ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣವಾಗುವಂತೆ ವಿದ್ಯಾರ್ಥಿಗಳು, ಯುವಸಮೂಹ ಜಾಗೃತಿ ಮೂಡಿಸಬೇಕು ಎಂದು ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಸಲಹೆ ನೀಡಿದರು.
ಜಗಳೂರು ಪಟ್ಟಣದ ಮಾಲತಿ ಪದವಿ ಪೂರ್ವ ಕಾಲೇಜಿನಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. “ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಯಾಗಬೇಕು. ಮಣ್ಣಿನಲ್ಲಿ ಕೊಳೆಯದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಬಳಕೆ ನಿಷೇಧಿಸಬೇಕು” ಎಂದು ತಿಳಿಸಿದರು.
“ಗ್ರಾಮೀಣ ಭಾಗದ ಅಂಗಡಿ, ಹೊಟೆಲ್, ಮನೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಮಾಡದಂತೆ ವಿದ್ಯಾರ್ಥಿಗಳು ಮನವರಿಕೆ ಮಾಡಬೇಕು. ವಿಷಪೂರಿತ ಅನಿಲ ವಿಸರ್ಜಿಸುವ ವಸ್ತುಗಳಿಂದ ಪರಿಸರ ಹಾನಿ ಉಂಟಾಗುತ್ತದೆ. ಒಣಕಸ, ಹಸಿಕಸ ಬೇರ್ಪಡಿಸಿ ಕಸವಿಲೇವಾರಿ ವಾಹನಗಳಲ್ಲಿ ಹಾಕಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸರ್ಕಾರಿ ಭೂಮಿಯನ್ನು ಗೋಶಾಲೆ ನಿರ್ಮಾಣಕ್ಕೆ ಕೊಡಬಾರದು; ಒತ್ತಾಯ
“ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಎನ್‌ಎಸ್‌ಎಸ್ ನಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು. ಪರಿಸರ ಸ್ವಚ್ಛತೆ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು” ಎಂದು ಕಿವಿಮಾತು ಹೇಳಿದರು.
ಸೇವಾಲಾಲ್ ಸಂಸ್ಥೆಯ ಕಾರ್ಯದರ್ಶಿ ಮುನಿಯ ನಾಯ್ಕ, ಆರೋಗ್ಯ ನಿರೀಕ್ಷಕ ಕಿಫಾಯತ್, ಅಲೆಮಾರಿ ಸಂಘದ ಶಿವಣ್ಣ, ಪ್ರಾಂಶುಪಾಲ ಶಿವಕುಮಾರ ನಾಯ್ಕ, ಉಪನ್ಯಾಸಕ ಜಯಣ್ಣ, ಸರ್ವಣ್, ಮಹಾಂತೇಶ್ ಇದ್ದರು.