ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವೆ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ರೋಚಕ ಹಂತಕ್ಕೆ ತಲುಪಿದೆ.
ಮೂರನೇ ದಿನವಾದ ಇಂದು ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿರುವ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ತಮ್ಮ 2ನೇ ಇನಿಂಗ್ಸ್‌ನಲ್ಲಿ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಪೇರಿಸಿದ್ದಾರೆ. ಹರಿಣಿಗಳ ಪಡೆ ಚೊಚ್ಚಲ ಐಸಿಸಿ ಟ್ರೋಫಿ ಹಿಡಿಯಲು 152 ರನ್‌ಗಳ ಅಗತ್ಯವಿದೆ. ಅದೇ ರೀತಿ ಎರಡನೇ ಬಾರಿ ಚಾಂಪಿಯನ್ ಶಿಪ್ ಪಡೆಯಲು ಆಸೀಸ್ ತಂಡ ಬೇಗನೆ ದಕ್ಷಿಣ ಆಫ್ರಿಕಾ 8 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಬೇಕಿದೆ.
ಏಡನ್ ಮಾರ್ಕರಮ್ ಅರ್ಧ ಶತಕ ಪೂರೈಸಿ ಅಜೇಯವಾಗಿ ಆಟವಾಡುತ್ತಿದ್ದಾರೆ. ಇವರಿಗೆ ಜೊತೆಯಾಗಿ ತೆಂಬಾ ಬವುಮಾ 33 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. 91 ಚೆಂಡುಗಳನ್ನು ಎದುರಿಸಿರುವ ಮಾರ್ಕರಮ್ 4 ಬೌಂಡರಿಗಳೊಂದಿಗೆ 61 ರನ್ ಪೇರಿಸಿದ್ದಾರೆ. ಇದಕ್ಕೂ ಮುನ್ನ ವಯಾನ್ ಮುಡ್ಲರ್ 27 ಹಾಗೂ ರಿಯಾನ್ ರಿಕಲ್ಟನ್ 6 ಗಳಿಸಿ ಸ್ಟಾರ್ಕ್ ಬೌಲಿಂಗ್‌ನಲ್ಲಿ ಔಟಾದರು.
ಮೂರನೇ ದಿನದಾಟವನ್ನು 144/8 ರನ್‌ನೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಪಾನೀಯ ವಿರಾಮದ ವೇಳೆಗೆ 65 ಓವರ್‌ಗಳಲ್ಲಿ 207 ರನ್ ಗಳಿಸಿ ಆಲೌಟ್ ಆಗುವುದರೊಂದಿಗೆ 281 ರನ್ ಮುನ್ನಡೆ ಗಳಿಸಿತು. ಕೊನೆಯವರೆಗೂ ಉತ್ತಮ ಆಟವಾಡಿದ ಮಿಷಲ್ ಸ್ಟಾರ್ಕ್ 5 ಬೌಂಡರಿಗಳೊಂದಿಗೆ ಅಜೇಯ 58 ರನ್ ಗಳಿಸಿದರು.
ಇದನ್ನು ಓದಿದ್ದೀರಾ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ | ರಬಾಡ ಮಾರಕ ದಾಳಿ; 212 ರನ್‌ಗಳಿಗೆ ಆಸೀಸ್ ಆಲೌಟ್
ಮೃತರಿಗೆ ಆಟಗಾರರಿಂದ ಗೌರವ ಸಲ್ಲಿಕೆ
ಗುಜರಾತ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯೂಟಿಸಿ) ಫೈನಲ್ ಪಂದ್ಯ ಆಡುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಆಟಗಾರರು ಮೌನಾಚರಣೆ ಹಾಗೂ ಕಪ್ಪು ಪಟ್ಟಿ ಧರಿಸುವ ಮೂಲಕ ಗೌರವ ಸಲ್ಲಿಸಿದರು.
ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಸಿ ಫೈನಲ್‌ನ ಮೂರನೇ ದಿನದಾಟಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಆಟಗಾರರು ಒಂದು ನಿಮಿಷ ಮೌನ ಆಚರಿಸಿದರು. ಅಲ್ಲದೆ ತೋಳಿಗೆ ಕಪ್ಪು ಪಟ್ಟಿ ಮೈದಾನಕ್ಕಿಳಿದರು.