ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕಂಪ್ಲಾಪುರ ಗ್ರಾಮದ ಎಂ ಆರ್ ನೋಬಲ್ ಶಾಲಾ ವಾಹನವು ಹುಣಸೂರು ತಾಲ್ಲೂಕಿನ ಹಬ್ಬನಕುಪ್ಪೆ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.
ಬುಧವಾರ ಬೆಳಿಗ್ಗೆ ಶಾಲೆಗೆ ತೆರಳುವ ವೇಳೆ, ಹೊರವಲಯದ ಘಟನೆ ನಡೆದಿದ್ದು, ಆ ವಾಹನದಲ್ಲಿ 20 ಮಕ್ಕಳು ತೆರಳುತ್ತಿದ್ದರು. ಎಲ್ಲರಿಗೂ ಗಾಯವಾಗಿದೆ. ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ.
ಚಾಲಕ ಸಹ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಿಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.