ದಾವಣಗೆರೆ ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ನಡೆದ (NFIW)ರಾಷ್ಟ್ರೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಮಿತಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಮಹಿಳಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೂಡ್ಲಿಗಿ ರೇಣುಕಮ್ಮ, “ಮಹಿಳೆಯರು ತಮ್ಮ ಶಕ್ತಿಯನ್ನು ನಂಬಿ ಬದುಕು ಸಾಗಿಸಬೇಕು, ಮೂಡ ನಂಬಿಕೆಗಳಿಗೆ ಬಲಿಯಾಗಬಾರದು, ಮೂಡ ನಂಬಿಕೆಗಳನ್ನು ಬಿತ್ತುವ ಜನರಿಂದ ಮಹಿಳೆಯರು ಜಾಗೃತಗೊಂಡು ಅಂತಹ ಜನರಿಂದ ದೂರ ಇರಬೇಕು” ಎಂದು ಕರೆ ನೀಡಿದರು.

“ಮಹಿಳೆಯರ ಮೇಲಿನ ದೌರ್ಜನ್ಯ , ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಲು ಮಹಿಳಾ ನಾಯಕರು ಮುಂದಾಗಬೇಕು, ಮಹಿಳೆಯರು ಆರ್ಥಿಕವಾಗಿ ಸಬಲರಾದಂತೆ ಆಕರ್ಷಕ ಮಾದರಿಯ ಜೀವನ ನಡೆಸುವುದರಿಂದ ದೂರ ಇದ್ದು ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಾ ಜೊತೆಗೆ ರಾಜಕೀಯ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕರೆ ಮೀಸಲಾತಿ ನಿಲ್ಲಿಸೋಣ, ಆದರೆ ಪ್ರಾತಿನಿಧ್ಯವಿಲ್ಲ; ದಿನೇಶ್ ಅಮೀನ್ ಮಟ್ಟು
ಇದೇ ವೇಳೆ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ – ಸರೋಜಾ, ಉಪಾಧ್ಯಕ್ಷರುಗಳಾಗಿಜಗಲೂರು ಹಾಲಮ್ಮ, ಪಲ್ಲಾಗಟ್ಟೆ ನಾಗರತ್ನ, ಮುಕ್ತೇನಹಳ್ಳಿ ಸರೋಜಮ್ಮ, ಮಂಜುಳಾ, ಚಂದ್ರಕಲಾ ಟಿಸಿ, ನಿರ್ಮಲಾರಾಜ್ ಚನ್ನಗಿರಿ, ಟಿವಿ ನಾಗರತ್ನಮ್ಮಸಹಕಾರ್ಯದರ್ಶಿಗಳಾಗಿ ಹೆಚ್ ಜಿ ಮಂಜುಳಾ, ಸವಿತಾ ಎಂ, ಬಸವನಕೋಟೆ ಮಂಜುಳಾ, ಶಶಿಕಲಾ ಜಗಳೂರು, ನಿರ್ಮಲ ಕೆ ಸಿ, ಖಜಾಂಚಿಯಾಗಿ ಮಾಯಕೊಂಡ ಮಮತಾರನ್ನು ಆಯ್ಕೆಮಾಡಲಾಗಿದೆ.

ಸಭೆ ಅಧ್ಯಕ್ಷತೆಯನ್ನು ಜಗಳೂರು ಪುಷ್ಪ ವಹಿಸಿದ್ದರು. ಸಭೆಯಲ್ಲಿ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಸಹಕಾರ್ಯದರ್ಶಿ ಹರಪನಹಳ್ಳಿ ಪುಷ್ಪ, ಮಹಿಳಾ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ಎಸ್ ಮಲ್ಲಮ್ಮ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್, ಸಿಪಿಐ ಮುಖಂಡರಾದ ಜಿ ಎಲ್ಲಪ್ಪ, ನರೇಗಾ ರಂಗನಾಥ, ಮಹಿಳಾ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಹೊಸಳ್ಳಿ ಮಂಜುಳಾ ಭಾಗವಹಿಸಿದ್ದರು.