ಅಪಾಯಕಾರಿ ಸಿಎಚ್ ಪೌಡರ್ ಮಿಕ್ಸಿಂಗ್ ಬಗ್ಗೆ ಎಚ್ಚರವಹಿಸಿ, ಯಾವುದೇ ಕಾರಣಕ್ಕೂ ಸೇಂದಿ ಮಾರಾಟವಾಗದಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಸೂಚನೆ ನೀಡಿದ್ದಾರೆ.
ಇಂದು ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ತಿಮ್ಮಾಪೂರ ಅವರು, ರಾಯಚೂರು ಸೇರಿದಂತೆ ಆಂಧ್ರ, ತೆಲಂಗಾಣ ಗಡಿಯಲ್ಲಿ ನಿಷೇಧಿತ ಸಿಹೆಚ್ ಪೌಡರ್ ಮಿಕ್ಸಿಂಗ್‌ನಿಂದ ಸೇಂದಿ ತಯಾರಿಸುವವರ ಮೇಲೆ ಹದ್ದಿನ ಕಣ್ಣಿಡಬೇಕು. ಸಿಹೆಚ್ ಪೌಡರ್ ಮಿಕ್ಸಿಂಗ್‌ಗೆ ಅವಕಾಶ ಸಿಗದಂತೆ ಎಚ್ಚರವಹಿಸಬೇಕು. ಇಂಟಲಿಜೆನ್ಸ್ ವ್ಯವಸ್ಥೆ ಬಲಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರಿಯನ್ನು ಶಿಕ್ಷಿಸುವುದಾದರೆ ಕೋಮುವಾದಿಯನ್ನು ರಕ್ಷಿಸಬಹುದೇ?
ಇದರ ಜೊತೆಗೆ ಮಿಲಿಟರಿ ಮದ್ಯ ದುರುಪಯೋಗ ಹಾಗೂ ಮಿಲಿಟರಿ ಹೆಸರಿನಲ್ಲಿ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ, ಬಿಎಲ್‌ಸಿ ಪ್ರಕರಣಗಳಿಗೆ ಏಕರೂಪ ದಂಡ ವ್ಯವಸ್ಥೆ, ಅಕ್ರಮ ಮದ್ಯ ಸಾಗಣೆಗೆ ಕಡಿವಾಣ, ನಕಲಿ ಮದ್ಯ ಪತ್ತೆ ಹಚ್ಚಲು ಇಂಟಲಿಜೆನ್ಸ್ ವ್ಯವಸ್ಥೆ ಮತ್ತಷ್ಟು ಬಲಪಡಿಸುವುದು, ನಾನ್ ಪೊರ್ಟಬಲ್ ಸ್ಪಿರಿಟ್ಸ್ ದುರ್ಬಳಕೆ ಸೇರಿದಂತೆ ಇಲಾಖೆ ಸುಧಾರಣಾ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ ಸಿ ಜಾಫರ್, ಅಬಕಾರಿ ಆಯುಕ್ತರಾದ ವೆಂಕಟೇಶ್, MSIl ಎಂಡಿ ಮನೋಜ್ ಕುಮಾರ್, MSIl ನಿರ್ದೇಶಕರಾದ ಚಂದ್ರಪ್ಪ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.