ಕುರಿಗಾಹಿ ಕುಟುಂಬದ ಮಹಿಳೆಯೊಬ್ಬರು ಮೂವರು ಪುತ್ರಿಯರೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ.
ಸಿದ್ದವ್ವ ಅಲಿಯಾಸ್ ಲಕ್ಷಿ (29), ಪುತ್ರಿಯರಾದ ಅಭಿಜ್ಞಾ (7) ಅವನಿ (5) ಮತ್ತು ಆರಾಧ್ಯ (3) ಮೃತರು. ಮಂಗಳವಾರ(ಜೂ.17) ಸಿದ್ದವ್ವ ಪುತ್ರಿಯರೊಂದಿಗೆ ಕಾಣೆಯಾಗಿದ್ದರು. ಬುಧವಾರ ಬೆಳಿಗ್ಗೆ ಕೃಷಿ ಹೊಂಡದಲ್ಲಿ ಮೃತ ದೇಹಗಳು ಪತ್ತೆಯಾಗಿವೆ.
ಬೆಳಗಾವಿ ಜಿಲ್ಲೆಯ ಹೊಸೂರ ಗ್ರಾಮದ ಸಿದ್ದವ್ವ ಮತ್ತು ಸಂಜಯ ಹತ್ತು ವರ್ಷದ ಹಿಂದೆ ವಿವಾಹವಾಗಿದ್ದರು.ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗ್ರಾಮದಲ್ಲಿ ಕುಟುಂಬ ಬೀಡುಬಿಟ್ಟಿತ್ತು.
ಪತಿಯ ಕಿರುಕುಳ ಆತ್ಮಹತ್ಯೆಗೆ ಕಾರಣವೆಂದು ಸಿದ್ದವ್ವ ತಾಯಿ ರೇಣುಕಾ ದೂರು ನೀಡಿದ್ದಾರೆ. ಸಂಜಯನನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಯಾದಗಿರಿ | ಜಮೀನು ವಿವಾದ : ತಮ್ಮನನ್ನು ಕೊಂದ ಅಣ್ಣ