ಡಿಸೆಂಬರ್‌ನಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಈಗಿನಿಂದಲೇ ಸಿದ್ದತೆ ಕೈಗೊಳ್ಳುವಂತೆ ಸಚಿವ ಎಂ ಬಿ ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ತಿಳಿಸಿದರು.
ವಿಜಯಪುರ ನಗರದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ-2025 ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.
“ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ ಕಂಡುಬಂದ ಲೋಪದೋಷಗಳನ್ನು ಈ ಬಾರಿ ಸರಿಪಡಿಸಬೇಕು. ನೋಂದಣಿ ಪ್ತಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಈಗಿನಿಂದಲೇ ಪರಿಸರ ಮತ್ತು ಆರೋಗ್ಯ ಜಾಗೃತಿ ಮೂಡಿಸಲು ಕಾರ್ಯೋನ್ಮುಖರಾಗಬೇಕು” ಎಂದು ಹೇಳಿದರು.
“ಈ ಬಾರಿ ಟಿ-ಶರ್ಟ್ ವಿತರಣೆಯನ್ನು ಸುಗಮವಾಗಿ ನಡೆಸಬೇಕು. ಕಾರ್ಯಕ್ರಮಗಳು ಆಕರ್ಷಣೀಯವಾಗಿ ಇರುವಂತೆ ಸಾಂಸ್ಕೃತಿಕ ಸಮಿತಿಯವರು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಎಲ್ಲ ಕ್ಷೇತ್ರಗಳ ಜನರು ಮತ್ತು ಯುವಕರು ಪಾಲ್ಗೊಳ್ಳಲು, ರೂಟ್ ಸಮಿತಿ, ರೇಸ್ ಸಮಿತಿ, ಹೈಡೇಷನ್ ಸಮಿತಿ, ಸ್ವಯಂ ಸೇವಕರ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿಯವರೂ ಈಗಿನಿಂದಲೇ ಯೋಜನೆ ರೂಪಿಸಬೇಕು” ಎಂದು ತಿಳಿಸಿಸದರು.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಅವಘಡದಲ್ಲಿ ಸಾವಿಗೀಡಾದ ಕ್ರಿಕೆಟ್ ಅಭಿಮಾನಿಗಳು ಮತ್ತು ಜೂನ್ 8ರಂದು ನಿಧನರಾದ ಶತಾಯುಷಿ ಸಂಗವ್ವ ಮಲಕಯ್ಯ ಸ್ವಾಮಿ ಗೌರವಾರ್ಥವಾಗಿ ಸಭೆಯ ಪ್ರಾರಂಭದಲ್ಲಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಅಪೂರ್ಣಗೊಂಡ ಚರಂಡಿ, ರಸ್ತೆ ಕಾಮಗಾರಿಗಳ ಪೂರ್ಣಗೊಳಿಸಲು ಒತ್ತಾಯ
ಶುಭಶ್ರೀ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಶಾಂತೇಶ ಕಳಸಗೊಂಡ, ಕೋರ್ ಕಮಿಟಿ ಮುಖಂಡರಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಔರಸಂಗ, ಶಂಭು ಕರ್ಪೂರಮಠ, ಸುರೇಶ ಸೊಣಸಗಿ, ಡಾ. ರಾಜು ಯಲಗೊಂಡ, ಅಪ್ಪು ಭೈರಗೊಂಡ, ಡಾ. ಪ್ರವೀಣ ಚೌರ, ಅಶ್ವಾಕ ಮನಗೂಳಿ, ಸಮೀರ ಬಳಗಾರ, ಡಿ ಕೆ ತಾವಸೆ, ಗುರುಶಾಂತ ಕಾಪಸೆ, ಶಿವಾನಂದ ಯರನಾಳ, ವೀಣಾ ದೇಶಪಾಂಡೆ ಇದ್ದರು.