ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಹಿನ್ನೋಟದ ಸಮಸ್ಯೆಯೆಂದರೆ 1956ರ ಮೊದಲು ಕನ್ನಡ ನಾಡು 29 ಭಾಗಗಳಲ್ಲಿ ಹಂಚಿಹೋಗಿತ್ತು. ಅಲ್ಲದೆ ಅದರಲ್ಲಿ ಕೆಲವು ವಿಸ್ತಾರವಾದ ಪ್ರಾಂತಗಳು ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ನಿಜಾಮರ ಆಳ್ವಿಕೆಯ ಹೈದರಾಬಾದ್ ಕರ್ನಾಟಕ ಹೀಗೆ ವಿಶಾಲವಾದ ಆಡಳಿತ ವ್ಯವಸ್ಥೆಗೆ ಸೇರಿದ್ದವು ಮತ್ತು ತಮ್ಮದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದವು. ಉದಾಹರಣೆಗೆ, ಹೈದರಾಬಾದ್ ಕರ್ನಾಟಕದಲ್ಲಿ (ಇಂದಿನ ಕಲ್ಯಾಣ ಕರ್ನಾಟಕ) ಉರ್ದು ಕಲಿಕೆಯ ಮಾಧ್ಯಮವಾಗಿತ್ತು, ಉನ್ನತ ಶಿಕ್ಷಣದಲ್ಲಿ ಕೂಡ. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಆಗುವ ಮೊದಲು ಉನ್ನತ ಶಿಕ್ಷಣವು…

ಪ್ರೊ. ರಾಜೇಂದ್ರ ಚೆನ್ನಿ
ಪ್ರೊ. ರಾಜೇಂದ್ರ ಚೆನ್ನಿ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು. ಕುದುರೆಮುಖದಲ್ಲಿ ಗಣಿಗಾರಿಕೆ ವಿರುದ್ಧ ಮತ್ತು ತುಂಗಾ ನದಿಯನ್ನು ಉಳಿಸಲು ಹಲವಾರು ಜನಾಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೇಶೀವಾದ, ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ, ಸಾಹಿತ್ಯ ವಿಮರ್ಶೆ, ಮಾಸ್ತಿ ಕತೆಗಳು: ಒಂದು ಅಧ್ಯಯನ, ದೊಡ್ಡ ಮರ, ಕರುಳ ಬಳ್ಳಿಯ ಸೊಲ್ಲು, ನಡುಹಗಲಿನಲ್ಲಿ ಕಂದೀಲುಗಳು, ಮಳೆಯಲ್ಲಿ ಬಂದಾತ ಸೇರಿದಂತೆ ಹಲವು ಕನ್ನಡ ಮತ್ತು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ.