ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರೈತರು ಕಳೆದ 20 ವರ್ಷಗಳಿಂದ ನಿರಂತರವಾಗಿ ಉಳುವೆ ಮಾಡುತ್ತಿರುವ ಬಗರ್‌ಹುಕುಂ ಜಮೀನನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದಿಂದ ಸಿಂದಗಿಯ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಗೋಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಢವಳಾರ ಗ್ರಾಮದ ರಿ.ಸ.ನಂ. 191ರಲ್ಲಿ ಇರುವ 70 ಎಕರೆ ಹಾಗೂ ಸಾಸಾಬಾಳ ಗ್ರಾಮದ ರಿ.ಸ.ನಂ. 14ರಲ್ಲಿ ಇರುವ 8 ಎಕರೆ ಜಮೀನಿನಲ್ಲಿ ಸ್ಥಳೀಯ ರೈತರು ಈಗಾಗಲೇ ಸಾಗುವಳಿ ಮಾಡುತ್ತಾರೆ. ಈ ಜಮೀನುಗಳೇ ಅವರ ಕುಟುಂಬಗಳ ಮೂಲ ಆಧಾರವಾಗಿದೆ. ಅಲ್ಲದೇ ಇವರಿಗೆ ಬೇರೆ ಯಾವುದೇ ಆಸ್ತಿ ಇಲ್ಲದಿರುವುದರಿಂದ ತೀವ್ರ ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದಾರೆ.
ಹಲವಾರು ರೈತರು ಈಗಾಗಲೇ ಫಾರಂ ನಂ. 57 ನಮೂನೆಯ ಮೂಲಕ ಅರ್ಜಿ ಸಲ್ಲಿಸಿದ್ದು, ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ರೈತರಿಗೆ ಬಗರ್‌ಹುಕುಂ ಸಾಗುವಳಿ ಜಮೀನು ಅನ್ನದಾತ ಹೆಸರಿನಲ್ಲಿ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ: ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ
ಈ ಸಂದರ್ಭದಲ್ಲಿ ತಾಲ್ಲೂಕಾಧ್ಯಕ್ಷ ರಮೇಶ ತಳವಾರ, ರುಕ್ಖುದ್ದೀನ್ ಹಳೇಮನಿ, ಅನೀಲ ಭಜಂತ್ರಿ, ಮಹಾದೇವ ಭಜಂತ್ರಿ, ಅಶೋಕ ಹಡಪದ, ನಿಂಗಪ್ಪ ವಡಿಗೇರಿ, ಮೈಬೂಬ ಹಳಿಮನಿ, ಸೋಮಪ್ಪ ಹರಿಜನ, ತವರು ರಾಠೋಡ, ಅಲ್ಲಾಬಕ್ಷ ಹಳೇಮನಿ, ಶಂಕರ ಬಾದನ, ಕುಪ್ಪಣ್ಣ ತಳವಾರ, ಭೀಮಶ್ಯಾ ಪವಾರ, ಲಕ್ಷ್ಮಿ ಬಾಯಿ ರಾಠೋಡ, ಕಸ್ತೂರಿಬಾಯಿ ಚವ್ಹಾಣ, ಯಲ್ಲಪ್ಪ ತಳವಾರ, ಬಾಬೂ ರಾಠೋಡ ಮತ್ತಿತರರು ಇದ್ದರು.