ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ಕಂಗಾಲಾಗಿ 212 ರನ್ ಗಳಿಗೆ ಆಲೌಟ್ ಆಗಿದೆ. ಮಿಂಚಿನ ಬೌಲಿಂಗ್ ಮಾಡಿದ ಕಗ್ಗಿಸೊ ರಬಾಡ 5 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.
ಇಂಗ್ಲೆಂಡ್ನ ಲಾರ್ಡ್ಸ್ ಮೈದಾನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಪಡೆಯಲಿಲ್ಲ. ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ರಬಾಡ ಕಾಂಗರೂಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಇನಿಂಗ್ಸ್‌ನ ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಬೆಡಿಂಗ್‌ಹ್ಯಾಮ್‌ಗೆ ಉಸ್ಮಾನ್ ಖವಾಜಾ ಕ್ಯಾಚ್ ನೀಡಿದರೆ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ಕ್ಯಾಮರೂನ್ ಗ್ರೀನ್, ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿ ಔಟಾದರು. ಆರಂಭಿಕ ಆಟಗಾರ ಖವಾಜ ಖಾತೆ ತೆರೆಯಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರೆ. ಗ್ರೀನ್ ಇನಿಂಗ್ಸ್ ಕೇವಲ ನಾಲ್ಕು ರನ್‌ಗಳಿಗೆ ಅಂತ್ಯವಾಯಿತು.
ಇದನ್ನು ಓದಿದ್ದೀರಾ? ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಅಳಿಸಿದ ಜೋಸ್ ಬಟ್ಲರ್
ಸತತ 2 ಚೆಂಡುಗಳಲ್ಲಿ ವಿಕೆಟ್ ಪತನದ ನಂತರ ಮತ್ತಷ್ಟು ತಾಳ್ಮೆಯ ಆಟಕ್ಕೆ ಮುಂದಾದ ಮಾರ್ನಸ್ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಮೂರನೇ ವಿಕೆಟ್‌ಗೆ 30 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರು ಬೃಹತ್ ಜೊತೆಯಾಟ ನೀಡುತ್ತಾರೆ ಎನ್ನುತ್ತಿರುವಾಗಲೇ ದಾಳಿಗಿಳಿದ ಯಾನ್ಸನ್, ಲಬುಶೇನ್ ಅವರ ವಿಕೆಟ್ ಉರುಳಿಸಿದರು. ಲಬುಶೇನ್ 17 ರನ್ ಗಳಿಸಿ ಔಟಾದರೆ, ತಂಡದ ಬ್ಯಾಟಿಂಗ್ ಜೀವಾಳವಾಗಿದ್ದ ಟ್ರಾವಿಸ್ ಹೆಡ್ 11 ರನ್ ಬಾರಿಸಿ ಯಾನ್ಸನ್ಗೆ ವಿಕೆಟ್ ಒಪ್ಪಿಸಿದರು.
ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಅರ್ಧ ಶತಕ ಗಳಿಸಿದ್ದ ಅನುಭವಿ ಸ್ಟೀವ್ ಸ್ಮಿತ್ 66 ರನ್ ಗಳಿಸಿದ್ದಾಗ ಮಾರ್ಕ್ರಮ್ ಬೌಲಿಂಗ್‌ನಲ್ಲಿ ಔಟಾದರು. ಅವರ ಆಟದಲ್ಲಿ 10 ಆಕರ್ಷಕ ಬೌಂಡರಿಗಳಿದ್ದವು. ಅಲೆಕ್ಸ್ ಕ್ಯಾರಿ 23 ರನ್ ಗಳಿಸಿ ಕೇಶವ್ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು
ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 51/5 ಮತ್ತು ಜಾನ್ಸನ್ 49/3 ವಿಕೆಟ್ ಕಿತ್ತು ಯಶಸ್ವಿ ಬೌಲರ್‌ಗಳೆನಿಸಿದರು.
Kagiso Rabada rises to the occasion as he claims his 17th Test five-for in the #WTC25 Final against Australia ⚡
— ICC (@ICC) June 11, 2025
More from the action ➡️ https://t.co/LgFXTd0RHt pic.twitter.com/3G5NAcDsv4
Steve Smith and Beau Webster help Australia rebuild after early wickets with resilient half-centuries 💪
— ICC (@ICC) June 11, 2025
Follow LIVE ➡️ https://t.co/LgFXTd0jRV pic.twitter.com/9abePDqZ2s