ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ – ಕೇಂದ್ರದ ಉದ್ದೇಶವೇನು? ವಿವಾದ ಯಾಕೆ?

Date:

Advertisements
ಹಿಮಾಲಯನ್ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಅರಣ್ಯಗಳಿಗೆ ಮಸೂದೆಯು ಹಾನಿ ಮಾಡುತ್ತದೆ. ದುರ್ಬಲ ಪರಿಸರ ಮತ್ತು ಭೂವೈಜ್ಞಾನಿಕ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯತೆಗೆ ಅಪಾಯವನ್ನು ಒಡ್ಡುತ್ತವೆ. ಅರಣ್ಯ ವಾಸಿಗಳಿಗೆ ಬದೆರಿಕೆಯಾಗಿದೆ ಎಂದು ಪರಿಸರ ತಜ್ಞರು ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಆದರೂ, ಕೇಂದ್ರವು ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಮಸೂದೆ ಏನು ಹೇಳುತ್ತದೆ ಎಂಬುದನ್ನು ನೋಡೋಣ...

ಹವಾಮಾನ ಬದಲಾವಣೆಗೆ ನಾನಾ ರೀತಿಯ ಕಾರಣಗಳಿವೆ. ಅದರಲ್ಲಿ, ಪರಿಸರದ ವಿನಾಶವೂ ಒಂದು. ಭೂಮಿಯ ಹಸಿರು ವಲಯ ಕ್ಷೀಣಿಸುತ್ತಿದೆ. ಕಾಂಕ್ರಿಟ್‌ ಕಾಡುಗಳು ತಲೆ ಎತ್ತುತ್ತಿವೆ. ತಾಪಮಾನವೂ ಹೆಚ್ಚುತ್ತಿದೆ. ಮಳೆಯ ಕಾಲಮಾನ ಏರುಪೇರಾಗಿದೆ. ಕೆಲವೆಡೆ ಅತಿವೃಷ್ಟಿಯಾದರೆ, ಹಲವೆಡೆ ಬರ ವ್ಯಾಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ ಅತ್ಯಗತ್ಯವಾಗಿದೆ. ಈ ನಡುವೆ, ಕೇಂದ್ರ ಸರ್ಕಾರವು ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ-2023ನ್ನು ಸಿದ್ದಪಡಿಸಿದೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಕೂಡ ಮಸೂದೆಗೆ ಒಪ್ಪಿಗೆ ನೀಡಿದೆ. ಸಂಸತ್ತಿನ ಹಾಲಿ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.

ದೇಶದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ತಿದ್ದುಪಡಿ ಮಸೂದೆಯ ಉದ್ದೇಶವೆಂದು ಸರ್ಕಾರ ಹೇಳಿದೆ. ಆದರೆ, ಅದರಲ್ಲಿನ ಅಂಶಗಳು ಪರಸ್ಪರ ವ್ಯತಿರಿಕ್ತವಾಗಿವೆ. ಮಸೂದೆಯಲ್ಲಿ ಲೋಕೋಪಯೋಗಿ ಯೋಜನೆಗಳಿಗಾಗಿ ಅರಣ್ಯದ ಮರಗಳನ್ನು ಕಡಿಯಲು ಅವಕಾಶ ನೀಡಲಾಗಿದೆ. ಅಲ್ಲದೆ, ಗಡಿ ಮತ್ತು ಗಡಿಯೇತರ ರಾಷ್ಟ್ರೀಯ ಭದ್ರತೆಯ ಪ್ರದೇಶಗಳನ್ನು ಅರಣ್ಯ ಮುಕ್ತಗೊಳಿಸುವುದಾಗಿಯೂ ಮಸೂದೆಯಲ್ಲಿ ಹೇಳಲಾಗಿದೆ. ಜೊತೆಗೆ, ಅರಣ್ಯವಾಸಿಗಳಿರುವ ಅರಣ್ಯಗಳನ್ನು ಅವರಿಂದ ಮುಕ್ತಗೊಳಿಸಿ ಶುದ್ಧ ‘ಹಸಿರು ಹೊದಿಕೆ’ಯನ್ನು ನಿರ್ಮಿಸುವುದಾಗಿ ಮಸೂದೆಯಲ್ಲಿ ಹೇಳಲಾಗಿದೆ.

ಏನಿದು ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ?

Advertisements

ಈ ಮಸೂದೆ ಮೂಲಕ ಅರಣ್ಯ ಸಂರಕ್ಷಣಾ ಕಾಯಿದೆ-1980ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. 1980ರ ಕಾಯ್ದೆಯು ಭಾರತದ ಅರಣ್ಯಗಳನ್ನು ರಕ್ಷಿಸಲು ಜಾರಿಗೆ ತಂದ ಶಾಸನವಾಗಿದೆ. ಇದು ಅರಣ್ಯ ಸಂಪನ್ಮೂಲಗಳನ್ನು – ಮರ, ಬಿದಿರು, ಕಲ್ಲಿದ್ದಲು ಹಾಗೂ ಖನಿಜಗಳನ್ನು ಹೊರತೆಗೆಯುವುದು ಮತ್ತು ಅಲ್ಲಿನ ಸಮುದಾಯಗಳನ್ನು ಹೊರಹಾಕುವುದನ್ನು ನಿಯಂತ್ರಿಸುತ್ತದೆ. ಈ ಕಾಯ್ದೆಯ ಜೊತೆಗಿರುವ ಅರಣ್ಯ ಹಕ್ಕು ಕಾಯ್ದೆಯು ಆದಿವಾಸಿಗಳು ಮತ್ತು ಅರಣ್ಯವನ್ನು ಅವಲಂಬಿಸಿರುವ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುತ್ತದೆ.

ಆದರೂ, 1951ರಿಂದ 1975ರ ಅವಧಿಯಲ್ಲಿ ಸುಮಾರು 40 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ನಾನಾ ಅರಣ್ಯೇತರ ಉದ್ದೇಶಗಳಿಗಾಗಿ ತೆರವು ಮಾಡಲಾಗಿದೆ. ಅಂತೆಯೇ, 1980ರಿಂದ 2023 ರವರೆಗೆ 10 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಅಂದರೆ, 1980ರಲ್ಲಿ ಜಾರಿಗೆ ಬಂದ ಕಾಯಿದೆಯು ಅರಣ್ಯ ಭೂಮಿಯನ್ನು ಕೈಗಾರಿಕೆಗಳಂತಹ ಉದ್ದೇಶಗಳಿಗೆ ಸ್ವಾಧೀನಪಡಿಸಿಕೊಳ್ಳುವ ವೇಗವನ್ನು ತಗ್ಗಿಸಿದೆ.

ಅರಣ್ಯ ಭೂಮಿ 1 1

ಆದಾಗ್ಯೂ, ಕೇಂದ್ರ ಅಥವಾ ರಾಜ್ಯ ಸರ್ಕಾರದ ದಾಖಲೆಗಳಲ್ಲಿ ಈಗಾಗಲೇ ‘ಅರಣ್ಯ’ ಎಂದು ಗುರುತಿಸಲಾದ ಪ್ರದೇಶಗಳಿಗೆ ಮಾತ್ರ ಆ ಕಾಯ್ದೆ ರಕ್ಷಣೆ ನೀಡುತ್ತಿತ್ತು. ಗೋದವರ್ಮನ್ ತಿರುಮಲ್ಪಾಡ್ ಪ್ರಕರಣದಲ್ಲಿ 1996ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅರಣ್ಯ ಸಂರಕ್ಷಣೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಇದರ ಅಡಿಯಲ್ಲಿ, ಔಪಚಾರಿಕವಾಗಿ ‘ಅರಣ್ಯಗಳು’ ಎಂದು ಔಪಚಾರಿಕವಾಗಿ ಅಧಿಸೂಚಿತಗೊಳ್ಳದ ಪ್ರದೇಶಗಳು ಕೂಡ ಅರಣ್ಯಗಳು ಆಗಿರುತ್ತವೆ. ‘ಅರಣ್ಯ’ ಎಂಬುದಕ್ಕೆ ಎಲ್ಲವನ್ನು ಒಳಗೊಳ್ಳುವ ವ್ಯಾಖ್ಯಾನವಿಲ್ಲ ಎಂದಿದ್ದ ತಿರುಮಲ್ಪಾಡ್ ತೀರ್ಪು, ತಮ್ಮದೇ ಆದ ಮಾನದಂಡಗಳನ್ನು ಬಳಸಿಕೊಂಡು ಅರಣ್ಯಗಳನ್ನು ವ್ಯಾಖ್ಯಾನಿಸುವ ಮತ್ತು ಗುರುತಿಸುವ ಜವಾಬ್ದಾರಿಯನ್ನು ಸರ್ಕಾರಗಳಿಗೆ ನೀಡಿದೆ.

1988ರ ಭಾರತದ ಅರಣ್ಯ ನೀತಿಯ ಪ್ರಕಾರ, ಒಟ್ಟು ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗವು ಅರಣ್ಯ ಸೀಮೆಯಾಗಿರಬೇಕು. ಆದರೆ, ದೇಶದಲ್ಲಿ ಅರಣ್ಯ ಸೀಮೆಯ ಪ್ರಮಾಣ ಕೇವಲ 21% ಮಾತ್ರ. ದಾಖಲಿತ ಅರಣ್ಯ, ತೋಪುಗಳು, ತೋಟಗಳ ಅಡಿಯಲ್ಲಿ ಮರಗಳಿರುವ ಕೆಲವು ಪ್ರದೇಶಗಳನ್ನೂ ಸಹ ಲೆಕ್ಕ ಹಾಕಿದರೆ, ಅದು ಸುಮಾರು 24% ಆಗುತ್ತದೆ. ಒಟ್ಟು ಅರಣ್ಯ ಪ್ರದೇಶವನ್ನು ಶೇ.3ನೇ1 ಭಾಗಕ್ಕೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿಗಳ ಅಗತ್ಯವಿದೆ ಎಂದು ಪರಿಸರ ಸಚಿವಾಲಯವು ಹೇಳುತ್ತದೆ.

ಮಸೂದೆಯಲ್ಲಿನ ತಿದ್ದುಪಡಿಗಳು ಏನು ಹೇಳುತ್ತವೆ?

ಅರಣ್ಯಗಳನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುವ ‘ಮುನ್ನುಡಿ’ಯನ್ನು ಸೇರಿಸಲಾಗುತ್ತದೆ. ಜೀವವೈವಿಧ್ಯ ಮತ್ತು ಹವಾಮಾನ ಬದಲಾವಣೆಯಿಂದ ಪರಿಸರ ಸವಾಲುಗಳನ್ನು ಎದುರಿಸುವ ಉದ್ದೇಶವಿರುತ್ತದೆ ಎಂಬುದು ಸರ್ಕಾರದ ಹೇಳಿದೆ.

ಆದರೆ, ವಾಸ್ತವವಾಗಿ, ತಿದ್ದುಪಡಿಗಳು ಅರಣ್ಯ ಸಂರಕ್ಷಣೆಯಲ್ಲಿನ ಬಿಗಿ ನಿಯಮಗಳನ್ನು ಸಡಿಲಗೊಳಿಸುತ್ತವೆ. ದೇಶದ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯತಂತ್ರದ ಯೋಜನೆಗಳಿಗೆ ಅಥವಾ ಭದ್ರತೆ ಮತ್ತು ರಕ್ಷಣಾ ಯೋಜನೆಗಳಿಗಾಗಿ 5-10 ಹೆಕ್ಟೇರ್‌ವರೆಗಿನ ಅರಣ್ಯ ಭೂಮಿಗೆ ಸಹ ಕಾಯಿದೆಯ ಷರತ್ತುಗಳಿಂದ ವಿನಾಯಿತಿ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಗಡಿಗಳಿಂದ 100 ಕಿ.ಮೀ ಸುತ್ತಳತೆಯ ಅರಣ್ಯ ಭೂಮಿಗೆ ಈ ಅಂಶ ಅನ್ವಯಿಸುತ್ತದೆ ಎಂಬುದು ಸಚಿವಾಲಯದ ವಾದ.

ಆದರೆ, ಖಾಸಗಿ ತೋಟಗಳು ಅಥವಾ ಅಧಿಕೃತವಾಗಿ ಅರಣ್ಯ ಎಂದು ಗುರುತಿಸದಿರುವ ಪ್ರದೇಶವನ್ನು ಮರು ಅರಣ್ಯೀಕರಣಗೊಳಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶ ನೀಡುತ್ತದೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ 2030ರ ವೇಳೆಗೆ 300 ಕೋಟಿ ಟನ್‌ಗಳ ‘ಕಾರ್ಬನ್ ಸಿಂಕ್’ ಅನ್ನು ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆಗಳಿಗೆ ಪ್ರಸ್ತುತ ಕಾಯ್ದೆಯು ‘ಅಡಚಣೆ’ಯಾಗಿದೆ. ಈ ‘ಅಡಚಣೆ’ಯನ್ನು ‘ನಿವಾರಿಸಿಕೊಳ್ಳುವ’ ಸಲುವಾಗಿ ಹಾಲಿ ತಿದ್ದುಪಡಿಗಳನ್ನು ತರಲಾಗುತ್ತಿದೆ ಎಂಬ ಟೀಕೆ ಇದೆ.

ಮತ್ತೊಂದೆಡೆ, ರಾಜ್ಯಗಳು ಗಣಿಗಾರಿಕೆ ಕಾರ್ಯಾಚರಣೆಗಳಿಗಾಗಿ ಕಂಪನಿಗಳಿಗೆ ತೋಟಗಳಿಗೆ ಮೀಸಲಾದ ಅರಣ್ಯ ಪ್ರದೇಶಗಳನ್ನು ಹಂಚುತ್ತಿವೆ – ಇದು ಕಾಯಿದೆಯ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಅರಣ್ಯಗಳನ್ನು ಕೈಗಾರಿಕಾ ಬಳಕೆಗಳಿಗೆ ಬಳಸಿಕೊಳ್ಳುವ ಮತ್ತು ಮರು ಅರಣ್ಯೀಕರಣಕ್ಕೆ ಸಹಾಯ ಮಾಡುವ ಕಾಯಿದೆಯ ಮೂಲ ಉದ್ದೇಶವನ್ನು ಮೀರಿ ಹೊಸ ಪರಿಹಾರಗಳನ್ನು ರೂಪಿಸಲು ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಹೇಳಿಕೊಂಡಿದೆ.

ತಿದ್ದುಪಡಿಗಳಿಗೆ ಆಕ್ಷೇಪಣೆಗಳೇನು?

ಜೆಪಿಸಿ 31 ಸದಸ್ಯರನ್ನು ಒಳಗೊಂಡಿದೆ. ಅವರಲ್ಲಿ 18 ಮಂದಿ ಬಿಜೆಪಿಯವರು. ಸಾಮಾನ್ಯವಾಗಿ ಸಂಸತ್ತಿನ ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಗಳಿಗೆ ಕಳುಹಿಸಲಾದ ಮಸೂದೆಗಳನ್ನು ಈ ಸದಸ್ಯರು ಸಂಪೂರ್ಣವಾಗಿ ತನಿಖೆ ಮಾಡುತ್ತಾರೆ. ಅವರು ತಮ್ಮ ವರದಿಯಲ್ಲಿ ಹಲವು ದೃಷ್ಟಿಕೋನಗಳ ಕುರಿತು ಸ್ವತಂತ್ರ ಮೌಲ್ಯಮಾಪನ ಮಾಡುತ್ತಾರೆ. ಆದರೆ, ಸಮಿತಿಯು ಇಂತಹ ಯಾವುದೇ ಸಾಮೂಹಿಕ, ಸ್ವತಂತ್ರ ಮೌಲ್ಯಮಾಪನವನ್ನು ಮಾಡಿಲ್ಲವೆಂಬುದು ತಿಳಿದುಬಂದಿದೆ. ಕಾಂಗ್ರೆಸ್, ಟಿಎಂಸಿ ಹಾಗೂ ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ಪ್ರಾಸಂಗಿಕವಾಗಿ ಆರು ಸದಸ್ಯರು ಅಸಮ್ಮತಿ ಸೂಚಿಸಿದ್ದಾರೆ. ಅಲ್ಲದೆ, ತಿದ್ದುಪಡಿ ಪ್ರಸ್ತಾವಗಳು 2022ರ ಜೂನ್‌ನಿಂದ ಸಾರ್ವಜನಿಕ ವಲಯದಲ್ಲಿವೆ. ಎನ್‌ಜಿಒಗಳು, ಪರಿಸರವಾದಿಗಳು ಹಾಗೂ ಆದಿವಾಸಿ-ಬುಡಕಟ್ಟು ಸಮುದಾಯಗಳು ತಮ್ಮ ಆಕ್ಷೇಪಗಳನ್ನು ಕೂಡ ಸೂಚಿಸಿವೆ.

jammu forest

ತಿದ್ದುಪಡಿ ಪ್ರಸ್ತಾಪಗಳು ಹಿಮಾಲಯನ್, ಟ್ರಾನ್ಸ್-ಹಿಮಾಲಯನ್ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಗಮನಾರ್ಹ ಅರಣ್ಯಗಳಿಗೆ ಹಾನಿಕಾರಕ ಎಂಬ ಅಭಿಪ್ರಾಯ ಬಹುತೇಕ ಅಕ್ಷೇಪಗಳಲ್ಲಿ ವ್ಯಕ್ತವಾಗಿದೆ. ದುರ್ಬಲ ಪರಿಸರ ಮತ್ತು ಭೂವೈಜ್ಞಾನಿಕ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯತೆಗೆ ಅಪಾಯವನ್ನು ಒಡುತ್ತವೆ. ಹವಾಮಾನ ವೈಪರೀತ್ಯಗಳನ್ನು ಪ್ರಚೋದಿಸುತ್ತದೆ ಎಂದು ಆಕ್ಷೇಪಗಳು ಎತ್ತಿ ಹೇಳಿವೆ.

ಅಲ್ಲದೆ, ಅರಣ್ಯ ಭೂಮಿಯ ಗಮನಾರ್ಹ ಭಾಗಗಳನ್ನು ಮತ್ತು ಅನೇಕ ಜೀವವೈವಿಧ್ಯದ ‘ಹಾಟ್ ಸ್ಪಾಟ್‌’ಗಳನ್ನು ಮಾರಾಟ ಮಾಡಲು, ಇತರ ಉದ್ದೇಶಗಳಿಗೆ ಬಳಸಿಕೊಳ್ಳಲು ತಿದ್ದುಪಡಿಯು ಅವಕಾಶ ನೀಡುತ್ತದೆ. ಈ ಕಾರಣದಿಂದ ಪರಿಸರ ವಿರೋಧಿಯಾಗಿದೆ ಎಂದೂ ತಕರಾರು ಎತ್ತಲಾಗಿದೆ.

ಆದರೂ, ಜಂಟಿ ಸಂಸದೀಯ ಸಮಿತಿಯ ವರದಿಯು ಈ ಎಲ್ಲ ಆಕ್ಷೇಪಗಳು ಮತ್ತು ತಕರಾರುಗಳನ್ನು ಸಾರಾಸಗಟಾಗಿ ಕಡೆಗಣಿಸಿದೆ.

“ಗೋದವರ್ಮನ್ ತೀರ್ಪನ್ನು ದುರ್ಬಲಗೊಳಿಸುದನ್ನು, ಅರಣ್ಯ ಭೂಮಿಯನ್ನು ದುರುಪಯೋಗವನ್ನು ತಪ್ಪಿಸಲು ತಿದ್ದುಪಡಿಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಗಡಿಭಾಗದಲ್ಲಿನ ವಿನಾಯಿತಿಗಳು ಖಾಸಗಿ ಸಂಸ್ಥೆಗಳಿಗೆ ಲಭ್ಯವಿರುವುದಿಲ್ಲ” ಎಂದು ವಾದಿಸಿ ಸಮಿತಿಯ ವರದಿಯು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X