ್‌ಗಳ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಮಂಗಳವಾರ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಜೂನ್ 3ರಂದು ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಗೆಲುವು ಕಂಡಿದೆ. ಜೂನ್ 4ರಂದು ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಭಾರಿ ದುರಂತ ಸಂಭವಿಸಿದೆ. ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
